ಮುಜಾಹಿದ್ದೀನ್‌ಗಳಿಂದ ಬಂಧನಕ್ಕೊಳಗಾಗಿದ್ದೇನೆ: ಕೇರಳಂನ ಮಹಿಳಾ ಟ್ರಾವೆಲ್ ವ್ಲಾಗರ್

ಮುಜಾಹಿದ್ದೀನ್‌ಗಳಿಂದ ಬಂಧನಕ್ಕೊಳಗಾಗಿದ್ದೇನೆ: ಕೇರಳಂನ ಮಹಿಳಾ ಟ್ರಾವೆಲ್ ವ್ಲಾಗರ್

ಮುಜಾಹಿದ್ದೀನ್‌ಗಳಿಂದ ಬಂಧನಕ್ಕೊಳಗಾಗಿದ್ದೇನೆ: ಕೇರಳಂನ ಮಹಿಳಾ ಟ್ರಾವೆಲ್ ವ್ಲಾಗರ್

ಕೊಚ್ಚಿ: ಅಫ್ಗಾನಿಸ್ತಾನದಲ್ಲಿದ್ದು ಹಲವು ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದ ಕೇರಳಂನ ಜನಪ್ರಿಯ ಮಹಿಳಾ ಟ್ರಾವೆಲ್ ವ್ಲಾಗರ್ ಒಬ್ಬರು, ತಾವು ಬಾಮಿಯಾನ್‌ನಲ್ಲಿ ‘ಮುಜಾಹಿದ್ದೀನ್‌ಗಳಿಂದ ಬಂಧನಕ್ಕೊಳಗಾಗಿದ್ದೇನೆ’ ಎಂದು ಸೋಮವಾರ(ಸೆ.14) ಹೇಳಿಕೊಂಡಿದ್ದು, ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸಹಾಯ ಕೋರಿದ್ದಾರೆ.

‘ಬ್ಯಾಕ್‌ಪ್ಯಾಕರ್ ಅರುಣಿಮಾ’ ಫೇಸ್‌ಬುಕ್ ಪುಟದ ಪೋಸ್ಟ್‌ನಲ್ಲಿ ಸ್ಥಳೀಯ ಅಧಿಕಾರಿಗಳಿಂದ ಬಂದಿದೆ ಎನ್ನಲಾದ ಅಧಿಕೃತ ಸಂವಹನದ ಅನುವಾದವನ್ನು ಅವರು ಹಂಚಿಕೊಂಡಿದ್ದು, ‘ನಾನು ಅಫ್ಗಾನಿಸ್ತಾನದಲ್ಲಿ ಮುಜಾಹಿದ್ದೀನ್‌ಗಳಿಂದ ಬಂಧನಕ್ಕೊಳಗಾಗಿದ್ದು, ಸಂಕಷ್ಟದಲ್ಲಿದ್ದೇನೆ’ ಎಂದು ಹೇಳಿದ್ದಾರೆ.

ಬಂಧನದ ಸಂದರ್ಭದ ಬಗ್ಗೆ ಅಥವಾ ಯಾರು ವಶಕ್ಕೆ ಪಡೆದಿದ್ದಾರೆ ಎಂಬುದರ ಕುರಿತು ಆ ಪೋಸ್ಟ್‌ನಲ್ಲಿ ಹೆಚ್ಚಿನ ಮಾಹಿತಿ ನೀಡಿಲ್ಲ.

ಅರುಣಿಮಾ ಅವರು ಅಫ್ಗಾನಿಸ್ತಾನದಲ್ಲಿ ಪ್ರವಾಸ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದದಲ್ಲಿ ಈ ಕುರಿತು ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು.

ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ದೃಢೀಕರಿಸಲು ಸಾಧ್ಯವಾಗಿಲ್ಲ ಎಂದು ಪಿಟಿಐ ತಿಳಿಸಿದೆ. ವಿದೇಶಾಂಗ ಸಚಿವಾಲಯವು ಕೂಡ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ