ತುಮಕೂರಿನಲ್ಲಿ ಕೋಳಿ ಮಾಂಸ ಮತ್ತೆ ದುಬಾರಿ, ತರಕಾರಿ ಬೆಲೆಯೂ ಏರಿಕೆ

ತುಮಕೂರಿನಲ್ಲಿ ಕೋಳಿ ಮಾಂಸ ಮತ್ತೆ ದುಬಾರಿ, ತರಕಾರಿ ಬೆಲೆಯೂ ಏರಿಕೆ

ತುಮಕೂರಿನಲ್ಲಿ ಕೋಳಿ ಮಾಂಸ ಮತ್ತೆ ದುಬಾರಿ, ತರಕಾರಿ ಬೆಲೆಯೂ ಏರಿಕೆ

ತುಮಕೂರು:‌‌ ಕಳೆದ ವಾರ ಇಳಿಕೆ ಕಂಡಿದ್ದ ಕೋಳಿ ಮಾಂಸ ಈಗ ಮತ್ತೆ ದುಬಾರಿಯಾಗಿದೆ. ಬೇಳೆ, ಕಾಳು ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಾಸ್ತಿಯಾಗಿದ್ದ ಬ್ಯಾಡಗಿ ಮೆಣಸಿನಕಾಯಿ ಸ್ಥಿರತೆ ಕಾಯ್ದುಕೊಂಡಿದೆ. ದಾಳಿಂಬೆ, ಸೀಬೆ ಗಗನಮುಖಿಯಾಗಿವೆ.

ಹಿಂದಿನ ಎರಡು ವಾರಗಳಿಗೆ ಹೋಲಿಸಿದರೆ ಕೋಳಿ ಮಾಂಸ ಪ್ರತಿ ಕೆ.ಜಿಗೆ ₹50–₹60 ಜಾಸ್ತಿಯಾಗಿದೆ. ಕಳೆದ ವಾರ ಬ್ರಾಯ್ಲರ್‌ ಕೋಳಿ ಕೆ.ಜಿ ₹130 ಇತ್ತು, ಶನಿವಾರ ಅದು ₹150ಕ್ಕೆ ತಲುಪಿತ್ತು. ರೆಡಿ ಚಿಕನ್‌ ಕೆ.ಜಿ ₹180ರಿಂದ ₹240ಕ್ಕೆ ಜಿಗಿದಿದೆ. ಸ್ಕಿನ್‌ಲೆಸ್‌ ₹200ರಿಂದ ₹260ಕ್ಕೆ ಹೆಚ್ಚಳವಾಗಿದೆ. ಫಾರಂ ಕೆ.ಜಿ ₹130ಕ್ಕೆ ಜನ ಖರೀದಿಸುತ್ತಿದ್ದಾರೆ.

ಟೊಮೆಟೊ ಏರಿಕೆಯತ್ತ ಹೆಜ್ಜೆ ಹಾಕಿದ್ದು, ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ ₹30–40 ಇದೆ. ತಿಂಗಳ ಹಿಂದೆ ಕೆ.ಜಿ ₹15–₹20ಕ್ಕೆ ಮಾರಾಟವಾಗುತ್ತಿತ್ತು. ತುಟ್ಟಿಯಾಗಿದ್ದ ಬಟಾಣಿ ಕುಸಿತ ಕಾಣುತ್ತಿದೆ. ₹180ರಿಂದ ₹120ಕ್ಕೆ ಇಳಿಕೆಯಾಗಿದೆ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಯಥಾಸ್ಥಿತಿ ಕಾಯ್ದುಕೊಂಡರೆ, ನಿಂಬೆ ದರ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಈಗ ಒಂದು ನಿಂಬೆ ಹಣ್ಣಿಗೆ ₹7–₹8 ಇದೆ.

ಸೊಪ್ಪಿನ ಧಾರಣೆಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಹಳೆಯ ದರವೇ ಮುಂದುವರಿದಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–₹40, ಮೆಂತ್ಯ ಕೆ.ಜಿ ₹50–₹60, ಸಬ್ಬಕ್ಕಿ ಕೆ.ಜಿ ₹30–₹40, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ನಿರಂತರವಾಗಿ ಏರಿಕೆಯತ್ತ ಸಾಗಿದ್ದ ಬೆಲ್ಲ ಇಳಿಕೆಯತ್ತ ಮುಖ ಮಾಡಿದೆ. ಕಳೆದ ವಾರಕ್ಕಿಂತ ₹5 ಕಡಿಮೆಯಾಗಿದೆ. ಸದ್ಯ ಒಂದು ಕೆ.ಜಿ ಬೆಲ್ಲ ₹55–₹65 ಇದೆ. ಉದ್ದಿನಬೇಳೆ, ತೊಗರಿಬೇಳೆ, ಹೆಸರುಕಾಳು, ಕಡಲೆಬೀಜ ತುಟ್ಟಿಯಾಗುತ್ತಿದೆ. ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆಯಾಗಿದೆ. ಗೋಲ್ಡ್‌ ವಿನ್ನರ್‌ ಕೆ.ಜಿ ₹166, ಕಡಲೆಕಾಯಿ ಎಣ್ಣೆ ಕೆ.ಜಿ ₹184–₹185, ಪಾಮಾಯಿಲ್ ಕೆ.ಜಿ ₹143–₹146 ಇದೆ.

ಮಸಾಲೆ ಪದಾರ್ಥ: ದುಬಾರಿಯಾಗಿದ್ದ ಬ್ಯಾಡಗಿ ಮೆಣಸಿನಕಾಯಿ ಬೆಲೆ ಕಡಿಮೆಯಾಗಿಲ್ಲ. ದನಿಯ ಕೆ.ಜಿ ₹190–₹230, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹520–₹550, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹240–₹280, ಕಾಳುಮೆಣಸು ಕೆ.ಜಿ ₹740–₹780, ಜೀರಿಗೆ ₹260–₹280, ಚಕ್ಕೆ ಕೆ.ಜಿ ₹ 260–₹280.

ಲವಂಗ ಕೆ.ಜಿ ₹950–₹980, ಗುಣಮಟ್ಟದ ಗಸಗಸೆ ಕೆ.ಜಿ ₹1,450–₹1,600, ಏಲಕ್ಕಿ ₹3,800– ₹4,200, ಬಾದಾಮಿ ಕೆ.ಜಿ ₹1,080–₹1,120, ಗೋಡಂಬಿ ಕೆ.ಜಿ ₹780–₹980, ಒಣ ದ್ರಾಕ್ಷಿ ಕೆ.ಜಿ ₹360–₹980ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಮೀನು ದರ ಇಳಿಕೆಯಾಗಿದೆ. ಅಂಜಲ್ ಕೆ.ಜಿ ₹900, ಬಿಳಿಮಾಂಜಿ ಕೆ.ಜಿ ₹1,200, ಕಪ್ಪುಮಾಂಜಿ ಕೆ.ಜಿ ₹850, ಬೂತಾಯಿ ಕೆ.ಜಿ ₹320 ಇಂಡಿಯನ್‌ ಸಾಲ್ಮನ್‌ ಕೆ.ಜಿ ₹990, ಬಂಗುಡೆ ಕೆ.ಜಿ ₹280, ಸೀಗಡಿ ಕೆ.ಜಿ ₹570–₹750, ಏಡಿ ₹680ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣ ಪಕ್ಕದ ಮತ್ಸ್ಯದರ್ಶಿನಿಯಲ್ಲಿ ಸಿಗುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ