‘ಟಾಕ್ಸಿಕ್’ ಗಳಿಕೆ ಮಧ್ಯೆ ನಿರ್ದೇಶಕರಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?

‘ಟಾಕ್ಸಿಕ್’ ಗಳಿಕೆ ಮಧ್ಯೆ ನಿರ್ದೇಶಕರಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?

‘ಟಾಕ್ಸಿಕ್’ ಗಳಿಕೆ ಮಧ್ಯೆ ನಿರ್ದೇಶಕರಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹300 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಇದರ ನಡುವೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ‘ಧುರಂಧರ್’ ಸಿನಿಮಾ ಯಶಸ್ಸನ್ನು ಎತ್ತಿಹಿಡಿದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಎಕ್ಸ್‌ನಲ್ಲಿ ರಾಮ್ ಗೋಪಾಲ್ ವರ್ಮಾ ಅವರು ಆದಿತ್ಯ ಧರ್ ನಿರ್ದೇಶನದ ಧುರಂಧರ್ ಯಶಸ್ಸಿನ ಕುರಿತು ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಪೋಸ್ಟ್‌ನಲ್ಲಿ ಹೇಳಿದ್ದೇನು?

‘ಪ್ರತಿಯೊಬ್ಬ ನಿರ್ದೇಶಕನೂ ಧುರಂಧರ್‌ನಿಂದ ಕಲಿಯಬೇಕಾದ ದೊಡ್ಡ ಪಾಠವೆಂದರೆ, ಅಲ್ಲಿನ ಪಾತ್ರಗಳು ಪ್ರೇಕ್ಷಕರಷ್ಟೇ ನೈಜವಾಗಿ ಕಾಣಿಸುತ್ತವೆ. ಹಿಂದೆ ಜೇಮ್ಸ್ ಕ್ಯಾಮರಾನ್ ‘ಟೈಟಾನಿಕ್’ ನಂತಹ ಸಿನಿಮಾವನ್ನು ನೈಜವಾಗಿ ತೋರಿಸಲು ಅಷ್ಟು ಪ್ರಮಾಣದಲ್ಲಿ ಖರ್ಚು ಮಾಡಬೇಕಾಗಿತ್ತು. ಆದರೆ ನಮ್ಮ ದೇಶದ ದುಬಾರಿ ಬಜೆಟ್ ಸಿನಿಮಾಗಳು ಇದರ ತದ್ವಿರುದ್ಧ ಕೆಲಸ ಮಾಡುತ್ತಿವೆ’ ಎಂದಿದ್ದಾರೆ.

‌‌'ಧುರಂಧರ್' ಚಿತ್ರದಲ್ಲಿನ ಹಿಂಸೆಗೆ ಒಂದು ಅರ್ಥವಿದೆ. ಆದರೆ ಬಹುತೇಕ ಸಿನಿಮಾಗಳಲ್ಲಿ ಹಿಂಸೆ ಎಂಬುದು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿದೆ. ಕಥೆಗಿಂತ ಶೈಲಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಚಿತ್ರಮಂದಿರದಿಂದ ಹೊರಬರುವಾಗ ಪ್ರೇಕ್ಷಕನಿಗೆ ಹೀರೋನ ಹೇರ್‌ಸ್ಟೈಲ್, ಆತನ ಹೆಜ್ಜೆ ಮತ್ತು ಮ್ಯಾನರಿಸಂ ಮಾತ್ರ ನೆನಪಿರುತ್ತದೆ ಹೊರತು, ಒಬ್ಬ ಮನುಷ್ಯನಾಗಿ ಆತನ ಆಂತರ್ಯದ ಬಗ್ಗೆ ಒಂದೂ ವಿಷಯ ತಿಳಿಯುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ