
ಮೈಸೂರು ದಸರಾ: ಗಜಪಡೆಯಲ್ಲಿ 'ಸುಗ್ರೀವ' ಹೆಚ್ಚು ತೂಕ
ಮೈಸೂರು: ದಸರಾ ಆನೆಗಳ ಎರಡನೇ ತಂಡದಲ್ಲಿ ಬಂದ 'ಸುಗ್ರೀವ' 5,850 ಕೆ.ಜಿ ತೂಗುವ ಮೂಲಕ ಗಜಪಡೆಗಳಲ್ಲಿ ಹೆಚ್ಚು ತೂಕ ಹೊಂದಿದೆ.
ಮೊದಲನೇ ತಂಡದಲ್ಲಿ ಬಂದಿದ್ದ ಶ್ರೀಕಂಠ ಆನೆಯು 5,770 ಕೆ.ಜಿ ತೂಗುವ ಮೂಲಕ ಹೆಚ್ಚು ತೂಕ ಇರುವ ಆನೆ ಎಂದು ಗುರುತಿಸಲ್ಪಟ್ಟಿದ್ದ. ಆದರೆ ಸುಗ್ರೀವ ಅದಕ್ಕಿಂತ 80 ಕೆ.ಜಿ ಹೆಚ್ಚು ತೂಗಿದ್ದಾನೆ.
ಎರಡನೇ ತಂಡದಲ್ಲಿದ್ದ ಚೈತ್ರ ಆನೆ 3,295 ಕೆ.ಜಿ ಹಾಗೂ ರೂಪಾ ಆನೆ 3,260 ಕೆ.ಜಿ ತೂಗಿವೆ.