ಕೆಜಿಎಫ್‌: ಉದ್ಯೋಗಕ್ಕೆ ಬೆಂಗಳೂರೇ ಆಸರೆ, ಸಂಚಾರಕ್ಕಿಲ್ಲ ರೈಲು-ಬಸ್ ವ್ಯವಸ್ಥೆ

ಕೆಜಿಎಫ್‌: ಉದ್ಯೋಗಕ್ಕೆ ಬೆಂಗಳೂರೇ ಆಸರೆ, ಸಂಚಾರಕ್ಕಿಲ್ಲ ರೈಲು-ಬಸ್ ವ್ಯವಸ್ಥೆ

ಕೆಜಿಎಫ್‌: ಉದ್ಯೋಗಕ್ಕೆ ಬೆಂಗಳೂರೇ ಆಸರೆ, ಸಂಚಾರಕ್ಕಿಲ್ಲ ರೈಲು-ಬಸ್ ವ್ಯವಸ್ಥೆ

ಕೆಜಿಎಫ್‌: ಬಿಜಿಎಂಎಲ್‌ ಮುಚ್ಚಿದ ಮೇಲೆ ನಗರದಲ್ಲಿ ಉಂಟಾದ ಆರ್ಥಿಕ ಮತ್ತು ಸಾಮಾಜಿಕ ವೈಪರೀತ್ಯದಿಂದಾಗಿ ಉದ್ಯೋಗಕ್ಕಾಗಿ ಸಾವಿರಾರು ಮಂದಿ ಬೆಂಗಳೂರನ್ನು ಆಶ್ರಯಿಸಿದ್ದು, ರೈಲಿನ ಕೊರತೆ ಮತ್ತು ಬಸ್‌ಗಳ ಅಲಭ್ಯದಿಂದಾಗಿ ಪ್ರತಿದಿನ ಸಂಚಾರಕ್ಕೆ ಸಾರ್ವಜನಿಕರು ತೊಂದರೆ ಪಡುವಂತಾಗಿದೆ.

ಕೆಜಿಎಫ್‌ ನಗರದ ಮಾರಿಕುಪ್ಪಂ, ಚಾಂಪಿಯನ್‌ ರೀಫ್ಸ್‌, ಊರಿಗಾಂ, ಕೋರಮಂಡಲ್‌ ಮತ್ತು ಬೆಮಲ್‌ ನಗರಗಳಿಂದ ಪ್ರತಿನಿತ್ಯ ಸಾವಿರಾರು ಮಂದಿ ಉದ್ಯೋಗಕ್ಕಾಗಿ ಮಾಲೂರು, ವೈಟ್‌ಫೀಲ್ಡ್‌, ದೇವನಗೊಂದಿ ಮತ್ತು ಬೆಂಗಳೂರು ನಗರವನ್ನು ಆಶ್ರಯಿಸಿದ್ದಾರೆ. ಕೆಲವು ರೈಲುಗಳನ್ನು ಬಿಟ್ಟರೆ ಬಹುತೇಕ ಎಲ್ಲಾ ರೈಲುಗಳು ಬಂಗಾರಪೇಟೆ ಜಂಕ್ಷನ್‌ಗೆ ಹೋಗುತ್ತವೆ. ಗ್ರಾಮೀಣ ಭಾಗದವರು ಬಸ್‌ಗಳಲ್ಲಿ ಬಂಗಾರಪೇಟೆಗೆ ಬಂದು ಅಲ್ಲಿಂದ ಬೆಂಗಳೂರು ಕಡೆಗೆ ಹೋಗಬೇಕು. ಇದೇ ದೊಡ್ಡ ಅವ್ಯವಸ್ಥೆಗೆ ಕಾರಣವಾಗಿದೆ.

ತಿರುವನಂತಪುರ ನಾರ್ಥ್‌, ಬೆಂಗಳೂರು ಕಂಟೋನ್ಮೆಂಟ್‌-ಕೋಲಾರ, ಜೋಲಾರಪೇಟೆ ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರೆಲ್‌, ಕುಪ್ಪಂ ಮೆಮೋ ಸೇರಿದಂತೆ ಹಲವು ರೈಲುಗಳು ಬೆಂಗಳೂರಿನಿಂದ ಬಂಗಾರಪೇಟೆ ಮಾರ್ಗವಾಗಿ ಸಂಚರಿಸುತ್ತವೆ. ಹಾಗಾಗಿ ಅನಿವಾರ್ಯವಾಗಿ ಬಂಗಾರಪೇಟೆಯಲ್ಲಿ ಇಳಿದು ಅಲ್ಲಿಂದ ದಾಸರಹೊಸಹಳ್ಳಿ, ಬೇತಮಂಗಲ, ಬೆಮಲ್‌, ಕೆಜಿಎಫ್‌ ಮುಂತಾದ ಕಡೆಗೆ ಬಸ್‌ಗಳನ್ನೇ ಅವಲಂಬಿಸಿ ಸಂಚರಿಸಬೇಕಾಗಿದೆ. ಸಕಾಲದಲ್ಲಿ ಬಸ್ ಸಿಗದೆ ಗಂಟೆಗಟ್ಟಲೆ ಪ್ರಯಾಣಿಕರು ಕಾಯಬೇಕಿದೆ. ಅವರೂಪಕ್ಕೆ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನೂಕುನುಗ್ಗಲು. ಬಲಶಾಲಿಗಳು, ಯುವಕರು ಬಸ್‌ ಹಿಡಿದರೆ, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಬಸ್‌ ಹತ್ತಲು ಕೂಡ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂಜಾನೆ ಬಂಗಾರಪೇಟೆ ಕಡೆಗೆ ಹೋಗಲು ಬಹುತೇಕ ಜನಕ್ಕೆ ಖಾಸಗಿ ಬಸ್‌ಗಳೇ ಅನಿವಾರ್ಯವಾಗಿದೆ. ಸಂಜೆಯೂ ಬಂಗಾರಪೇಟೆಯಿಂದ ಬೇರೆ ಗ್ರಾಮಗಳಿಗೆ ತೆರಳುವವರಿಗೂ ಖಾಸಗಿ ಬಸ್‌ಗಳೇ ಆಧಾರವಾಗಿದೆ.

ಸಂಜೆ ರೈಲು ಸಮಯಕ್ಕೆ ಮೂರು ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ದಾಖಲೆ ಪ್ರದರ್ಶಿಸುತ್ತಾರೆ. ಆದರೆ, ಸಾವಿರಾರು ಮಂದಿ ಪ್ರಯಾಣಿಕರನ್ನು ಸಾಗಿಸಲು ಮೂರು ಬಸ್ ಸಾಕೇ ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ.

ಬಂಗಾರಪೇಟೆ ಜಂಕ್ಷನ್‌ನಲ್ಲಿ ರೈಲು ಹತ್ತುವುದೇ ಸಾಹಸ. ಹತ್ತುವವರಿಗೆ ರೈಲಿನಲ್ಲಿ ಸೀಟ್‌ ಸಿಗುವುದೇ ಅಪರೂಪ. ಬೆಂಗಳೂರು ಅಥವಾ ಬೇರೆಡೆಯಿಂದ ಗಂಟೆಗಟ್ಟಲೆ ರೈಲಿನಲ್ಲಿ ನಿಂತುಕೊಂಡು ಬರುವ ಪ್ರಯಾಣಿಕರು, ಪುನಃ ಬಸ್‌ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿದೆ,

ಪ್ರಸ್ತುತ ಬೆಂಗಳೂರಿನ ಹಲವು ರೈಲು ನಿಲ್ದಾಣಗಳಲ್ಲಿ ನವೀಕಣ ಕಾರ್ಯ ನಡೆಯುತ್ತಿರುವುದರಿಂದ, ಇತ್ತೀಚಿನ ದಿನಗಳಲ್ಲಿ ರೈಲಿನ ಸಮಯ ಬದಲಾವಣೆಯಾಗುತ್ತಿದೆ. ಕೆಲವು ರೈಲುಗಳ ಸಂಚಾರ ರದ್ದುಗೊಳಿಸಲಾಗುತ್ತಿದೆ. ಮುಂದಿನ ವರ್ಷದ ಜುಲೈ ತಿಂಗಳವರೆವಿಗೂ ಈ ರೀತಿಯ ಬದಲಾವಣೆ ಅನಿವಾರ್ಯ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.

ಹೆಚ್ಚುವರಿ ಬಸ್‌ಗೆ ವ್ಯವಸ್ಥೆ: ಸಂಸದ

ಬಂಗಾರಪೇಟೆಯಿಂದ ಕೋರಮಂಡಲ್‌ ರೈಲ್ವೆನಿಲ್ದಾಣದವರೆವಿಗೂ ಲೂಪ್‌ ಲೈನ್‌ ಅಳವಡಿಸಲು ರೈಲ್ವೆ ಇಲಾಖೆಯನ್ನು ಕೋರಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಪ್ಪಂ ಕಡೆಗೆ ಹೋಗುವ ರೈಲುಗಳಿಗೆ ಅನುಕೂಲವಾಗುತ್ತದೆ. ಬಂಗಾರಪೇಟೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲು ಕೆಎಸ್‌ಆರ್‌ಟಿಸಿ ಜಿಲ್ಲಾ ನಿಯಂತ್ರಕರಿಗೆ ತಿಳಿಸಿದ್ದೇನೆ. ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದಾರೆ ಎಂದು ಸಂಸದ ಮಲ್ಲೇಶಬಾಬು ತಿಳಿಸಿದ್ದಾರೆ.

ಕೆಜಿಎಫ್‌ಗೆ ಹೆಚ್ಚುವರಿ ರೈಲಿಗೆ ಮನವಿ

ಕೆಜಿಎಫ್‌-ಬೆಂಗಳೂರು ಪ್ರಯಾಣಕ್ಕಿಂತ ಬಂಗಾರಪೇಟೆ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ಕಾಯುವುದೇ ದೊಡ್ಡ ಕೆಲಸವಾಗಿದೆ. ಮುಂಜಾನೆ ನಾಲ್ಕು ಗಂಟೆಗೆ ಎದ್ದು ರೈಲಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಜಿಎಫ್‌ಗೆ ಹೆಚ್ಚುವರಿ ರೈಲು ಮತ್ತು ಬಂಗಾರಪೇಟೆ ಬಸ್‌ ನಿಲ್ದಾಣದಲ್ಲಿ ಬಸ್‌ ವ್ಯವಸ್ಥೆ ಮಾಡಬೇಕೆಂದು ರೈಲ್ವೆ ಪ್ರಯಾಣಿಕರ ಸಂಘದ ಶರವಣನ್‌ ಮನವಿ ಮಾಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ