
ಮಡಿಕೇರಿ: ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್ ವಿಜೇತ ವಿದ್ಯಾರ್ಥಿನಿಯರಿಗೆ ಅಭಿನಂದನೆ
ಮಡಿಕೇರಿ: ರಾಂಚಿಯಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಾದ ಕರ್ನಾಟಕದ 17 ವರ್ಷದೊಳಗಿನ ಬಾಲಕಿಯರ ಹಾಕಿ ತಂಡದ ಸದಸ್ಯರಾದ ಇಲ್ಲಿನ ಕಾಲ್ಸ್ ಶಾಲೆಯ ಹಾಗೂ ಜನರಲ್ ತಿಮ್ಮಯ್ಯ ವಿದ್ಯಾ ಸಂಸ್ಥೆಯ 9 ವಿದ್ಯಾರ್ಥಿನಿಯರನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಗಳಾದ ಎ.ಎಸ್ ಪೊನ್ನಣ್ಣ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರ, ಈಗಾಗಲೇ ಕೊಡಗಿನಲ್ಲಿ ಹಲವು ಹಾಕಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ಕೈಗೊಂಡಿದ್ದು ಸದ್ಯದಲ್ಲಿಯೇ ಅದು ಕಾರ್ಯರೂಪಕ್ಕೆ ಬರಲಿದೆ. ಅದು ಸ್ಥಳೀಯ ಕ್ರೀಡಾಪಟುಗಳಿಗೆ ವರದಾನವಾಗಲಿದೆ ಎಂದು ಹೇಳಿದರು. ಒಲಂಪಿಯನ್ ಬಾಳೇಯಾಡ ಸುಬ್ರಮಣಿ, ಮುಖ್ಯ ತರಬೇತುದಾರರು ಅಮ್ಮಂಡ ಕಾರ್ಯಪ್ಪ, ಮಾಜಿ ತರಬೇತಿದಾರರು ಬುಟ್ಟಿಯಾಂಡ ಚಂಗಪ್ಪ, ಚೆಪ್ಪುಡೀರ ಅಪ್ಪಣ್ಣ ಭಾಗವಹಿಸಿದ್ದರು.