ಧಾರವಾಡ ಕೃಷಿ ಮೇಳ: ಕೊಳವೆಬಾವಿ ‍ನೀರು ನಿರ್ವಹಣೆಗೆ ‘ಸ್ಮಾರ್ಟ್‌’ ತಂತ್ರಜ್ಞಾನ

ಧಾರವಾಡ ಕೃಷಿ ಮೇಳ: ಕೊಳವೆಬಾವಿ ‍ನೀರು ನಿರ್ವಹಣೆಗೆ ‘ಸ್ಮಾರ್ಟ್‌’ ತಂತ್ರಜ್ಞಾನ

ಧಾರವಾಡ ಕೃಷಿ ಮೇಳ: ಕೊಳವೆಬಾವಿ ‍ನೀರು ನಿರ್ವಹಣೆಗೆ ‘ಸ್ಮಾರ್ಟ್‌’ ತಂತ್ರಜ್ಞಾನ

ಧಾರವಾಡ: ಕೃಷಿ ಮೇಳದ ಸ್ಮಾರ್ಟ್‌ ಫಾರ್ಮಿಂಗ್‌ ಪ್ರಾತ್ಯಕ್ಷಿಕೆ ಮಳಿಗೆಯಲ್ಲಿ ಅಂತರ್ಜಾಲ ಆಧಾರಿತ (ಐಒಟಿ) ನೀರು ನಿರ್ವಹಣೆ ವ್ಯವಸ್ಥೆಯ ತಂತ್ರಜ್ಞಾನ ಪ್ರದರ್ಶಿಸಲಾಗಿದೆ. ಮೊಬೈಲ್‌ ಫೋನ್‌ ಆ್ಯಪ್‌ ಬಳಸಿ ನಿರ್ವಹಿಸುವ ಸ್ಮಾರ್ಟ್‌ ತಂತ್ರಜ್ಞಾನವಿದು.

ಕೃಷಿ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡೆ ಮತ್ತು ವ್ಯಾಯಾಮ ಶಾಲೆ ಕಟ್ಟಡದ ಹಿಂಭಾಗದಲ್ಲಿ ಆಯೋಜಿಸಿರುವ ಸ್ಮಾರ್ಟ್‌ ಫಾರ್ಮಿಂಗ್‌ ಮಳಿಗೆಯಲ್ಲಿ ಕೃಷಿ ಹೃದಯ ಕಂಪನಿ ಈ ತಂತ್ರಜ್ಞಾನ ಪ್ರದರ್ಶಿಸಿದೆ.

ಕೊಳವೆಬಾವಿಗೆ ಅಳವಡಿಸಿದ ಮೋಟಾರ್‌ ‘ಆನ್‌’ ಮತ್ತು ‘ಆಫ್‌’, ಮೋಟಾರ್‌ ಚಾಲನೆ ಸಮಯ ನಿಗದಿ, ಕೊಳವೆ ಬಾವಿಯಲ್ಲಿ ನೀರು ಖಾಲಿಯಾದಾಗ ಮೋಟಾರ್‌ ‘ಡ್ರೈ ರನ್‌’ ಆಗದಂತೆ ನಿಗಾ ವ್ಯವಸ್ಥೆ ಮೊದಲಾದವನ್ನು ಈ ತಂತ್ರಜ್ಞಾನ ಒಳಗೊಂಡಿದೆ.

7.5 ಎಚ್‌.ಪಿಯಿಂದ 35 ಎಚ್‌.ಪಿ ಸಾಮರ್ಥ್ಯ ಮೋಟಾರ್‌ ಪಂಪ್‌ ಸೆಟ್‌ಗಳಿಗೆ ಈ ತಂತ್ರಜ್ಞಾನ ಅಳವಡಿಸಬಹುದಾಗಿದೆ. ಈ ತಂತ್ರಜ್ಞಾನ ಬಳಕೆಗೆ ಪ್ರತಿ ವರ್ಷ ಕರೆನ್ಸಿ ಹಾಕಿಸಬೇಕು.

ಕೊಳವೆಬಾವಿ ಪಂಪ್‌ಸೆಟ್‌ನ ಸ್ಟಾರ್ಟರ್ ಜತೆಗೆ ಆಟೊಮ್ಯಾಟಿಕ್‌ ಸ್ಟಾರ್ಟರ್‌ ಕಂಟ್ರೋಲ್‌ ಸಾಧನವನ್ನು ಅಳವಡಿಸಬೇಕು. ಅಥವಾ ಹೊಸ ಡಿಒಎಲ್‌ ಪ್ಯಾನಲ್‌ ಅಳವಡಿಸಬಹುದಾಗಿದೆ. ಮೊಬೈಲ್‌ ಫೋನ್‌ ‘ಮೋಟಾರ್‌ ಕಂಟ್ರೋಲ್‌ ಆ್ಯಪ್‌’ ಮೂಲಕ ನಿರ್ವಹಣೆ ಮಾಡಬಹುದು

‘ಆ್ಯಪ್‌ ಮೂಲಕವೇ ಮೋಟಾರ್‌ ಆನ್‌ ಮತ್ತು ಆಫ್‌ ಮಾಡಬಹುದು. ಮೋಟಾರ್‌ ಚಾಲನೆ ಸಮಯ (ಟೈಮರ್‌) ನಿಗದಿಪಡಿಸಬಹುದು. ಕೊಳವೆ ಬಾವಿಯಲ್ಲಿ ನೀರು ಇಲ್ಲದಿದ್ದರೆ ಮೋಟಾರ್‌ ತಾನಾಗಿಯೇ ಆಫ್‌ ಆಗುತ್ತದೆ. ಮೋಟಾರ್‌ ಹಾನಿಯಾದರೆ ಸೂಚನೆ ನೀಡುತ್ತದೆ, ಕಾರಣವನ್ನು ತಿಳಿಸುತ್ತದೆ’ ಎಂದು ಎಂಜಿನಿಯರ್‌ ಅಭಿಷೇಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ