ಮೌನ ಕಾಯಕಯೋಗಿಗೆ ನಾಡಹಬ್ಬದ ಗೌರವ: ಜಾಲತಾಣಗಳಲ್ಲಿ ಸಂಭ್ರಮ ‌ಹಂಚಿಕೊಂಡ ಭಕ್ತರು

ಮೌನ ಕಾಯಕಯೋಗಿಗೆ ನಾಡಹಬ್ಬದ ಗೌರವ: ಜಾಲತಾಣಗಳಲ್ಲಿ ಸಂಭ್ರಮ ‌ಹಂಚಿಕೊಂಡ ಭಕ್ತರು

ಮೌನ ಕಾಯಕಯೋಗಿಗೆ ನಾಡಹಬ್ಬದ ಗೌರವ: ಜಾಲತಾಣಗಳಲ್ಲಿ ಸಂಭ್ರಮ ‌ಹಂಚಿಕೊಂಡ ಭಕ್ತರು

ಕೊಪ್ಪಳ: ‘ನಾಡಹಬ್ಬ ಮೈಸೂರು ದಸರಾವನ್ನು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟನೆ ‌ಮಾಡುವರು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ದಸರಾ ಉದ್ಘಾಟಿಸಲಿರುವ ಗವಿಮಠದ ಮೊದಲ ಸ್ವಾಮೀಜಿ ಇವರು. ನಾಡಿದ ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾದ ನಾಡಹಬ್ಬ ಉದ್ಘಾಟಕರ ಹೆಸರು ಮುಖ್ಯಮಂತ್ರಿ ಒಂದೆಡೆ ಘೋಷಣೆ ಮಾಡುತ್ತಿದ್ದರೆ ಇತ್ತ ಗವಿಸಿದ್ದೇಶ್ವರ ಸ್ವಾಮೀಜಿ ಇಲ್ಲಿನ ಗವಿಮಠದಲ್ಲಿ ಮೌನಾನುಷ್ಠಾನಕ್ಕೆ ಜಾರಿದ್ದರು. ಅವರನ್ನು ಕಾಣಲು, ಅಭಿನಂದಿಸಲು ಸಾಕಷ್ಟು ಸಂಖ್ಯೆಯಲ್ಲಿ ‌ಜನ ಗವಿಮಠದತ್ತ ಬಂದಿದ್ದರು. ಆದರೆ, ಅವರಿಗೆ ಸ್ವಾಮೀಜಿಯ ದರ್ಶನ ಭಾಗ್ಯ ಸಿಗಲಿಲ್ಲ.

ಮೌನಾನುಷ್ಠಾನದಲ್ಲಿದ್ದರೂ ನಿರಂತರ ಓದು, ಪೂರಕ ಮಾಹಿತಿ ಸಂಗ್ರಹ, ಜನರ ಬದುಕು‌ ಬೆಳಗಿಸುವ ಹಾಗೂ ಸಂಕಷ್ಟದಲ್ಲಿರುವ ದುಖಿಃತರ ನೋವು ದೂರ ಮಾಡಿ ಅವರಲ್ಲಿ‌ ಸಮಾಧಾನದ ಭಾವ ಮೂಡಿಸುವ ಬರಹಗಳನ್ನು ಓದುತ್ತಲೇ ಇರುತ್ತಾರೆ.

ಮೌನಾನುಷ್ಠಾನದ ಸಂದರ್ಭದಲ್ಲಿ ಸ್ವಾಮೀಜಿ ಏನು ಮಾಡುತ್ತಾರೆ ಎಂಬುದೇ ಅನೇಕ ಭಕ್ತರಿಗೆ ಕುತೂಹಲ. ಅವರು ಧ್ಯಾನವನ್ನು ಮಾಡುತ್ತ ದಿನ ಕಳೆಯುತ್ತಾರೆ. ದಿನಪೂರ್ತಿ ಪೂಜೆಯಲ್ಲಿ ತೊಡಗಿರುತ್ತಾರೆ ಎನ್ನುವ ಚರ್ಚೆಗಳನ್ನು ಜನ ಮಾಡುತ್ತಲೇ ಇರುತ್ತಾರೆ.

ಆದರೆ ಸ್ವಾಮೀಜಿ ಈ ಎಲ್ಲ ಕೆಲಸಗಳ ಜೊತೆಗೆ ನಿರಂತರವಾಗಿ ದಾರ್ಶನಿಕರ, ಜನರಲ್ಲಿ ಸಕಾರಾತ್ಮಕ ‌ಬದಲಾವಣೆ ತರಬಲ್ಲ ಬರಹಗಳ ಅಧ್ಯಯನ ‌ಮಾಡುತ್ತಾರೆ. ಮೌನದ ದಿನಗಳಲ್ಲಿ ಅವರಲ್ಲಿ‌ ಆಳವಾಗಿ ಸಂಗ್ರಹವಾಗುವ ವಿಚಾರಧಾರೆಗಳು ಕೋಟ್ಯಂತರ ಭಕ್ತರ ಮನಸ್ಸುಗಳನ್ನು ಅರಳಿಸಿವೆ. ಇನ್ನು ಬದುಕು‌ ಬೇಡವೇ ಬೇಡ ಎಂದುಕೊಂಡು ನಿರಾಶೆಯಲ್ಲಿ ಇದ್ದವರಿಗೆ ಮತ್ತೆ ಪುಟಿದೆದ್ದು ಜೀವನೋತ್ಸವ ಗಳಿಸಿಕೊಳ್ಳುವಂತೆ ಮಾಡುತ್ತವೆ.

ಇವು ಒಂದು ‌ನಿದರ್ಶನವಷ್ಟೇ. ಅನೇಕ ಸಾಮಾಜಿಕ ಕಾರ್ಯಗಳ‌ ಮೂಲಕ ಜನರಲ್ಲಿ‌ ಪರಿವರ್ತನೆ ತಂದವರು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ. ಪ್ರತಿವರ್ಷದ ಗವಿಮಠದ ಜಾತ್ರೆ ಕೇವಲ ಧಾರ್ಮಿಕ ಆಚರಣೆ ಅಲ್ಲ. ಸಾಮಾಜಿಕ ಚಿಂತನೆಗಳನ್ನು‌ ಜನರಲ್ಲಿ ‌ಬೇರೂರುವಂತೆ ಮಾಡಲು ಇರುವ ದೊಡ್ಡ ವೇದಿಕೆ.

ಪರಿಸರ ಉಳಿಸುವ ಅಗತ್ಯತೆ, ನೇತ್ರ ದಾನದ ಮಹತ್ವ, ಅಂಗವಿಕಲರ ಬಾಳಲ್ಲಿ ಕಲ್ಯಾಣ, ಅಂಗಾಂಗದಾನಗಳ ಮಹತ್ವ ಸಾರುವ ‌ಬೃಹತ್ ಜಾಗೃತಿ‌ ಜಾಥಾಗಳನ್ನು ಮಾಡಿದ ರೂವಾರಿಯೇ ಸ್ವಾಮೀಜಿ. ಹೂಳು ತುಂಬಿ ಹೋಗಿದ್ದ ಹಿರೇಹಳ್ಳ ಜಲಾಶಯದಲ್ಲಿ ಜನರ ಒಡಗೂಡಿ ಸ್ವಚ್ಛತಾ ಕಾರ್ಯ ಮಾಡಿದ್ದು, ಗಿಣಿಗೇರಾ ಕೆರೆ ಪ್ರವಾಸಿತಾಣವಾಗಿ ರೂಪಿಸಿದ್ದು, ಐದು ಸಾವಿರ ಬಡ ಮಕ್ಕಳಿಗೆ ಶಿಕ್ಷಣ, ವಸತಿ ಹಾಗೂ ಅನ್ನ ಕೊಟ್ಟು ಎಲ್ಲರೊಂದಿಗೆ ‌ಬೆರೆಯುತ್ತ ಸಮಾಜ ಮುಖಿಯಾಗಿ ಸ್ವಾಮೀಜಿ ಜನರೊಂದಿಗೆ ಸ್ನೇಹಮಯವಾಗಿ‌ ಇದ್ದಾರೆ.

ಆರಂಭದಲ್ಲಿ ದೊಡ್ಡ ಸದ್ದು ಮಾಡದೆ ತಮ್ಮ ‌ಪಾಡಿಗೆ ತಾವು ಕೆಲಸ ಮಾಡುವ ಕಾಯಕಯೋಗಿ ಸ್ವಾಮೀಜಿ ‌ಕಾರ್ಯಕ್ಕೆ ಬಳಿಕ ಅಪಾರ ಸಂಖ್ಯೆಯಲ್ಲಿ ‌ಜನ ಕೈಜೋಡಿಸುತ್ತಾರೆ. ಅವರ ಮೌನ ಕಾಯಕವನ್ನು ನೋಡಿ ಸಾಕಷ್ಟು ಸಂಖ್ಯೆಯಲ್ಲಿ ‌ಜನ ಅವರಿಂದ ಪ್ರೇರಣೆ ಪಡೆದಿದ್ದಾರೆ.

ಮದ್ಯದ ಹಾವಳಿ ವ್ಯಾಪಕವಾಗಿದ್ದ ಕೊಪ್ಪಳ ತಾಲ್ಲೂಕಿನ ಹಟ್ಟಿ ಗ್ರಾಮದಲ್ಲಿ ಅವರು ಆಡಿದ ಒಂದು ಪ್ರೇರಣಾದಾಯಕ ಮಾತು ಗ್ರಾಮದ ಚಿತ್ರಣವನ್ನೇ ಬದಲಿಸಿ ಗ್ರಾಮ ಸಂಪೂರ್ಣ ‌ಮದ್ಯ ಮಾರಾಟ ಮುಕ್ತವಾಯಿತು. ಇದರಿಂದ ಈ ಗ್ರಾಮ ರಾಜ್ಯಮಟ್ಟದ ಸಂಯಮ ಪ್ರಶಸ್ತಿಯನ್ನೂ ಪಡೆದುಕೊಂಡಿತು. ತಮ್ಮ‌ ನಡೆ,ನುಡಿ ಹಾಗೂ ಸರಳತೆಯಿಂದ ಜನರ ಹೃದಯದಲ್ಲಿ ‌ಸ್ಥಾನ ಗಳಿಸಿರುವ ಸ್ವಾಮೀಜಿ ಅವರನ್ನು ದಸರಾ ಉದ್ಘಾಟಿಸಲು ಆಯ್ಕೆ ಮಾಡಲಾಗಿದೆ. ಇದು ದಸರಾ ಹಬ್ಬದ ಕಳೆ ಹೆಚ್ಚಿಸಲಿದೆ.

ಜನತೆಗೆ ಸಂದ ಗೌರವ: ತಂಗಡಗಿ

‘ಮೈಸೂರು ದಸರಾವನ್ನು ಗವಿಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಲಿರುವುದು ಕಲ್ಯಾಣ ಕರ್ನಾಟಕದ ಜನತೆಗೆ ಹೆಮ್ಮೆಯ ಹಾಗೂ ಸಂತಸದ ಸಂಗತಿಯಾಗಿದೆ. ಕೊಪ್ಪಳದ ಗವಿಮಠದ ಸೇವಾ ಪರಂಪರೆ ಇಂದು ರಾಜ್ಯದ ಗಡಿಗಳನ್ನು ಮೀರಿ ಜನಮಾನಸದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. ಅಂತಹ ಪರಂಪರೆಯನ್ನು ಮುನ್ನಡೆಸುತ್ತಿರುವ ಗವಿಸಿದ್ಧೇಶ್ವರ ಶ್ರೀಗಳಿಗೆ ಮೈಸೂರು ದಸರಾ ಉದ್ಘಾಟನೆಯ ಗೌರವ ದೊರೆತಿರುವುದು ಜನತೆಗೆ ಸಂದ ಗೌರವ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ