
ಚಿಂತಾಮಣಿ: ತಿಂಗಳ ಕವಿ ಸ್ಮರಣಾ ಕಾರ್ಯಕ್ರಮ ಯಶಸ್ವಿ
ಚಿಂತಾಮಣಿ: ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಗರದ ಅಂಜನಿ ಬಡಾವಣೆಯಲ್ಲಿ ಈಚೆಗೆ ತಿಂಗಳ ಕವಿ ಸ್ಮರಣಾ ಕಾರ್ಯಕ್ರಮ ನಡೆಯಿತು.
ಸಾಹಿತ್ಯ ವೇದಿಕೆ ಅಧ್ಯಕ್ಷ ಕಾಗತಿ ವೆಂಕಟರತ್ನಂ, ‘ಆಯಾ ತಿಂಗಳಲ್ಲಿ ಜನಿಸಿದ ಕವಿಗಳ ಹುಟ್ಟುಹಬ್ಬ ಆಚರಿಸಿ, ನೆನಪಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.
ನೇಪಾಳದಲ್ಲಿ ನಡೆದ ಪ್ರವಾಹದ ಕುರಿತು ಕವಿ ಸ್ಮರಣಾ ಕಾರ್ಯಕ್ರಮದಲ್ಲಿ ನೆನೆದರು.
ವೈ.ವಿ.ಸರಸ್ವತಮ್ಮ, ಎನ್.ವಿ.ಶ್ರೀನಿವಾಸ್, ನಿವೃತ್ತ ಶಿಕ್ಷಕ ಬಿ.ವೆಂಕಟೇಶಪ್ಪ, ಕು.ಕಾರುಣ್ಯ, ಕವಿ ಪರಮೇಶ್ವರ್ ಗುಪ್ತ ಭಾಗವಹಿಸಿದ್ದರು.