ʼಕಲೀಲಾʼಗೆ ಮುಹೂರ್ತ: ಚಿತ್ರೀಕರಣಕ್ಕೆ ಚಾಲನೆ ನೀಡಿದ ನಿರ್ದೇಶಕ ಸಿಂಪಲ್‌ ಸುನಿ

ʼಕಲೀಲಾʼಗೆ ಮುಹೂರ್ತ: ಚಿತ್ರೀಕರಣಕ್ಕೆ ಚಾಲನೆ ನೀಡಿದ ನಿರ್ದೇಶಕ ಸಿಂಪಲ್‌ ಸುನಿ

ʼಕಲೀಲಾʼಗೆ ಮುಹೂರ್ತ: ಚಿತ್ರೀಕರಣಕ್ಕೆ ಚಾಲನೆ ನೀಡಿದ ನಿರ್ದೇಶಕ ಸಿಂಪಲ್‌ ಸುನಿ

ಅಣ್ಣ–ತಂಗಿ ಬಾಂಧವ್ಯ, ಕೋಪದ ವರ್ತನೆಯಿಂದ ಆಗುವ ನೋವು, ಅನಾಹುತ ವಿವರಿಸುವ ಕಥೆಯನ್ನು ಆಧರಿಸಿದ ‘ಕಲೀಲಾ’ ಚಿತ್ರಕ್ಕೆ ಪಂಚಮುಖಿ ಗಣಪತಿ ದೇಗುಲದಲ್ಲಿ ಮುಹೂರ್ತ ನಡೆಯಿತು. ಚಿತ್ರೀಕರಣಕ್ಕೆ ನಿರ್ದೇಶಕ ಸಿಂಪಲ್‌ ಸುನಿ ಅವರು ಚಾಲನೆ ನೀಡಿದರು.

ಕೆವಿಆರ್ ಪಿಕ್ಚರ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೆ.ರಾಘವ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ‘ಇದು ಮಾಸ್ ಕಂಟೆಂಟ್ ಚಿತ್ರ. ಬೆಂಗಳೂರು, ಬಿಜಾಪುರ ಮತ್ತು ಮೈಸೂರು ಇತರೆಡೆ ಚಿತ್ರೀಕರಣ ನಡೆಯಲಿದೆ’ ಎಂದು ಕೆ.ರಾಘವ್ ತಿಳಿಸಿದರು.

ರಾಕೇಶ್ ಅಡಿಗ ಚಿತ್ರದ ನಾಯಕನಾಗಿದ್ದರೆ, ಖುಷಿ ನಾಯಕಿಯಾಗಿದ್ದಾರೆ. ಉಳಿದ ತಾರಾಬಳಗದಲ್ಲಿ ಅಪೂರ್ವ, ಶಿಳ್ಳೆ ಮಂಜುನಾಥ್, ಜೋಗಿ ಉಮೇಶ್‌ ಪುಂಗ, ಕಡ್ಡಿ ವಿಶ್ವ, ಬಲರಾಜವಾಡಿ, ಕಾಕ್ರೋಚ್ ಸುಧಿ, ವರ್ಧನ್, ಶೋಭಿತಾ, ಮಫ್ತಿ ಪ್ರದೀಪ್, ಪೂಜಾಶೆಟ್ಟಿ, ಶಿಲ್ಪಾ ಇತರರಿದ್ದಾರೆ.

ನಾಲ್ಕು ಹಾಡುಗಳಿದ್ದು, ಮನುರಾಜ್ ಸಂಗೀತ ಸಂಯೋಜನೆ ಇದೆ. ಎಸ್.ಹಾಲೇಶ್ ಅವರ ಛಾಯಾಚಿತ್ರಗ್ರಹಣ, ಗಿರೀಶ್‌ಕುಮಾರ್ ಅವರ ಸಂಕಲನ ವಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಚಿತ್ರತಂಡ ನಿರ್ಧರಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ