
ಅಮೆರಿಕ ಪ್ರಜೆಗಳಿಗೆ ವಂಚನೆ: ಆರೋಪಿ ಬಂಧನ
ಅಹಮದಾಬಾದ್: ಅಂತರರಾಷ್ಟ್ರೀಯ ಹಣಕಾಸು ವಂಚನೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಪ್ರಮುಖ ಆರೋಪಿಯನ್ನು ಅಹಮದಾಬಾದ್‌ನಲ್ಲಿ ಬುಧವಾರ ಬಂಧಿಸಿದೆ.
ಅಂಕಿತ್ ಸತೀಶ್ಚಂದ್ರ ಪಾಂಡೆ ಬಂಧಿತ. ‘ಆರೋಪಿಯು ಅಹಮದಾಬಾದ್‌ನಲ್ಲಿರುವ ಕಾನೂನುಬಾಹಿರ ಕಾಲ್ ಸೆಂಟರ್‌ಗಳ ಮೂಲಕ 2024ರಿಂದಲೂ ಅಮೆರಿಕದ ಪ್ರಜೆಗಳಿಗೆ ಅಂದಾಜು ₹70 ಕೋಟಿಯಷ್ಟು ವಂಚಿಸಿದ್ದಾನೆ’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಈ ಕುರಿತು ಎಫ್‌ಐಆರ್ ದಾಖಲಾಗಿತ್ತು. ಅಹಮದಾಬಾದ್‌ನ ವಿವಿಧ ಸ್ಥಳಗಳಲ್ಲಿ ವ್ಯಾಪಕ ಶೋಧ ಕೈಗೊಳ್ಳಲಾಗಿತ್ತು. ಡಿಜಿಟಲ್ ಸಾಕ್ಷ್ಯಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಸಾಧನಗಳನ್ನು ಕೂಡ ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.