ಶಿಡ್ಲಘಟ್ಟ: ಜ್ಞಾನಜ್ಯೋತಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

ಶಿಡ್ಲಘಟ್ಟ: ಜ್ಞಾನಜ್ಯೋತಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

ಶಿಡ್ಲಘಟ್ಟ: ಜ್ಞಾನಜ್ಯೋತಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

ಶಿಡ್ಲಘಟ್ಟ: ಜಂಗಮಕೋಟೆ ಕ್ರಾಸ್‌ನಲ್ಲಿರುವ ಜ್ಞಾನಜ್ಯೋತಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ 1999–2002ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಭಾನುವಾರ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪಿ. ಮನುಶ್ರೀ ಮಾತನಾಡಿ, ‘ತಾವು ಅಕ್ಷರ ಕಲಿಸಿದ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮವಾಗಿ ಬೆಳೆದಿರುವುದನ್ನು ಕಂಡಾಗ ಶಿಕ್ಷಕರಿಗೆ ಹೆಮ್ಮೆ ಮತ್ತು ಸಂತೋಷವಾಗುತ್ತದೆ’ ಎಂದು ಹೇಳಿದರು.

ಶಿಕ್ಷಕರು ನೀಡಿದ ಜ್ಞಾನದಿಂದ ಉತ್ತಮ ಬದುಕು ಕಟ್ಟಿಕೊಳ್ಳುವ ನಾವು ಅವರನ್ನು ಜೀವನದುದ್ದಕ್ಕೂ ಸ್ಮರಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಮಾತನಾಡಿ, ಸಮಾಜ, ಹೆತ್ತವರು ಹಾಗೂ ಗುರುಗಳ ಋಣ ತೀರಿಸಲು ಆಗದು ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿಗಳು ಅಂದಿನ ಶಿಕ್ಷಕರಾದ ಎಂ.ಟಿ. ಮಂಜುನಾಥ್, ನಾಗೇಂದ್ರ, ಎಂ.ಕೆ. ಅಂಜನಾಮೂರ್ತಿ, ಎ. ವೆಂಕಟೇಶ್‌ಮೂರ್ತಿ, ಲಕ್ಷ್ಮಣಪ್ಪ, ಅಸ್ಮತ್ ಉನ್ನೀಸ್ಸಾ ಹಾಗೂ ಟಿ.ಕೆ. ಕಲ್ಪನಾ ಅವರನ್ನು ಸನ್ಮಾನಿಸಿದರು.

ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕೆ. ಗುಡಿಯಪ್ಪ, ಟಿ.ಎಸ್. ಕೃಷ್ಣಮೂರ್ತಿ, ಮುಖ್ಯ ಶಿಕ್ಷಕ ಅಂಜನಾಮೂರ್ತಿ, ಹಿರಿಯ ವಿದ್ಯಾರ್ಥಿಗಳಾದ ಎಚ್.ಎಸ್. ನವೀನ್, ಬಿ.ಎಂ. ನಾಗರಾಜ್, ಬಸವರಾಜು, ಎಂ. ಬಾಬು, ಅನಿಲ್, ಜಿ. ಉಷಾ, ಎಚ್.ಆರ್. ಶಿಲ್ಪಾ, ಎನ್.ಸಿ. ಕಲ್ಪನಾ, ಮಂಜುಳಾ, ಬಿ.ಎನ್. ನೇತ್ರಾ, ಬಿ.ಎನ್. ದಿಲೀಪ್ ಪಾಲ್ಗೊಂಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ