ಕೊಡಗಿನ ಹಲವೆಡೆ ಉತ್ತಮ ಮಳೆ

ಕೊಡಗಿನ ಹಲವೆಡೆ ಉತ್ತಮ ಮಳೆ

ಕೊಡಗಿನ ಹಲವೆಡೆ ಉತ್ತಮ ಮಳೆ

ಮಡಿಕೇರಿ: ನಗರ ಸೇರಿ ಕೊಡಗು ಜಿಲ್ಲೆಯ ಹಲವೆಡೆ ಶುಕ್ರವಾರ ಉತ್ತಮ ಮಳೆ ಆಗಿದೆ. ಮಡಿಕೇರಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಮಳೆಯಿಂದ ತೊರೆಗಳು ತುಂಬಿ ಹರಿಯುತ್ತಿವೆ. ಮದೆನಾಡು ಸಮೀಪದ ಅಬ್ಬಿಕೊಲ್ಲಿ ಜಲಪಾತ ಭೋರ್ಗರೆಯುತ್ತಿದೆ. ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ತಾಲ್ಲೂಕಿನಲ್ಲಿ ತುಂತುರು ಹಾಗೂ ಹಗುರ ಮಳೆ ಮುಂದುವರಿದಿದೆ.

ಮಡಿಕೇರಿ ತಾಲ್ಲೂಕಿನ ಮರಗೋಡು, ಎಮ್ಮೆಮಾಡು ಭಾಗಗಳ ಕೆಲವೆಡೆ ಮಳೆ ನೀರು ರಕ್ತವರ್ಣಕ್ಕೆ ತಿರುಗಿರುವ ದೃಶ್ಯಗಳ ವಿಡಿಯೊ ತುಣುಕುಗಳು ವಾಟ್ಸ್‌ಆ್ಯಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡಿದವು. ಆದರೆ, ಈ ಕುರಿತು ಯಾವುದೇ ಮಾಹಿತಿ ಬಂದಿಲ್ಲ ಎಂದು ತಹಶೀಲ್ದಾರ್ ಶ್ರೀಧರ್ ತಿಳಿಸಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಸಹ ಈ ವಿಷಯವನ್ನು ದೃಢಪಡಿಸಿಲ್ಲ.

ಮೈಸೂರಿನಲ್ಲಿ ವರ್ಷಧಾರೆ: ಮೈಸೂರು ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಜೋರು ಮಳೆಯು ಬೇಸಿಗೆಯಂತಿದ್ದ ವಾತಾವರಣವನ್ನು ತಂಪಾಗಿಸಿತು.

ಜಿಲ್ಲೆಯ ಹುಣಸೂರು, ತಿ.ನರಸೀಪುರ, ಧರ್ಮಾಪುರ, ಬೆಟ್ಟದಪುರ, ಸಾಲಿಗ್ರಾಮ ಭಾಗದಲ್ಲೂ ಕೆಲಕಾಲ ತುಂತುರು ಮಳೆಯಾಯಿತು.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಒಂದು ತಾಸಿಗೂ ಹೆಚ್ಚು ಹೊತ್ತು ಉತ್ತಮ ಮಳೆಯಾಗಿದೆ. ಕೆಲವು ವಾರಗಳಿಂದ ಬಿಸಿಲಿನ ವಾತಾವರಣದಿಂದ ಕಂಗೆಟ್ಟಿದ್ದ ಬೆಟ್ಟದ ಪರಿಸರದಲ್ಲಿ ಮಳೆ ತಂಪಿನ ವಾತಾವರಣ ತಂದಿತು. ಚಾಮರಾಜನಗರದಲ್ಲೂ ಸಾಧಾರಣ ವರ್ಷಧಾರೆಯಾಯಿತು.

ಆಗುಂಬೆಯಲ್ಲಿ 11 ಸೆಂ.ಮೀ. ಮಳೆ

ತೀರ್ಥಹಳ್ಳಿ: ಹಲವು ದಿನಗಳಿಂದ ಬಿಸಿಲಿನ ಬೇಗೆಯಲ್ಲಿದ್ದ ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯ ಸುರಿಯುತ್ತಿದೆ. ತಾಲ್ಲೂಕಿನ ಆಗುಂಬೆಯಲ್ಲಿ ಶುಕ್ರವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ 11 ಸೆಂ.ಮೀ. ಮಳೆ ದಾಖಲಾಗಿದೆ. ಇಲ್ಲಿ ಗುರುವಾರ 14 ಸೆಂ.ಮೀ. ಮಳೆ ದಾಖಲಾಗಿತ್ತು.

ಮಳೆ, ಮೋಡದ ವಾತಾವರಣ ಮುಂದುವರಿದಿದೆ. ಮೇಗರವಳ್ಳಿ, ಕಟ್ಟೇಹಕ್ಕಲು, ರಾಮಕೃಷ್ಣಪುರ, ಮಂಡಗದ್ದೆ, ಬೆಜ್ಜವಳ್ಳಿ, ಕನ್ನಂಗಿ, ಹಣಗೆರೆ, ಮಾಳೂರು, ಬಸವಾನಿ, ಹಾರೋಗೊಳಿಗೆ ಭಾಗಗಳಲ್ಲಿ ಮಳೆಯಾಗುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ