
ವಿಶ್ವಕರ್ಮ ಸಮಾಜದವರು ಶ್ರಮಜೀವಿಗಳು: ಶಾಸಕ ಸಿದ್ದು ಸವದಿ
ರಬಕವಿ ಬನಹಟ್ಟಿ: ‘ವಿಶ್ವಕರ್ಮ ಸಮಾಜದವರನ್ನು ದೇವರ ಸೃಷ್ಟಿಕರ್ತರು ಎಂದು ಪರಿಗಣಿಸಲಾಗುತ್ತದೆ. ವಿಶ್ವಕರ್ಮರು ಪ್ರಪಂಚವನ್ನು, ಎಲ್ಲ ದೇವರನ್ನು ಮತ್ತು ಜೀವಿಗಳನ್ನು ಸೃಷ್ಟಿಸಿರುವುರಿಂದ ಅವರನ್ನು ವಿಶ್ವದ ಸೃಷ್ಟಿಕರ್ತ ಎಂದು ಪರಿಗಣಿಸಲಾಗುತ್ತದೆ’ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಗುರುವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ವಿಶ್ವಕರ್ಮ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
‘ವಿಶ್ವಕರ್ಮಿಗಳು ಕರಕುಶಲಗಾರರು ಮತ್ತು ಶ್ರಮ ಜೀವಿಗಳು. ವಿಶ್ವಕರ್ಮ ಸಮಾಜದವರು ತಮ್ಮ ವೃತ್ತಿಯ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಮತ್ತು ಸಮಾಜದ ಸಂಘಟನೆಗೆ ಮಹತ್ವ ನೀಡಬೇಕು’ ಎಂದು ಹೇಳಿದರು.
ಶಿರಸ್ತೇದಾರ ರಾಜಶೇಖರ ಸಾತಿಹಾಳ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಸದಾಶಿವ ಕುಂಬಾರ, ಚೇತನ ಭಜಂತ್ರಿ, ಮೌನೇಶ ಬಡಿಗೇರ, ಚಿದಾನಂದ ಪತ್ತಾರ, ಕಾಳಪ್ಪ ಪತ್ತಾರ, ವಂದನಾ ಪತ್ತಾರ, ಲಲಿತಾ ಪತ್ತಾರ, ಕಲಾ ಪತ್ತಾರ, ಸವಿತಾ ಬಡಿಗೇರ, ಪವನ ಪತ್ತಾರ, ಭಾಸ್ಕರ ಬಡಿಗೇರಇದ್ದರು.