ಕಲಬುರಗಿ: ಮಂಗಲಮೂರ್ತಿಗೆ ಅದ್ದೂರಿ ವಿದಾಯ

ಕಲಬುರಗಿ: ಮಂಗಲಮೂರ್ತಿಗೆ ಅದ್ದೂರಿ ವಿದಾಯ

ಕಲಬುರಗಿ: ಮಂಗಲಮೂರ್ತಿಗೆ ಅದ್ದೂರಿ ವಿದಾಯ

ಕಲಬುರಗಿ: ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ 11ನೇ ದಿನದ ವಿಸರ್ಜನಾ ಮೆರವಣಿಗೆ ಅನಂತ ಚತುದರ್ಶಿಯ ದಿನವಾದ ಶುಕ್ರವಾರ ಸಂಭ್ರಮದಿಂದ ಜರುಗಿತು.

‘ಗಣಪತಿ ಬಪ್ಪಾ ಮೋರಯಾ, ಮಂಗಳಮೂರ್ತಿ ಮೋರಯಾ’, ‘ಗಜಾನನ ಮಹಾರಾಜ ಕೀ’ ಎಂದು ಜಯಘೋಷ ಮೊಳಗಿಸಿದ ಭಕ್ತರು, ಶ್ರದ್ಧೆಯಿಂದ ಪೂಜಿಸಿ ‘ಗೌರಿಸುತ’ನನ್ನು ಬೀಳ್ಕೊಟ್ಟರು. ಅದಕ್ಕೂ ಮುನ್ನ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು. ನಗರದ ಚೌಕ್ ವೃತ್ತ, ಜಗತ್ ವೃತ್ತ, ಲೋಹರ್‌ ಗಲ್ಲಿ ಸೇರಿದಂತೆ ಹಲವೆಡೆ ತಡರಾತ್ರಿ ತನಕ ಸಡಗರ ಮನೆಮಾಡಿತ್ತು.

ಒಂದೆಡೆ ಡೊಳ್ಳು ಕುಣಿತ, ಹಲಗೆ ವಾಹನದಂಥ ಕಲಾತಂಡಗಳು, ಮತ್ತೊಂದೆಡೆ ಧ್ವನಿವರ್ಧಕಗಳಿಂದ ಹೊಮ್ಮುತ್ತಿದ್ದ ಕಿವಿಗಡಚ್ಚಿಕ್ಕುವಂಥ ಸಂಗೀತವು ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ರಂಗು ತುಂಬಿತು. ಆಗಸದಲ್ಲಿ ಸಿಡಿಮದ್ದುಗಳು ಚಿತ್ತಾರ ಬಿಡಿಸಿದವು. ಯುವಜನರು ಅಬ್ಬರದ ಸಂಗೀತಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಕಣ್ಣುಕೋರೈಸುವಂಥ ಬೆಳಕಿನ ಚಿತ್ತಾರ ಯುವಜನರ ಹುಮಸ್ಸು ಹೆಚ್ಚಿಸಿತು.

ಮೆರವಣಿಗೆಯ ಮಾರ್ಗದಲ್ಲಿ ತಮ್ಮ ಮನೆಗಳ ಮುಂದೆ ಬಂದ ಗಣೇಶ ಮೂರ್ತಿಗಳಿಗೆ ಮಹಿಳೆಯರು ಆರತಿ ಬೆಳಗಿ, ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು. ಅಲ್ಲಲ್ಲಿ ಯುವಕರು ‘ಜೈ ಶ್ರೀರಾಮ’ ಘೋಷಣೆ ಮೊಳಗಿಸಿ ಖುಷಿಪಟ್ಟರು. ಗಣೇಶ ಮೂರ್ತಿಗಳ ಮೆರವಣಿಗೆಯನ್ನು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಂಡರು.

ಶುಕ್ರವಾರ ಸಂಜೆ ಹೊತ್ತಿಗೆ ಪಾರ್ವತಿ ಸುತನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವರು ಎದುರಿನ ಹಣ್ಣು–ಕಾಯಿಗಳು ಸವಾಲು ನಡೆಯಿತು. ನಂತರ ಗಣೇಶ ಮೂರ್ತಿಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಮೆರವಣಿಗೆ ಮೂಲಕ ಶರಣಬಸವೇಶ್ವರ ಕೆರೆ ಆವರಣದತ್ತ ತಂದರು.

ಪಾಲಿಕೆ ಸಿಬ್ಬಂದಿ ಬೃಹತ್ ಕ್ರೇನ್‌ಗಳನ್ನು ಬಳಸಿ ಅಪ್ಪ ಕೆರೆ ಆವರಣದಲ್ಲಿ ನಿರ್ಮಿಸಿರುವ ಕೃತಕ ಹೊಂಡದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು. ಸಂಜೆಯಿಂದ ಶುರುವಾದ ಮೂರ್ತಿಗಳ ವಿಸರ್ಜನಾ ಮೆರವಣಿಗೆಯು ತಡರಾತ್ರಿ ತನಕವೂ ಸಾಗಿತ್ತು. ನಗರದ ಜಗತ್ ವೃತ್ತ, ಸೂಪರ್‌ ಮಾರ್ಕೆಟ್‌ ಹಾಗೂ ಲಾಲಗೇರಿ ಕ್ರಾಸ್‌ ಕಡೆಯಿಂದ ಅಪ್ಪ ಕೆರೆ ಸಂಪರ್ಕಿಸುವ ರಸ್ತೆಯಲ್ಲಿಯಲ್ಲಿ ಗಣೇಶ ಮೂರ್ತಿಗಳು ಸಾಲುಗಟ್ಟಿದ್ದವು.

ಮೂರ್ತಿಗಳ ವಿಸರ್ಜನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

‘ಶುಕ್ರವಾರ 64 ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಯಾಗಿವೆ. ಈ ಮೂರ್ತಿಗಳ ಮೆರವಣಿಗೆ ಮಾರ್ಗದಲ್ಲಿ ಹೆಚ್ಚುವರಿಯಾಗಿ ಸಿಸಿಟಿವಿ ಕ್ಯಾಮೆರಾಗಳು, ಕೆಎಸ್‌ಆರ್‌ಪಿ ತುಕಡಿಗಳು, ಸಿಎಆರ್‌ ಸಿಬ್ಬಂದಿ, ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ಅಗತ್ಯ ಭದ್ರತೆ ಒದಗಿಸಲಾಗಿತ್ತು’ ಎಂದು ಪೊಲೀಸ್‌ ಕಮಿಷನರ್ ಶರಣಪ್ಪ ಎಸ್‌.ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಣೇಶ ಮೂರ್ತಿ ವಿಸರ್ಜನಾ ಕೊಳದಲ್ಲಿ ಪಾಲಿಕೆಯಿಂದ ಈಜು ತಜ್ಞರು, ಕ್ರೇನ್‌ ನಿರ್ವಾಹಕರು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು’ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ