ಕೆಪಿಎಸ್‌ಸಿ ಅಕ್ರಮ: ಟ್ಯಾಬ್ ನಾಶ ಪಡಿಸಿದ್ದ ಘ್ಯಾನೇಂದ್ರ ಕುಮಾರ್ ಗಂಗ್ವಾರ್

ಕೆಪಿಎಸ್‌ಸಿ ಅಕ್ರಮ: ಟ್ಯಾಬ್ ನಾಶ ಪಡಿಸಿದ್ದ ಘ್ಯಾನೇಂದ್ರ ಕುಮಾರ್ ಗಂಗ್ವಾರ್

ಕೆಪಿಎಸ್‌ಸಿ ಅಕ್ರಮ: ಟ್ಯಾಬ್ ನಾಶ ಪಡಿಸಿದ್ದ ಘ್ಯಾನೇಂದ್ರ ಕುಮಾರ್ ಗಂಗ್ವಾರ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಕ್ರಮ ಪ್ರಕರಣದಲ್ಲಿ ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರು ತಮ್ಮ ಬಳಿಯಿದ್ದ ಟ್ಯಾಬ್ ನಾಶ ಪಡಿಸಿರುವುದು ಸಿಐಡಿ ತನಿಖೆ ವೇಳೆ ಗೊತ್ತಾಗಿದೆ.

ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆ ಅಧಿಕಾರಿಗಳ ತಂಡ ನಡೆಸಿದ ದಾಳಿ ವೇಳೆ ರಾಜ್ಯ ತೊರೆದಿದ್ದ ಆರೋಪಿ, ತಮ್ಮ ಸ್ವಗ್ರಾಮದಲ್ಲಿದ್ದರು. ಈ ವೇಳೆ ನೋಟಿಸ್ ನೀಡಲು ಮುಂದಾಗಿದ್ದ ಅಧಿಕಾರಿಗಳ ಎದುರು ತಮ್ಮ ಕೈಯಲ್ಲಿದ್ದ ಟ್ಯಾಬ್‌ ಅನ್ನು ನೆಲಕ್ಕೆ ಎಸೆದು ಒಡೆದಿದ್ದರು.

ಆರೋಪಿ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ತಮ್ಮ ಅಧಿಕೃತ ಟ್ಯಾಬ್ ಮೂಲಕ ಪ್ರಶ್ನೆಪತ್ರಿಕೆಗಳ ಫೋಟೊಗಳನ್ನು ತೆಗೆದುಕೊಂಡಿದ್ದರು. ನಂತರ ಅದನ್ನು ಪೆನ್‌ಡ್ರೈವ್‌ಗೆ ವರ್ಗಾಯಿಸಿ ಮಧ್ಯವರ್ತಿ ಬಸವರಾಜ ಕನ್ನಾಳೆಗೆ ನೀಡಿದ್ದರು ಎಂದು ಆರೋಪಿಸಲಾಗಿದೆ.

ಹಗರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಾಧಾರಗಳು ಅಧಿಕಾರಿಗಳಿಗೆ ಸಿಗಬಾರದು ಎಂಬ ಉದ್ದೇಶದಿಂದ ಟ್ಯಾಬ್ ಅನ್ನು ನಾಶಪಡಿಸಿದ್ದಾರೆ. ವಿಚಾರಣೆ ವೇಳೆ ಟ್ಯಾಬ್ ನಾಶಪಡಿಸಿದ್ದರ ಕುರಿತು ಸಮರ್ಪಕ ಉತ್ತರ ನೀಡಿಲ್ಲ ಎಂದು ತನಿಖಾ ಮೂಲಗಳು ತಿಳಿಸಿವೆ.

ಕನ್ನಾಳೆ ಆಪ್ತನಿಗೆ ಶೋಧ: ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಆಪ್ತ ಪವನ್ ಎಂಬಾತ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಅಧಿಕಾರಿಗಳು ಶೋಧಕಾರ್ಯ ಮುಂದುವರೆಸಿದ್ದಾರೆ.‌

ಪವನ್‌ ಸ್ನೇಹಿತ ಬೀದರ್ ಜಿಲ್ಲೆಯ ಬಡ ಕುಟುಂಬದ ಅಭ್ಯರ್ಥಿಯೊಬ್ಬರು ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಬರೆದಿದ್ದರು. ಕನ್ನಾಳೆ ಮೂಲಕ ಉದ್ಯೋಗ ಪಡೆದುಕೊಳ್ಳಲು ಅವರ ಬಳಿ ಹಣವಿರಲಿಲ್ಲ. ಹಾಗಾಗಿ ಸ್ನೇಹಿತನಿಗೆ ಉದ್ಯೋಗ ಕೊಡಿಸುವ ಸಲುವಾಗಿ ಪವನ್, ಬೀದರ್ ಜಿಲ್ಲೆಯ ಮತ್ತೊಬ್ಬ ಅಭ್ಯರ್ಥಿಯನ್ನು ಪತ್ತೆ ಮಾಡಿ, ಉದ್ಯೋಗ ಕೊಡಿಸುವುದಾಗಿ ₹30 ಲಕ್ಷ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದ್ದ. ಆ ಹಣದಲ್ಲಿ ₹17 ಲಕ್ಷವನ್ನು ತನ್ನ ಸ್ನೇಹಿತನ ಹೆಸರಿನಲ್ಲಿ ಕನ್ನಾಳೆಗೆ ನೀಡಿ ಉದ್ಯೋಗ ಕೊಡಿಸುವಂತೆ ಹೇಳಿದ್ದ. ಇದು ಸಿಐಡಿ ವಿಚಾರಣೆ ವೇಳೆ ಗೊತ್ತಾಗಿದೆ.

11 ಅಭ್ಯರ್ಥಿಗಳಿಂದ ₹1.45 ಕೋಟಿ ಮೊತ್ತವನ್ನು ಕನ್ನಾಳೆ ಮತ್ತು ಅವರ ತಂಡ ಪಡೆದುಕೊಂಡಿರುವುದನ್ನು ಸಿಐಡಿ ತನಿಖೆ ವೇಳೆ ಪತ್ತೆ ಮಾಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ