Tulsi Leave Rules: ತುಳಸಿ ಎಲೆ ಕೀಳುವುದಕ್ಕೂ ಕ್ರಮವಿದೆ, ತಪ್ಪಿದರೆ ಮುನಿಯುತ್ತಾಳೆ ಲಕ್ಷ್ಮೀ, ಬೆನ್ನು ಹತ್ತುತ್ತದೆ ಸೋಲು

Tulsi Leave Rules: ತುಳಸಿ ಎಲೆ ಕೀಳುವುದಕ್ಕೂ ಕ್ರಮವಿದೆ, ತಪ್ಪಿದರೆ ಮುನಿಯುತ್ತಾಳೆ ಲಕ್ಷ್ಮೀ, ಬೆನ್ನು ಹತ್ತುತ್ತದೆ ಸೋಲು

Tulsi Leave Rules: ತುಳಸಿ ಎಲೆ ಕೀಳುವುದಕ್ಕೂ ಕ್ರಮವಿದೆ, ತಪ್ಪಿದರೆ ಮುನಿಯುತ್ತಾಳೆ ಲಕ್ಷ್ಮೀ, ಬೆನ್ನು ಹತ್ತುತ್ತದೆ ಸೋಲು

ಹಿಂದೂ ಸನಾತನ ಧರ್ಮದಲ್ಲಿ, ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವ ಇದೆ. ಇದನ್ನು ಲಕ್ಷ್ಮೀ ದೇವಿಯ ರೂಪ ಎಂದೇ ಕರೀತಾರೆ. ಜ್ಯೋತಿಷ್ಯ ಮತ್ತು ವಾಸ್ತು ಎರಡರಲ್ಲೂ ತುಳಸಿ ಗಿಡಕ್ಕೆ ವಿಶೇಷ ಮನ್ನಣೆ ಇದೆ. ಕೆಲವೊಂದು ಪೂಜೆಗಳಲ್ಲಿ ತುಳಸಿ ದಳಗಳೂ ಬೇಕೇ ಬೇಕು. ಎಲ್ಲಾ ಪೂಜೆಗಳಿಗೆ ನೈವೇದ್ಯ ಮಾಡುವಾಗ ತುಳಸಿ ದಳಗಳನ್ನು ಅರ್ಪಿಸೋದು ವಾಡಿಕೆ. ತುಳಸಿ ದಳವಿಲ್ಲದೆ ನೈವೇದ್ಯ ಅರ್ಪಿಸಿದರೆ ಪೂಜೆ ಸಂಪನ್ನವಾಗುವುದಿಲ್ಲ ಎಂದು ಹೇಳಲಾಗುತ್ತದೆ.

ಧರ್ಮಶಾಸ್ತ್ರಗಳು ಮತ್ತು ಪದ್ಮ ಪುರಾಣದಲ್ಲಿ ತುಳಸಿ ಎಲೆಗಳನ್ನು ಯಾವಾಗ ಮತ್ತು ಹೇಗೆ ಕೀಳಬೇಕು, ತುಳಸಿ ದಳಗಳನ್ನು ಕೀಳುವಾಗ ಅನುಸರಿಸಬೇಕಾಗುವ ನಿಯಮ ಯಾವುದು ಎನ್ನುವುದನ್ನು ವಿವರಿಸಿ ಹೇಳಲಾಗಿದೆ.

ಸರಿಯಾದ ನಿಯಮಗಳನ್ನು ಪಾಲಿಸದೆ ತುಳಸಿ ಎಲೆಗಳನ್ನು ಕೀಳಿದರೆ ಮಾಡುವ ಪೂಜೆಯ ಫಲ ಕೂಡಾ ಸಿಗುವುದಿಲ್ಲ. ಜೊತೆಗೆ ಗಂಭೀರ ದೋಷಗಳ ಅಪಾಯವೂ ಉಂಟಾಗುತ್ತದೆ ಎಂದು ಹೇಳಲಾಗಿದೆ. ತುಳಸಿ ಎಲೆಗಳನ್ನು ಕೀಳುವ ಮೊದಲು ಪ್ರತಿಯೊಬ್ಬರೂ 5 ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳಲೇಬೇಕು.

ಮಡಿ ಇಲ್ಲದೆ ಹೀಗಬಾರದು ತುಳಸಿ ಬಳಿ

ಮೊದಲೇ ಹೇಳಿದ ಹಾಗೆ ತುಳಸಿ ಬಹಳ ಪವಿತ್ರವಾದ ಸಸ್ಯ. ಹಾಗಾಗಿ ಸ್ನಾನ ಮಾಡದೆ ಅಥವಾ ಮಡಿ ಇಲ್ಲದೆ ತುಳಸಿಯ ಹತ್ತಿರವೂ ಹೋಗಬಾರದು. ಬೆಳಿಗ್ಗೆ ಸ್ನಾನ ಮಾಡದೆ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸದೆ ತುಳಸಿ ಗಿಡವನ್ನು ಮುಟ್ಟುವುದು ಅಥವಾ ದಳಗಳನ್ನು ಕೀಳುವುದು ಮಹಾಪಾಪ ಎಂದು ಹೇಳಲಾಗುತ್ತದೆ. ಹೊರಗೆ ಹೋಗಿ ಬಂದು ನಿಮ್ಮ ಕೈ ಕಾಲುಗಳನ್ನು ತೊಳೆಯದೆ ತುಳಸಿ ಎಲೆಗಳನ್ನು ಕೀಳಿದರೆ ಮನೆಗೆ ಬಡತನ ವಕ್ಕರಿಸುತ್ತದೆ ಎನ್ನುವ ಎಚ್ಚರಿಕೆ ವಾಯು ಪುರಾಣದಲ್ಲಿದೆ.

ಈ ದಿನ ತುಳಸಿ ಮುಟ್ಟಬಾರದು

ಧರ್ಮಶಾಸ್ತ್ರಗಳ ಪ್ರಕಾರ, ನಮಗೆ ಯಾವಾಗ ಬೇಕೋ ಆ ದಿನ ತುಳಸಿ ಎಲೆಗಳನ್ನು ಕೀಳುವಂತಿಲ್ಲ. ಕೀಳುವುದು ಬಿಡಿ ಕೆಲವು ದಿನಗಳಲ್ಲಿ ತುಳಸಿಯನ್ನು ಮುಟ್ಟುವುದು ಕೂಡಾ ಸರಿಯಲ್ಲ. ಏಕಾದಶಿ, ದ್ವಾದಶಿ, ಅಮವಾಸೆ, ಹುಣ್ಣಿಮೆ ಮತ್ತು ಭಾನುವಾರ ಅಪ್ಪಿ ತಪ್ಪಿ ಕೂಡಾ ತುಳಸಿ ಎಲೆಗಳನ್ನು ತೆಗೆಯಬಾರದು. ಅಲ್ಲದೆ, ಸೂರ್ಯಾಸ್ತದ ನಂತರ ಗ್ರಹಣ ಸಮಯದಲ್ಲಿ ಅಥವಾ ರಾತ್ರಿ ವೇಳೆ ತುಳಸಿ ಎಲೆಗಳನ್ನು ಮುಟ್ಟುವುದು ಅಥವಾ ತೆಗೆಯುವುದು ಗಂಭೀರ ಪಾಪ ಎನ್ನುವುದು ನಂಬಿಕೆ. ಒಂದು ವೇಳೆ ಈ ದಿನಗಳಿಗೆ ತುಳಸಿ ಎಲೆ ಬೇಕು ಎಂದಾದರೆ ಅದನ್ನು ಮೊದಲೇ ತೆಗೆದು ಇಟ್ಟುಕೊಂಡಿರಬೇಕು.

ಉಗುರು, ಕತ್ತರಿ ಅಥವಾ ಚಾಕು ಬಳಸಬಾರದು

ತುಳಸಿ ಎಲೆಗಳನ್ನು ತೆಗೆಯುವಾಗ ಯಾವತ್ತೂ ಉಗುರುಗಳನ್ನು ತಾಗಿಸಬಾರದು. ಎರಡು ಬೆರಳುಗಳ ಮಧ್ಯೆ ಎಲೆಗಳನ್ನು ಹಿಡಿದು ಉಗುರು ತಾಕದಂತೆ ಎಲೆಗಳನ್ನು ಕೀಳಬೇಕು. ಮಾತ್ರವಲ್ಲ ಕತ್ತರಿ ಅಥವಾ ಚಾಕುಗಳಂತಹ ಚೂಪಾದ ಲೋಹದ ವಸ್ತುಗಳನ್ನು ಕೂಡಾ ತುಳಸಿ ಎಲೆ ತೆಗೆಯಲು ಬಳಸಬಾರದು. ತುಳಸಿ ಎಲೆಗಳನ್ನು ತೆಗೆಯುವಾಗ ಸಸ್ಯದ ಕಾಂಡ ಅಥವಾ ಸಸ್ಯಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು. ಇನ್ನು ತುಳಸಿ ಎಲೆಗಳನ್ನು ತೆಗೆಯುವಾಗ ಬಲಗೈಯ ಬೆರಳ ತುದಿಯನ್ನು ಮಾತ್ರ ಬಳಸಬೇಕು.

ಕೊಂಬೆಗಳನ್ನು ಮುರಿಯಬೇಡಿ

ತುಳಸಿ ಎಲೆ ಕೀಳುವುದಕ್ಕೂ ಮುನ್ನ ಅನುಮತಿ ಕೇಳುವುದನ್ನು ಮರೆಯಬೇಡಿ. ತುಳಸಿ ಎಲೆಗಳನ್ನು ಕತ್ತರಿಸುವ ಮೊದಲು, ತುಳಸಿಗೆ ಭಕ್ತಿಯಿಂದ ನಮಸ್ಕರಿಸಿ. ಯಾವ ಉದ್ದೇಶಕ್ಕಾಗಿ ಎಲೆಗಳನ್ನು ತೆಗೆಯುತ್ತಿದ್ದೀರಿ ಎಂದು ಅನುಮತಿ ಕೇಳಬೇಕು. ಎಡಗೈಯಿಂದ ಕೊಂಬೆಯನ್ನು ಹಿಡಿದು ಬಲಗೈಯಿಂದ ಎಲೆಗಳನ್ನು ಕತ್ತರಿಸಬೇಕು. ಹೀಗೆ ಎಲೆಗಳನ್ನು ತೆಗೆಯುವಾಗ ಕೊಂಬೆಗಳು ಮುರಿದರೆ, ವಿಷ್ಣುವಿನ ಹೃದಯಕ್ಕೆ ನೋವುಂಟಾಗುತ್ತದೆ ಎಂದು ಹೇಳಲಾಗುತ್ತದೆ. ಎಲೆ ಕೀಳಿದ ನಂತರ ತುಳಸಿ ದೇವಿಯ ಬಳಿ ಕ್ಷಮೆ ಕೋರುವ ಮಂತ್ರವನ್ನು ಪಠಿಸಬೇಕು.

ದೈವಿಕ ಪೂಜೆ, ನೈವೇದ್ಯ ಅರ್ಪಿಸುವಿಕೆ ಅಥವಾ ತುರ್ತು ಆಯುರ್ವೇದ ಔಷಧೀಯ ಅಗತ್ಯಗಳನ್ನು ಹೊರತುಪಡಿಸಿ ಅನಗತ್ಯವಾಗಿ ತುಳಸಿ ಎಲೆಗಳನ್ನು ಕೀಳಬಾರದು. ತುಳಸಿ ಎಲೆಗಳು ಒಣಗಿದರೂ ಅವು ಪೂಜೆಗೆ ಪವಿತ್ರವೇ. ತುಳಸಿಯ ಪವಿತ್ರತೆ ಕಡಿಮೆಯಾಗುವುದೇ ಇಲ್ಲ.

ನಿಯಮಗಳನ್ನು ಪಾಲಿಸಿದರೆ ಮಾತ್ರ ಸಿಗುವುದು ಪೂಜಾ ಫಲ : ತುಳಸಿಯನ್ನು ಭಕ್ತಿಯಿಂದ ಸೇವಿಸುವುದು ಎಷ್ಟು ಮುಖ್ಯವೋ, ಶಾಸ್ತ್ರಗಳ ಪ್ರಕಾರ ತುಳಸಿ ಎಲೆಗಳನ್ನು ನಿಯಮ ಪ್ರಕಾರವಾಗಿ ಕೀಳುವುದು ಕೂಡಾ ಅಷ್ಟೇ ಮುಖ್ಯ. ಸರಿಯಾದ ವಿಧಾನವನ್ನು ಅನುಸರಿಸಿ ತುಳಸಿ ಎಲೆಗಳನ್ನು ತೆಗದು ದೇವರಿಗೆ ಪೂಜೆಯಲ್ಲು ಅರ್ಪಿಸಿದಾಗ ಮಾತ್ರ ಪೂಜೆ ಪೂರ್ಣಗೊಳ್ಳುತ್ತದೆ ಫಲ ಕೊಡುತ್ತದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ