
ಕೃಷಿ ಸಹಕಾರ ಸಂಘ: ಸಾಲ ಪಡೆದಿರುವ ಸದಸ್ಯ ಮೃತಪಟ್ಟರೆ ₹50 ಸಾವಿರ ಮನ್ನಾ
ತುರುವೇಕೆರೆ: ಸಂಘದ ಸದಸ್ಯತ್ವ ಪಡೆದು ಸಾಲ ಪಡೆದಿರುವ ಸದಸ್ಯ ಮರಣ ಹೊಂದಿದಲ್ಲಿ ಆತ ಮಾಡಿದ್ದ ಸಾಲದ ಬಾಬ್ತಿನಲ್ಲಿ ₹50 ಸಾವಿರ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಬಾಣಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕಂಟ್ಲಿ ತಿಳಿಸಿದರು.
ತಾಲ್ಲೂಕಿನ ಬಾಣಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಸಂಘದ ಸದಸ್ಯರು ಮೃತಪಟ್ಟಲ್ಲಿ ಅವರು ಮಾಡಿರುವ ಸಾಲದ ಪೈಕಿ ₹25 ಸಾವಿರ ಮನ್ನಾ ಮಾಡಲು ಸರ್ಕಾರ ಆದೇಶಿಸಿದೆ. ನಮ್ಮ ಸಂಘವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಘದ ವತಿಯಿಂದ ₹25 ಸಾವಿರ ಹೆಚ್ಚುವರಿಯಾಗಿ ಮನ್ನಾ ಘೋಷಿಸಿದ್ದು, ಒಟ್ಟು ₹50 ಸಾವಿರ ಮನ್ನಾ ಆಗಲಿದೆ ಎಂದರು.
ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷೆ ಶಾರದಮ್ಮ, ನಿರ್ದೇಶಕರಾದ ದೊರೆರಾಜು, ಭೈರಪ್ಪಾಜಿ, ಪಾಂಡುರಂಗಯ್ಯ, ನಿಜಗುಣ ಮೂರ್ತಿ, ಗಂಗಾಧರಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಉಪಸ್ಥಿತರಿದ್ದರು.