ಸ್ಪೋರ್ಟ್ಸ್‌ ಹಬ್ಬ: ಕಲಬುರಗಿ ನಾರ್ಥ್‌ ಬಾಯ್ಸ್‌, ಜಿಸಿಸಿ ಕ್ಲಬ್‌ ಗೆಲುವು

ಸ್ಪೋರ್ಟ್ಸ್‌ ಹಬ್ಬ: ಕಲಬುರಗಿ ನಾರ್ಥ್‌ ಬಾಯ್ಸ್‌, ಜಿಸಿಸಿ ಕ್ಲಬ್‌ ಗೆಲುವು

ಸ್ಪೋರ್ಟ್ಸ್‌ ಹಬ್ಬ: ಕಲಬುರಗಿ ನಾರ್ಥ್‌ ಬಾಯ್ಸ್‌, ಜಿಸಿಸಿ ಕ್ಲಬ್‌ ಗೆಲುವು

ಕಲಬುರಗಿ: ಜಿಲ್ಲಾಡಳಿತದ ನೇತೃತ್ವದಲ್ಲಿ ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಸಹಯೋಗದೊಂದಿಗೆ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಸೇರಿ ವಿವಿಧ ಸ್ಥಳಗಳಲ್ಲಿ ಒಟ್ಟು ನಾಲ್ಕು ದಿನ ನಡೆದ ‘ಕಲಬುರಗಿ ಸ್ಪೋರ್ಟ್ಸ್‌ ಹಬ್ಬ’ಕ್ಕೆ ಭಾನುವಾರ ತೆರೆ ಬಿದ್ದಿತು.

ಈ ಕ್ರೀಡಾ ಹಬ್ಬದಲ್ಲಿ ಒಟ್ಟು ಆರು ಬಗೆಯ ಕ್ರೀಡಾ ಸ್ಪರ್ಧೆಗಳು ನಡೆದಿದ್ದು, ಫೈನಲ್‌ ಫಲಿತಾಂಶದ ವಿವರ ಈ ಕೆಳಗಿನಂತಿದೆ.

ಕ್ರಿಕೆಟ್‌ ಸ್ಪರ್ಧೆ: ಅಂತರ್‌ ಶಾಲಾ ವಿಭಾಗದಲ್ಲಿ ಕಲಬುರಗಿ ನಾರ್ಥ್‌ ಬಾಯ್ಸ್‌ ತಂಡವು ಜೇವರ್ಗಿ ಬಾಯ್ಸ್‌ ತಂಡದ ವಿರುದ್ಧ 10 ರನ್‌ಗಳಿಂದ ಗೆದ್ದು ಬೀಗಿದೆ. ಇಂಟರ್‌ ಕ್ಲಬ್‌ ವಿಭಾಗದಲ್ಲಿ ಜಿಸಿಸಿ ಕ್ಲಬ್ ತಂಡವು ಎನ್‌ವಿ ಜಿಮ್ಖಾನಾ ವಾರಿಯರ್ಸ್ ವಿರುದ್ಧ 2 ರನ್‌ಗಳಿಂದ ಗೆದ್ದಿದೆ. ಇನ್ನು ಮಹಿಳಾ ವಿಭಾಗದಲ್ಲಿ ಟೀಮ್ ಬ್ಲೂ ತಂಡ ಟೀಮ್ ಪಿಂಕ್ ವಿರುದ್ಧ 10 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ.

ವಾಲಿಬಾಲ್‌: ಪುರುಷ ವಿಭಾಗದಲ್ಲಿ ಕಲಬುರಗಿ ರೈಡರ್ಸ್ ತಂಡವು ಚಂದಾಪುರ ತಂಡದ ವಿರುದ್ಧ (25-15, 25-23) ಜಯ ಸಾಧಿಸಿದೆ. ಮಹಿಳಾ ವಿಭಾಗದಲ್ಲಿ ಜಿಎಚ್ಎಸ್ ಖಣದಾಳ ತಂಡವು ಎಬಿಎ ವಿರುದ್ಧ (21-12, 21-8) ಗೆಲುವು ದಾಖಲಿಸಿದೆ.

ಫುಟ್‌ಬಾಲ್‌: 18 ವರ್ಷದೊಳಗಿನವರ ಪಂದ್ಯದಲ್ಲಿ ಗುಲಬರ್ಗಾ ಇತಿಹಾದ್ ಫುಟ್‌ಬಾಲ್ ಅಕಾಡೆಮಿ ತಂಡವು ಕೆಎಫ್‌ಎ ವಿರುದ್ಧ (3-2) ಗೆಲುವು ಸಾಧಿಸಿದೆ. ಮುಕ್ತ ಪಂದ್ಯದಲ್ಲಿ ಕಲಬುರಗಿ ಫುಟ್‌ಬಾಲ್‌ ಅಕಾಡೆಮಿಯು ಜಿಇಎಫ್‌ಸಿ ವಿರುದ್ಧ ಪೆನಾಲ್ಟಿ 5-4 ಗೋಲುಗಳಿಂದ ಜಯ ಸಾಧಿಸಿತು.

ಚೆಸ್‌: ಪುರುಷರ ಓಪನ್ ಟೂರ್ನಾಮೆಂಟ್‌ನಲ್ಲಿ ಖುರೇಷಿ ಸಲಾಹುದ್ದೀನ್‌ ಕಲೀಂ–1, ಸಿದ್ಧಾಂತ–2, ಸಮಿ ಎಂಎ –3. ಮಹಿಳಾ ವಿಭಾಗದಲ್ಲಿ ಅಭಿರುಚಿ–1, ಅನುಷ್ಕಾ ಎ.ಕುಲಕರ್ಣಿ–2, ಸಾಯಿ ಸಚ್ಚರಿತಾ–3. ಬಾಲಕರ 17 ವರ್ಷದೊಳಗಿನವರ ವಿಭಾಗದಲ್ಲಿ ಬರುನ್‌ ಪಿ.ಹೆಬ್ಲೆ–1, ಅನೀಶ್‌ ಪಿ.ಮೋರೆ–2, ಆರುಶ್‌ ಬಿರಾದಾರ–3 ಸ್ಥಾನ ಗಳಿಸಿದ್ದಾರೆ.

ಟೇಬಲ್‌ ಟೆನಿಸ್‌: ಬಾಲಕರ 17 ವರ್ಷದೊಳಗಿನ ಸಿಂಗಲ್ಸ್‌ನಲ್ಲಿ ಸುದರ್ಶನ್ ರಾಠೋಡ್‌ ಅವರು ಸೃಜನ್ ಬಸವರಾಜ ಬಿರಾದಾರ ವಿರುದ್ಧ 3-0 (11-7, 11-4, 11-4) ಅಂತರದಿಂದ ಗೆದ್ದರು. ಪುರುಷರ ಸಿಂಗಲ್ಸ್‌ ಓಪನ್‌ನಲ್ಲಿ ಮಂಜುನಾಥ ಎಸ್‌.ರಾಠೋಡ್‌ ಅವರು ಸಾಹೇಬಗೌಡ ಪಾಟೀಲ ಅವರನ್ನು 3-0 (11-7, 11-8, 12-10)ರಿಂದ ಮಣಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಶ್ರುತಿ ದೇಸಾಯಿ ಅವರು ಅಕ್ಷತಾ ಸಿ. ಅವರನ್ನು 3-0 (11-6, 11-3, 11-3) ಅಂತರದಿಂದ ಗೆಲುವು ದಾಖಲಿಸಿದರು.

ಬ್ಯಾಡ್ಮಿಂಟನ್‌: ಬಾಲಕರ 17 ವರ್ಷದೊಳಗಿನ ಸಿಂಗಲ್ಸ್‌ನಲ್ಲಿ ಅಜಯ್ ಭೋಸ್ಲೆ ಅವರು ಅಮನ್ ವಿರುದ್ಧ 2-0 (15-10, 15-12) ಗೆಲುವು ದಾಖಲಿಸಿದರು. ಪುರುಷರ ಓಪನ್‌ ಸಿಂಗಲ್ಸ್‌ನಲ್ಲಿ ಸಮರ್ಥ್ ಅವರು ಮೊಹಮ್ಮದ್ ಫಿರೋಜ್‌ ಗಾಯದ ಕಾರಣದಿಂದ ಹಿಂದೆ ಸರಿದಿದ್ದರಿಂದ ಜಯ ಗಳಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಅನಘಾ ಅವರು ಸಾಕ್ಷಿ ವಿರುದ್ಧ 2-0 (9-15, 5-15) ಜಯ ಸಾಧಿಸಿದರು.

ಬಾಲಕರ 17 ವರ್ಷದೊಳಗಿನ ಬ್ಯಾಡ್ಮಿಂಟನ್‌ ಡಬಲ್ಸ್‌ನಲ್ಲಿ ಅಜಯ್ ಭೋಸ್ಲೆ– ಅಮನ್ ಅವರು ಮಹಾಂತಸ್ವಾಮಿ– ಪ್ರತೀಕ್‌ರೆಡ್ಡಿ ಎಸ್.ಪಾಟೀಲ ವಿರುದ್ಧ 2-1 (18-20, 14-16, 11-15) ಅಂತರದಲ್ಲಿ ಗೆಲುವು ಸಾಧಿಸಿದರು. ಪುರುಷರ ಓಪನ್‌ ಡಬಲ್ಸ್‌ನಲ್ಲಿ ಫಿರೋಜ್ ಡಿ.ಬಿ– ಸುನಿಲ್ ಬಿ ಅವರು ಮೊಹಮ್ಮದ್ ಝಕರಿಯಾ– ಅಭಿಷೇಕ್ ಸೋಂಕರ್ ವಿರುದ್ಧ 2-0 (21-9, 21-14) ಅಂತರದಲ್ಲಿ ಗೆದ್ದರು. ಮಹಿಳೆಯರ ಡಬಲ್ಸ್‌ನಲ್ಲಿ ಅಕ್ಷರಾ– ಸಾತ್ವಿಕಾ ಅವರು ಕಸ್ತೂರಿ ಮಾಲಿಪಾಟೀಲ– ಸಾಕ್ಷಿ ಜಿ ಅವರ ವಿರುದ್ಧ 19-17, 15-11ರಲ್ಲಿ ಗೆದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ