ಕಿರು ಅರಣ್ಯದಲ್ಲಿ ಅಕ್ರಮವಾಗಿ ಕೆರೆ ಹೂಳು ತೆಗೆದ ಇಬ್ಬರ ವಿರುದ್ಧ ಪ್ರಕರಣ

ಕಿರು ಅರಣ್ಯದಲ್ಲಿ ಅಕ್ರಮವಾಗಿ ಕೆರೆ ಹೂಳು ತೆಗೆದ ಇಬ್ಬರ ವಿರುದ್ಧ ಪ್ರಕರಣ

ಕಿರು ಅರಣ್ಯದಲ್ಲಿ ಅಕ್ರಮವಾಗಿ ಕೆರೆ ಹೂಳು ತೆಗೆದ ಇಬ್ಬರ ವಿರುದ್ಧ ಪ್ರಕರಣ

ಬಾಳೆಹೊನ್ನೂರು: ಬಿ.ಕಣಬೂರು ಗ್ರಾಮದ ವಾಟ್ ಕೊಡಿಗೆ 195ನೇ ಸರ್ವೆ ನಂಬರಿನ ಕಿರು ಅರಣ್ಯದೊಳಗೆ ಜೆಸಿಬಿಯೊಂದಿಗೆ ಅಕ್ರಮವಾಗಿ ಪ್ರವೇಶಿಸಿ, ಕೆರೆಯ ಹೂಳು ತೆಗೆಯಲು ಯತ್ನಿಸಿದ ಆರೋಪದಡಿ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪ್ರೊಬೇ‌ಷನರಿ ಎಸಿಎಫ್ ವಿದ್ಯಾಶ್ರೀ ನೇತೃತ್ವದಲ್ಲಿ, ಅರಣ್ಯ ಇಲಾಖೆ ಸಿಬ್ಬಂದಿ ವಾಟ್ ಕೊಡಿಗೆ ಕಿರು ಅರಣ್ಯದೊಳಗೆ ತೆರಳಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅಧಿಕಾರಿಗಳು ಸ್ಥಳದಲ್ಲಿದ್ದ ಹಿಟಾಚಿ ವಶಪಡಿಸಿಕೊಂಡು ರಾಘವೇಂದ್ರ ಹಾಗೂ ವಿಕ್ಟರ್ ಮಿನೇಜಸ್ ಎಂಬುವ ವರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು, ₹20 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಎಸಿಎಫ್ ಮೋಹನ್ ಕುಮಾರ್ ಮಾರ್ಗದರ್ಶನ ನೀಡಿದ್ದರು.

260927-126-1371693123

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ