ಕಲಬುರಗಿ| ಎಸಿಸಿಯಿಂದ ಪರಿಸರ ಮಾಲಿನ್ಯ: ಕ್ರಮಕ್ಕೆ ಒತ್ತಾಯ

ಕಲಬುರಗಿ| ಎಸಿಸಿಯಿಂದ ಪರಿಸರ ಮಾಲಿನ್ಯ: ಕ್ರಮಕ್ಕೆ ಒತ್ತಾಯ

ಕಲಬುರಗಿ| ಎಸಿಸಿಯಿಂದ ಪರಿಸರ ಮಾಲಿನ್ಯ: ಕ್ರಮಕ್ಕೆ ಒತ್ತಾಯ

ವಾಡಿ: ಸ್ಥಳೀಯ ಎಸಿಸಿ ಸಿಮೆಂಟ್ ಕಾರ್ಖಾನೆಯ ಅವೈಜ್ಞಾನಿಕ ಕ್ರಮಗಳಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದ್ದು, ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಶ್ರೀನಿವಾಸ ಗುಡಿ ಚೌಕ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದ ಸಂಘಟನೆ ಪದಾಧಿಕಾರಿಗಳು, ಎಎಫ್ಆರ್ ಘಟಕದಿಂದ ನಿರಂತರ ದುರ್ನಾತ ಬರುತ್ತಿರುವುದರಿಂದ ಸಾರ್ವಜನಿಕರ ಜೀವಕ್ಕೆ ಕಂಟಕ ಉಂಟಾಗುತ್ತಿದ್ದು ಜನರ ಆರೋಗ್ಯದ ಜತೆಗೆ ಚೆಲ್ಲಾಟವಾಡುತ್ತಿರುವ ಕಾರ್ಖಾನೆ ವಿರುದ್ಧ ಕ್ರಮ ಜರುಗಿಸಬೇಕು’ ಎಂದರು.

ಕಾರ್ಖಾನೆಯಿಂದ ಹೊಗೆ ಮತ್ತು ರಾಸಾಯನಿಕ ಪದಾರ್ಥಗಳು ಹೊರಬರುತ್ತಿದ್ದು ಸ್ಥಳೀಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕಾರ್ಖಾನೆಯ ಗಣಿಗಾರಿಕೆಯಿಂದ ಅಂತರ್ಜಲ ಸಂಪೂರ್ಣ ಕಲುಷಿತಗೊಂಡು, ಜತೆಗೆ ಭೂಕುಸಿತ ಉಂಟಾಗಿ ಅಂತರ್ಜಲ ಬತ್ತಿಹೋಗುತ್ತಿದೆ. ತರಬೇತಿ ಪಡೆದ ಸ್ಥಳೀಯ ಯುವಕರಿಗೆ ಉದ್ಯೋಗ ನೀಡದೆ ವಂಚಿಸುತ್ತಿದೆ ಎಂದು ದೂರಿದರು. ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ, ತಾಲ್ಲೂಕು ಸಂಚಾಲಕ ಶಿವಮೂರ್ತಿ ಪಾಮನೂರು, ತಾಲ್ಲೂಕು ಅಧ್ಯಕ್ಷ ಸಾಬಣ್ಣ ಚಿತ್ತಾಪುರಕರ, ಸಿದ್ದು ಪಂಚಾಳ, ಬಸವರಾಜ ಪ್ರಭು, ಶರಣು ದೊರಿ, ದೇವರಾಜ ಮಡಿವಾಳ, ರೋಕೇಶ್ ಮಹಾದೇವ, ವಸೀಮ್ ಅಕ್ರಂ, ಶೇಖ್ ನಿಸಾರ್, ಮೈಲಾರಿ, ಕಿರಣ ನಾಟೆಕಾರ, ದಿನೇಶ್ ಮುತ್ತಗೋಡ, ರಘುವೀರ ಕಟ್ಟಿ, ಕಾಶಿನಾಥ ಕಟ್ಟಿ, ರವಿಚಂದ್ರ, ಭೀಮರಾಯ ಕೊಂಚೂರು, ನಾವಬ್ ಮುನ್ಸಿ, ನಾಗೇಂದ್ರ ಬುರ್ಲಿ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ