ಮಾಲೂರು ಇಂದಿರಾ ಕ್ಯಾಂಟೀನ್‌ನಲ್ಲಿ ಕೆಟ್ಟು ನಿಂತ ಅಡುಗೆ ತಯಾರಿ ಸಾಧನ

ಮಾಲೂರು ಇಂದಿರಾ ಕ್ಯಾಂಟೀನ್‌ನಲ್ಲಿ ಕೆಟ್ಟು ನಿಂತ ಅಡುಗೆ ತಯಾರಿ ಸಾಧನ

ಮಾಲೂರು ಇಂದಿರಾ ಕ್ಯಾಂಟೀನ್‌ನಲ್ಲಿ ಕೆಟ್ಟು ನಿಂತ ಅಡುಗೆ ತಯಾರಿ ಸಾಧನ

ಮಾಲೂರು: ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ತಯಾರಿ ಸಾಧನಗಳು ಹಾಳಾಗಿದ್ದು, ಮೂಲಸೌಕರ್ಯಗಳ ಕೊರತೆ ಎದುರಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ಆರಂಭವಾದ ಈ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರಾರಂಭದಲ್ಲಿ ಪತ್ರಿದಿನ ಸಾವಿರಕ್ಕೂ ಹೆಚ್ಚು ಜನ ಊಟ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಕೊರತೆಯಿಂದಾಗ ಗ್ರಾಹಕರ ಸಂಖ್ಯೆ ಕಡಿಮೆಯಾಗತೊಡಗಿತು. ಕೇವಲ ಮೂರು ಮಂದಿ ಮಾತ್ರ ಸಿಬ್ಬಂದಿ ಇದ್ದು, ಸಮರ್ಪಕ ಆಹಾರ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಸ್ವಚ್ಛತೆ ಕೊರತೆ: ₹40 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್‌ ಕಟ್ಟಡ ನಿರ್ಮಿಸಲಾಗಿದೆ. ಆದರೆ ಸ್ಚಚ್ಛತೆ ಕೊರತೆಯಿಂದ ದೂಳು ಮಯವಾಗಿದೆ. ಕುಡಿಯುವ ನೀರಿನ ಫಿಲ್ಟರ್‌ ಬಳಿ ಸ್ವಚ್ಛವಾಗಿಲ್ಲ. ಬೆಳಿಗ್ಗೆ ತಿಂಡಿಗೆ ಬಳಸಿದ ತಟ್ಟೆಗಳನ್ನು ಮಧ್ಯಾಹ್ನವಾದರೂ ಸ್ಚಚ್ಛಗೊಳಿಸಿದ ಕಾರಣ ನೊಣಗಳ ಕಾಟ ಹೆಚ್ಚಾಗಿದೆ.

ಕ್ಯಾಂಟೀನ್‌ನಲ್ಲಿ ಪ್ರತಿದಿನ 1,000ದಿಂದ 1,500 ಮಂದಿಗೆ ಆಹಾರ ತಯಾರಿ ಮಾಡುತ್ತಿದ್ದು, ರೈಸ್ ಕುಕ್ಕರ್‌, ಚಪಾತಿ ತಯಾರಿಕೆ ಯಂತ್ರ ಕೆಟ್ಟು ನಿಂತಿವೆ. ಹಿಟ್ಟು ಕಲಿಸುವ ಮಷಿನ್‌ಗಳು ಹಾಳಾಗಿದೆ. ಗ್ಯಾಸ್ ಸ್ಟೌಗಳಲ್ಲಿ ಬಳಸಿ ಬೆರಳೆಣಿಕೆ ಜನರಿಗೆ ಅನ್ನ ಬೇಯಿಸಲಾಗುತ್ತಿದೆ.

‘₹10 ಟೋಕನ್ ಪಡೆದವರಿಗೆ ಒಂದು ಹಿಡಿ ಅನ್ನ, ಸಾರು ಹಾಕುತ್ತಿದ್ದಾರೆ. ಹೊಟ್ಟೆ ತುಂಬದೆ ಅನ್ನ ಕೇಳಿದರೆ ಮತ್ತೆ ಟೋಕನ್ ತರುವಂತೆ ಹೇಳುತ್ತಾರೆ’ ಎಂದು ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಿದ್ದ ಮುನಿರಾಜು ದೂರಿದರು.

‘ಪ್ರತಿದಿನ ಕ್ಯಾಂಟೀನ್‌ನಲ್ಲಿ 1,000ದಿಂದ 1,500 ಟೋಕನ್ ನೀಡಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಲ್ಲಿ ಪರಸ್ಥಿತಿಯೇ ಭಿನ್ನ.ದಿನಕ್ಕೆ 100 ಮಂದಿ ಊಟ ಮಾಡುವುದೂ ಕಷ್ಟ. ಒಂದು ಟೋಕನ್‌ಗೆ ಒಂದು ಹಿಡಿ ಮಾತ್ರ ಅನ್ನ ನೀಡುತ್ತಾರೆ. ಮೆನುವಿನಲ್ಲಿರುವ ಯಾವುದೇ ಆಹಾರನೀಡುತ್ತಿಲ್ಲ. ಸಾರು ನೀರಾಗಿದ್ದು, ರುಚಿ ಇರುವುದಿಲ್ಲ. ಕಳಪೆ ಆಹಾರ ನೀಡುವುದರಿಂದ ಜನರು ಕ್ಯಾಂಟೀನ್‌ ಕಡೆ ಬರುವುದು ಕಡಿಮೆಯಾಗಿದೆ. ಅಧಿಕಾರಿಗಳು ಗಮನಹರಿಸಬೇಕು’ ಎಂದು ಮುಖಂಡ ಎಂ.ಆರ್‌. ರಂಗಪ್ಪ ಒತ್ತಾಯಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ