ಕೊರಟಗೆರೆ: 'ಪ್ರಜಾಸೇವೆ' ಅಭಿಯಾನದಿಂದ ಜನರಿಗೆ ನೆರವಾಗುವುದೇ?

ಕೊರಟಗೆರೆ: 'ಪ್ರಜಾಸೇವೆ' ಅಭಿಯಾನದಿಂದ ಜನರಿಗೆ ನೆರವಾಗುವುದೇ?

ಕೊರಟಗೆರೆ: 'ಪ್ರಜಾಸೇವೆ' ಅಭಿಯಾನದಿಂದ ಜನರಿಗೆ ನೆರವಾಗುವುದೇ?

ಕೊರಟಗೆರೆ: ಜನರ ಬಳಿಗೆ ಆಡಳಿತ, ಕುಂದುಕೊರತೆ ಸಭೆ, ಜನಸ್ಪಂದನಾ, ಪ್ರಜಾಸೇವೆ ಅಭಿಯಾನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದರೂ ಜನರ ಸಮಸ್ಯೆಗಳನ್ನು ಪರಿಹರಿಸಲು ಆಡಳಿತ ಯಂತ್ರಕ್ಕೆ ಸಾಧ್ಯವಾಗುತ್ತಿಲ್ಲ.

ಪ್ರತಿ ದಿನವೂ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ಕಚೇರಿ ಬಾಗಿಲು ತಟ್ಟುವುದು ಮಾತ್ರ ನಿಂತಿಲ್ಲ. ಈಗ ‘ಪ್ರಜಾಸೇವೆ’ ಮೂಲಕವಾದರೂ ಪರಿಹಾರ ಸಿಗುವುದೇ? ಎಂದು ಸಾರ್ವಜನಿಕರು ಕಾದು ಕುಳಿತಿದ್ದಾರೆ.

ಇತರ ತಾಲ್ಲೂಕುಗಳಿಗೆ ಹೋಲಿಸಿದರೆ ಕೊರಟಗೆರೆ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಣ್ಣ ಕೆಲಸಕ್ಕೂ ಕಚೇರಿಗೆ ಸುತ್ತಾಡುವುದು ಕಂಡು ಬರುತ್ತಿದೆ.

‘ಕ್ಷೇತ್ರದ ಶಾಸಕರೂ ಆದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ತಾಲ್ಲೂಕಿಗೆ ಭೇಟಿ ನೀಡಿದ ಸಮಯದಲ್ಲಿ ಅಧಿಕಾರಿಗಳು ತಮ್ಮ ‘ಚಟುವಟಿಕೆ’ ತೋರ್ಪಡಿಸುತ್ತಾರೆ. ನಂತರ ಜನರ ಕೈಗೆ ಸಿಗುವುದಿಲ್ಲ. ಸಾರ್ವಜನಿಕರ ಸಣ್ಣಪುಟ್ಟ ಕೆಲಸ ಮಾಡಿಸುವುದೂ ಕಷ್ಟಕರವಾಗಿದೆ. ರೈತರು ಅರ್ಜಿ ಹಿಡಿದುಕೊಂಡು ನಮ್ಮ ಬಳಿಗೆ ಬರುತ್ತಿದ್ದಾರೆ. ಏನು ಮಾಡುವುದು ಎಂಬುದೇ ತೋಚುತ್ತಿಲ್ಲ’ ಎಂದು ಪರಮೇಶ್ವರ ಆಪ್ತರೂ ಆಗಿರುವ ಕಾಂಗ್ರೆಸ್ ಮುಖಂಡರೊಬ್ಬರು ವಾಸ್ತವವನ್ನು ಬಿಚ್ಚಿಡುತ್ತಾರೆ.

‘ತಾಲ್ಲೂಕು ಆಡಳಿತ ಕೇಂದ್ರದ ಪಡಸಾಲೆ, ವಿವಿಧ ಇಲಾಖೆಗಳ ಕಚೇರಿಗಳು ಹಾಗೂ ಅಧಿಕಾರಿಗಳ ಕೊಠಡಿಗಳ ಮುಂದೆ ಪ್ರತಿನಿತ್ಯ ಕಾಣಿಸುವ ಜನರಿಗೆ ಉತ್ತರ ಹೇಳಿ ಸಾಕಾಗಿ ಹೋಗಿದೆ. ಅಧಿಕಾರಿಗಳಿಗೆ ಹೇಳಿದರೆ ಮಾತು ಕೇಳುವುದಿಲ್ಲ. ಜನರಿಗೆ ಸ್ಪಂದಿಸಿ ಕೆಲಸ ಮಾಡಿಕೊಡುತ್ತಿಲ್ಲ. ಇಂತಹ ವಿಚಾರಗಳ ಕಡೆಗೆ ಸಚಿವರು ಗಮನ ಹರಿಸುವುದಿಲ್ಲ. ಯಾರ ಬಳಿ ಜನರ ಸಮಸ್ಯೆ ಹೇಳಿಕೊಳ್ಳುವುದು. ಪಕ್ಷ ಆಡಳಿತದಲ್ಲಿ ಇದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ’ ಎಂದು ಹೆಸರು ಹೇಳಲು ಬಯಸದ ಬ್ಲಾಕ್ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜಿ.ಪರಮೇಶ್ವರ ಅವರು ಕ್ಷೇತ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮಾತ್ರ ಅಧಿಕಾರಿಗಳ ಚಟುವಟಿಕೆಗಳು ಚುರುಕಾಗುತ್ತವೆ. ಜನರ ಸಮಸ್ಯೆಗಳನ್ನು ಆಲಿಸುವ ಸಭೆಗಳು, ಸ್ಥಳ ಪರಿಶೀಲನೆಗಳು, ಅಧಿಕಾರಿಗಳ ಓಡಾಟ ಎಲ್ಲವೂ ವೇಗ ಪಡೆಯುತ್ತವೆ. ಆದರೆ ಅವರು ಕ್ಷೇತ್ರದಿಂದ ತೆರಳಿದ ಬಳಿಕ ಹಳೆಯ ಸ್ಥಿತಿಯೇ ಮುಂದುವರಿಯುತ್ತದೆ. ಜನರ ಕೆಲ ಮಾಡುತ್ತಿಲ್ಲ. ಅಭಿವೃದ್ಧಿಯಲ್ಲೂ ಪ್ರಗತಿ ಸಾಧಿಸುತ್ತಿಲ್ಲ ಎನ್ನುತ್ತಾರೆ.

ಇದು ಕೆಲವು ಮುಖಂಡರ ನೋವಲ್ಲ. ಕಾಂಗ್ರೆಸ್‌ನ ಬಹುತೇಕ ನಾಯಕರು ಇಂತಹುದೇ ಅಭಿಪ್ರಾಯ ವ್ಯಕ್ತಪಡಿಸಿ, ಅಸಹಾಯಕತೆ ತೋಡಿಕೊಳ್ಳುತ್ತಾರೆ.

ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಮಾಡಿಸಿಕೊಳ್ಳಲು ಹಣ ನೀಡಬೇಕಾಗುತ್ತದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-17-1007040931

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ