
Karnataka Rains: ಗದಗ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಮಳೆ, ಇತರೆಡೆ ಎಲ್ಲಿ
ಬೆಂಗಳೂರು: ಕರ್ನಾಟಕದ ಗದಗ ಜಿಲ್ಲೆಯ ಹೆಚ್ಚಿನ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ವಿವಿಧೆಡೆ ಮಳೆಯಾಗಿದ್ದು, ಗದಗ ಜಿಲ್ಲೆಯ ಹುಲಕೋಟಿಯಲ್ಲಿ 38.5 ಮಿ.ಮೀ ಅತ್ಯಧಿಕ ಮಳೆಯಾದ ವರದಿಯಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ 37 ಮಿ.ಮೀ, ಗದಗ ತಾಲ್ಲೂಕಿನ ಅಸುಂಡಿಯಲ್ಲಿ 35.25 ಮಿ.ಮೀ ಮಳೆಯಾಗಿದೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ರಾಗಿಹಳ್ಳಿಯಲ್ಲಿ 35 ಮಿ.ಮೀ, ರೋಣ ತಾಲ್ಲೂಕಿನ ಚಿಕ್ಕಮಣ್ಣೂರಿನಲ್ಲಿ 34 ಮಿ.ಮೀ. ರಾಯಚೂರು ತಾಲ್ಲೂಕಿನ ಕಮಲಾಪುರದಲ್ಲಿ 31.5 ಮಿ.ಮೀ, ರೋಣ ತಾಲ್ಲೂಕಿನ ಕೌಜಗೇರಿಯಲ್ಲಿ 31 ಮಿ.ಮೀ, ಗದಗ ತಾಲ್ಲೂಕಿನ ಬಿಂಕದಕಟ್ಟಿಯಲ್ಲಿ 27 ಮಿ.ಮೀ ಮಳೆಯಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲ್ಲೂಕಿನ ಹೊಸ ಕಬ್ಬಾಳಿನಲ್ಲಿ 26.5 ಮಿ.ಮೀ, ಗದಗ ತಾಲ್ಲೂಕಿನ ಕಡಾಡಿ ಹಾಗೂ ರಾಯಚೂರು ತಾಲ್ಲೂಕಿನ ಮರ್ಚಾತಲದಲ್ಲಿ ತಲಾ 25 ಮಿ.ಮೀ, ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ತಲ್ಲೂರಿನಲ್ಲಿ 24.5 ಮಿ. ಮೀ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕುಳಾಯಿಯಲ್ಲಿ 23 ಮಿ.ಮೀ, ರಾಯಚೂರು ತಾಲ್ಲೂಕಿನ ಯರಗೇರಾ, ಬಂಟ್ವಾಳ ತಾಲ್ಲೂಕಿನ ಪೆರುವಾಯಿಯಲ್ಲಿ ತಲಾ 22 ಮಿ.ಮೀ, ಮಂಗಳೂರಿನ ಕಂದಾವರದಲ್ಲಿ 21.5 ಮಿ.ಮೀ ಮಳೆಯಾಗಿದೆ.
ರೋಣ ತಾಲ್ಲೂಕಿನ ನರೇಗಲ್ ಹಾಗೂ ಜಕ್ಕಲಿಯಲ್ಲಿ ತಲಾ 20.5 ಮಿ.ಮೀ, ಕುರಡಗಿಯಲ್ಲಿ 20 ಮಿ.ಮೀ ಮಳೆಯಾಗಿದೆ.