
ಲಕ್ಕವಳ್ಳಿ ಗ್ರಾಮದಲ್ಲಿ ಮಹಾಗಣಪತಿ ಮೂರ್ತಿ ವಿಸರ್ಜನೆ
ತರೀಕೆರೆ: ಲಕ್ಕವಳ್ಳಿ ಗ್ರಾಮದಲ್ಲಿ ಶ್ರೀಮಹಾಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ಪೆಂಡಾಲ್‌ನಿಂದ ವಾದ್ಯ ಗೋಷ್ಠಿ, ಜಾನಪದ ನೃತ್ಯ, ವೀರಗಾಸೆ ಹಾಗೂ ಡೊಳ್ಳುವಾದ್ಯದೊಂದಿಗೆ ರಾಜಬೀದಿಗಳ ಮೂಲಕ ತಿಮ್ಮಾಭೋವಿ ಕ್ಯಾಂಪ್ ರಸ್ತೆ, ಚಿನ್ನರಾಜು ಕ್ಯಾಂಪ್ ರಸ್ತೆ, ಮಠದಹಳ್ಳಿ ಮತ್ತು ಹಳೇ ಲಕ್ಕವಳ್ಳಿ ವಿಭಾಗದಲ್ಲಿ ಮೆರವಣಿಗೆ ಮೂಲಕ ಸಾಗುತ್ತಾ, ಗ್ರಾಮದ ಹೊರಭಾಗದಲ್ಲಿರುವ ಭದ್ರಾ ಬಲದಂಡೆ ನಾಲೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು.
ಉತ್ಸವದ ಮೆರವಣಿಗೆಯಲ್ಲಿ ಸಮಿತಿಯ ಪದಾಧಿಕಾರಿಗಳು, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.