ರಾಮನಗರದಲ್ಲಿ ತರಕಾರಿ ದರ ತುಸು ಹೆಚ್ಚಳ: ಏರುಗತಿಯಲ್ಲಿ ಟೊಮೆಟೊ, ಈರುಳ್ಳಿ

ರಾಮನಗರದಲ್ಲಿ ತರಕಾರಿ ದರ ತುಸು ಹೆಚ್ಚಳ: ಏರುಗತಿಯಲ್ಲಿ ಟೊಮೆಟೊ, ಈರುಳ್ಳಿ

ರಾಮನಗರದಲ್ಲಿ ತರಕಾರಿ ದರ ತುಸು ಹೆಚ್ಚಳ: ಏರುಗತಿಯಲ್ಲಿ ಟೊಮೆಟೊ, ಈರುಳ್ಳಿ

ರಾಮನಗರ: ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿರುವುದರಿಂದ ತರಕಾರಿಗಳ ದರವು ತುಸು ಹೆಚ್ಚಳವಾಗಿದೆ. ಅತ್ಯಗತ್ಯ ತರಕಾರಿಗಳಾದ ಟೊಮೆಟೊ ಹಾಗೂ ಈರುಳ್ಳಿ ದರ ನಿಧಾನವಾಗಿ ಏರುಗತಿಯತ್ತ ಸಾಗುತ್ತಿದೆ. ಮಳೆಗಾಲವಾದರೂ ಬೇಸಿಗೆ ವಾತಾವರಣದ ಕಾರಣಕ್ಕೆ ಕೋಳಿ ಮಾಂಸದ ದರವು ಕೊಂಚ ತಗ್ಗಿದೆ.

ಬಹುತೇಕ ತರಕಾರಿ ಬೆಳೆಗಳು ನೀರಾವರಿ ಆಶ್ರಿತವಾಗಿವೆ. ಈ ಪೈಕಿ ಕೆಲವಷ್ಟೇ ಮಳೆಯಾಶ್ರಿತ. ಆದರೆ, ಮಳೆಗಾಲದಲ್ಲೂ ನೆಂಟರಂತೆ ಬಂದು ಹೋಗುತ್ತಿರುವ ಮಳೆಯಿಂದಾಗಿ ನೀರಾವರಿ ಮೂಲಗಳಾದ ಕೆರೆಗಳು, ಕೊಳವೆಬಾವಿಗಳು ಹಾಗೂ ನದಿಗಳಲ್ಲಿ ನೀರು ಕಡಿಮೆಯಾಗಿದೆ. ಹಾಗಾಗಿ, ಮಾರುಕಟ್ಟೆಗೆ ತರಕಾರಿಯ ಆವಕ ಹಿಂದಿನಂತಿಲ್ಲ.

‘ಕಳೆದ ವಾರ ಟೊಮೆಟೊ 20 ಕೆ.ಜಿ.ಯ ಒಂದು ಕ್ರೇಟ್‌ಗೆ ₹150 ಇದ್ದದ್ದು, ಈಗ ₹400–₹450 ಆಗಿದೆ. ಬೀದಿಬದಿ ಹಾಗೂ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹25–₹30ಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರ ಪ್ರತಿ ಕೆ.ಜಿ.ಗೆ ₹50 ಇದ್ದ ಈರುಳ್ಳಿ ದರ ಇದೀಗ ₹60–₹70ಕ್ಕೆ ಜಿಗಿದಿದೆ’ ಎಂದು ನಗರದ ಮುಖ್ಯರಸ್ತೆಯಲ್ಲಿರುವ ತರಕಾರಿ ವ್ಯಾಪಾರಿ ಮೊಹಮ್ಮದ ಶಫಿ ಹೇಳಿದರು.

ಉಳಿದಂತೆ ಬೀನ್ಸ್, ಕ್ಯಾರೆಟ್, ಬೀಟ್‌ರೂಟ್, ಆಲೂಗೆಡ್ಡೆ, ಗೆಡ್ಡೆಕೋಸು, ಬೆಂಡೆಕಾಯಿ, ಮೂಲಂಗಿ, ಬದನೆಕಾಯಿ, ಸೀಮೆ ಬದನೆಕಾಯಿ, ಎಲೆಕೋಸುಗಳ ದರವು ಕನಿಷ್ಠ ₹40ರಿಂದ ₹50ರವರೆಗೆ ಇದೆ. ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಪ್ರತಿ ಕೆ.ಜಿ.ಗೆ ₹200ರಿಂದ ₹240ಕ್ಕೆ ಏರಿಕೆಯಾಗಿದೆ. ಅದರ ಬೆನ್ನಲ್ಲೇ ಶುಂಠಿ ದರವು ಕೆ.ಜಿ.ಗೆ ₹160–₹200 ತಲುಪಿದೆ.

ಮಾಂಸಾಹಾರದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕೋಳಿ ಮಾಂಸದ ದರ ತುಸು ತಗ್ಗಿದೆ. ವಾರದ ಹಿಂದೆ ₹250 ಇದ್ದ ಬಾಯ್ಲರ್ ಕೋಳಿ ದರ ಇಂದು ₹200ಕ್ಕೆ ಬಂದು ನಿಂತಿದೆ. ಮೊಟ್ಟೆಕೋಳಿ ಪ್ರತಿ ಕೆ.ಜಿ.ಗೆ ₹160ಕ್ಕೆ ಇಳಿಕೆಯಾಗಿದೆ. ಕುರಿಮಾಂಸದ ದರವು ಕೆ.ಜಿ.ಗೆ ₹750–₹800ಕ್ಕೆ ಮಾರಾಟವಾಗುತ್ತಿದೆ.

ಹೂವುಗಳ ಪೈಕಿ ಕನಕಾಂಬರ ಎಂದಿನಂತೆ ಅಗ್ರಸ್ಥಾನ ಕಾಯ್ದುಕೊಂಡಿದೆ. ವರ ಮಹಾಲಕ್ಷ್ಮಿ ಹಬ್ಬದಲ್ಲಿ ಪ್ರತಿ ಕೆ.ಜಿ.ಗೆ ₹5 ಸಾವಿರದ ಗಡಿ ದಾಟಿದ್ದ ಹೂವು ಇದೀಗ ₹1000– ₹1200ಕ್ಕೆ ತಗ್ಗಿದೆ. ಇನ್ನು ಹತ್ತು ದಿನಗಳಲ್ಲಿ ಗೌರಿ– ಗಣೇಶ ಹಬ್ಬ ಬರುವುದರಿಂದ ಮತ್ತೆ ಕನಕಾಂಬರದ ದರ ಗಗನಕ್ಕೇರಲಿದೆ. ಉಳಿದಂತೆ ಮಲ್ಲಿಗೆ, ಕಾಕಡ, ಗುಲಾಬಿ, ಸೇವಂತಿಗೆ ದರ ಸಾಮಾನ್ಯವಾಗಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ಪಟ್ಟಿ–1ತರಕಾರಿ ದರ (ಕೆ.ಜಿ.ಗೆ ₹ಗಳಲ್ಲಿ)ಬೀನ್ಸ್;60–70ಕ್ಯಾರೇಟ್;60–70ಬೀಟ್‌ರೂಟ್‌;40–50ಈರುಳ್ಳಿ;40–70ಬೆಳ್ಳುಳ್ಳಿ;200–240ಟೊಮೆಟೊ;20–30ಆಲೂಗೆಡ್ಡೆ;25–30ಗೆಡ್ಡೆಕೋಸು;30–40ಮೂಲಂಗಿ;30–40ಬೆಂಡೆಕಾಯಿ;30–40ಬದನೆಕಾಯಿ;50–50ಸೀಮೆ ಬದನೆಕಾಯಿ;40–45ಎಲೆಕೋಸು;20–25ಹೂಕೋಸು(1ಕ್ಕೆ);40–50ತೊಂಡೆಕಾಯಿ;50–50ತೊಗರಿಕಾಯಿ;80–100ಹಾಗಲಕಾಯಿ;50–60ಬಟಾಣಿ;150–160ನುಗ್ಗೆಕಾಯಿ;50–70ಮೆಣಸಿನಕಾಯಿ;60–100ಅವರೆಕಾಯಿ;25–50ಕ್ಯಾಪ್ಸಿಕಾಮ್;40–70ಶುಂಠಿ;160–200ಸೌತೆಕಾಯಿ;40–50ನಿಂಬೆಹಣ್ಣು 1ಕ್ಕೆ;4–7

ಹಣ್ಣಿನ ದರ (ಪ್ರತಿ ಕೆ.ಜಿ.ಗೆ ₹ಗಳಲ್ಲಿ)ಸೇಬು;200–400ದಾಳಿಂಬೆ;120–260ಮೂಸಂಬಿ;30–120ಸಪೋಟ;160–180ಏಲಕ್ಕಿಬಾಳೆ;110–120ಪಚ್ಚಬಾಳೆ;40ಸೀಬೆ;110–140ಪೈನಾಪಲ್;80–100ಪಪ್ಪಾಯ;60–70ಕರಬೂಜ;50–60ಕಲ್ಲಂಗಡಿ;35–40ದ್ರಾಕ್ಷಿ;120–200ಡ್ರ್ಯಾಗನ್ ಫ್ರೂಟ್;120ಮಿಕ್ಸ್ ಹಣ್ಣು;180

ಪಟ್ಟಿ–3ಹೂವಿನ ದರ (ಪ್ರತಿ ಕೆ.ಜಿ.ಗೆ ₹ಗಳಲ್ಲಿ)ಕನಕಾಂಬರ;1000–1200ಮಲ್ಲಿಗೆ;800–1200ಕಾಕಡ;500–600ಗುಲಾಬಿ;120–150ಸೇವಂತಿಗೆ;200–250

ಪಟ್ಟಿ–4ಮಾಂಸದ ದರ (ಕೆ.ಜಿ.ಗೆ ₹ಗಳಲ್ಲಿ)ಕೋಳಿ ಮಾಂಸ (ಬಾಯ್ಲರ್‌);200ಮೊಟ್ಟೆ ಕೋಳಿ;160ಕುರಿ ಮಾಂಸ;800

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-15-1610152643

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ