ಗದಗ | ಅನುದಾನ ಕೊರತೆ ಆರೋಪ: ಡೆತ್‌ನೋಟ್ ಬರೆದಿಟ್ಟು ಕೆಆರ್‌ಡಿಐಎಲ್ ಎಇಇ ನಾಪತ್ತೆ

ಗದಗ | ಅನುದಾನ ಕೊರತೆ ಆರೋಪ: ಡೆತ್‌ನೋಟ್ ಬರೆದಿಟ್ಟು ಕೆಆರ್‌ಡಿಐಎಲ್ ಎಇಇ ನಾಪತ್ತೆ

ಗದಗ | ಅನುದಾನ ಕೊರತೆ ಆರೋಪ: ಡೆತ್‌ನೋಟ್ ಬರೆದಿಟ್ಟು ಕೆಆರ್‌ಡಿಐಎಲ್ ಎಇಇ ನಾಪತ್ತೆ

ಗದಗ: ಇಲ್ಲಿನ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್ ಡಿಐಎಲ್) ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಫರ್ವೀಜ್ ಧಾರವಾಡ ಎಂಬುವರು ನಾಪತ್ತೆಯಾಗಿದ್ದು, ಅವರು ಬರೆದಿದ್ದಾರೆ ಎಂಬ ಡೆತ್‌ನೋಟ್‌ನಲ್ಲಿ ಇಲಾಖೆ ಹಲವು ವರ್ಷಗಳಿಂದ ಅನುದಾನ ಬಾರದ ಕಾರಣ ಆಗಿರುವ ಸಮಸ್ಯೆಯಿಂದ ಮನನೊಂದು ಜೀವನವನ್ನು ಕೊನೆ ಮಾಡಿಕೊಳ್ಳುತ್ತಿರುವೆ ಎಂಬ ಉಲ್ಲೇಖವಿದೆ.

ಫರ್ವೀಜ್ ಅವರು ಬೆಂಗಳೂರಿನಲ್ಲಿ ಮೀಟಿಂಗ್ ಇರುವುದಾಗಿ ಹೇಳಿ, ಸೆಪ್ಟೆಂಬರ್ 13ರಂದು ಬೆಂಗಳೂರಿಗೆ ತೆರಳಿದ್ದರು. 14ರಂದು ಬೆಂಗಳೂರು ತಲುಪಿರುವುದಾಗಿ ಪತ್ನಿಗೆ ತಿಳಿಸಿದ್ದರು. ಆನಂತರ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿದೆ. ಕಚೇರಿ, ಕುಟುಂಬದವರನ್ನು ವಿಚಾರಿಸಿದ ಬಳಿಕ ಕುಟುಂಬದವರು 16ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಡೆತ್‌ನೋಟ್‌ನಲ್ಲಿ ಏನಿದೆ?: ತನಿಖೆ ವೇಳೆ ಪತ್ತೆಯಾದ ಡೆತ್‌ನೋಟ್‌ನಲ್ಲಿ, 'ಕೆಆರ್‌ಡಿಐಎಲ್ ಉಪವಿಭಾಗಕ್ಕೆ ಹಲವು ವರ್ಷಗಳಿಂದ ಅನುದಾನ ಬಿಡುಗಡೆಯಾಗದ ಕಾರಣ ಜನಪ್ರತಿನಿಧಿಗಳು ಹಾಗೂ ಕಾಮಗಾರಿ ನೀಡಿರುವ ಇಲಾಖೆಗಳು ಛೀಮಾರಿ ಹಾಕುತ್ತಿದ್ದಾರೆ. ಹಳೆಯ ಕಾಮಗಾರಿಗಾಗಳಿಗೆ ವಿವಿಧ ಇಲಾಖೆಯಿಂದ ಹಣ ಬಂದಿಲ್ಲ. ಕಾಮಗಾರಿ ಮುಕ್ತಾಯವಾದ ಪ್ರಕರಣಗಳಲ್ಲಿ ಗ್ರೂಪ್ ಲೀಡರ್‌ಗಳಿಗೆ ಹಣ ಪಾವತಿಸುವುದು ಕಷ್ಟವಾಗಿದೆ. ಅವರು ಮನೆ ಹಾಗೂ ಕಚೇರಿ ಬಳಿ ಬಂದು ಹಿಂಸೆ ನೀಡುತ್ತಿದ್ದಾರೆ' ಎಂದು ಬರೆಯಲಾಗಿದೆ.

'ಇದರಿಂದ ನನ್ನ ಮನಃಶಾಂತಿ ಹಾಳಾಗಿದ್ದು, ಜೀವನವನ್ನು ಕೊನೆ ಮಾಡುತ್ತಿದ್ದೇನೆ. ಉಪವಿಭಾಗಕ್ಕೆ ಅನುದಾನ ಕೊರತೆ ನೀಗಿಸಿ. ನನ್ನ ಕುಟುಂಬಕ್ಕೆ ಕಿರುಕುಳ ನೀಡಬೇಡಿ' ಎಂದು ಕೆಆರ್‌ಡಿಐಎಲ್ ವ್ಯವಸ್ಥಾಪಕ ನಿರ್ದೇಶಕರ ಹೆಸರಿಗೆ ಪತ್ರ ಬರೆಯಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ