ಗೋಕರ್ಣ: ಭಕ್ತರಿಂದ ಚಿನ್ನ ಎಗರಿಸಿ, ಪೊಲೀಸರಿಗೆ ಸಿಕ್ಕಿಬಿದ್ದ ಸಾಧುಗಳು

ಗೋಕರ್ಣ: ಭಕ್ತರಿಂದ ಚಿನ್ನ ಎಗರಿಸಿ, ಪೊಲೀಸರಿಗೆ ಸಿಕ್ಕಿಬಿದ್ದ ಸಾಧುಗಳು

ಗೋಕರ್ಣ: ಭಕ್ತರಿಂದ ಚಿನ್ನ ಎಗರಿಸಿ, ಪೊಲೀಸರಿಗೆ ಸಿಕ್ಕಿಬಿದ್ದ ಸಾಧುಗಳು

ಗೋಕರ್ಣ: ಧಾರ್ಮಿಕ ಕಾರ್ಯ ಮೂಲಕ ಸಮಸ್ಯೆ ಪರಿಹರಿಸುವುದಾಗಿ ನಂಬಿಸಿ ₹ 8 ಲಕ್ಷ ಮೌಲ್ಯದ ಚಿನ್ನಾಭರಣ ಒಯ್ದಿದ್ದ ಸಾಧುಗಳನ್ನು ಬುಧವಾರ ಪೊಲೀಸರು ಪತ್ತೆ ಮಾಡಿ, ವಾರಸುದಾರರಿಗೆ ಚಿನ್ನಾಭರಣ ಒಪ್ಪಿಸಿದ್ದಾರೆ.

ತೆಲಂಗಾಣದ ಮನೋಹರ ಕುಲಕರ್ಣಿ ಎಂಬುವವರು ತಮ್ಮ ಪತ್ನಿಯೊಂದಿಗೆ ಗೋಕರ್ಣಕ್ಕೆ ಬುಧವಾರ, ದೇವಾಲಯಗಳ ದರ್ಶನ ಮಾಡಿ ತಮ್ಮ ಪರಿಚಯದ ಪುರೋಹಿತರ ಮನೆಗೆ ತೆರಳಿದ್ದರು. ಅದೇ ಸಮಯದಲ್ಲಿ ಮಧ್ಯಪ್ರದೇಶ ಮೂಲದ ಕೆಲ ಸಾಧುಗಳು, ಈ ದಂಪತಿಯನ್ನು ಭೇಟಿಯಾಗಿ ಕುಟುಂಬದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಮುಂದಿನ ದಿನಗಳಲ್ಲಿ ಗಂಡಾಂತರ ಇದೆ ಎಂದು ಹೆದರಿಸಿದರು.

ಈ ಸಮಸ್ಯೆಗೆ ಪರಿಹಾರವೆಂದರೆ ತಮ್ಮ ಬಳಿಯಿರುವ ಚಿನ್ನಾಭರಣ ದಾನ ಮಾಡಬೇಕು ಮತ್ತು 1 ತಿಂಗಳವರೆಗೆ ಈ ವಿಷಯ ಯಾರಿಗೂ ತಿಳಿಸಬಾರದು ಎಂದು ಹೆದರಿಸಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ದಂಪತಿ ತಕ್ಷಣ ಕೈಯಲ್ಲಿದ್ದ ನಾಲ್ಕು ಚಿನ್ನದ ಬಳೆ ಮತ್ತು ಉಂಗುರು ತೆಗೆದು ಸಾಧುಗಳಿಗೆ ಕೊಟ್ಟಿದ್ದಾರೆ.

ನಂತರ ದಂಪತಿ ತಮ್ಮ ಪುರೋಹಿತರ ಬಳಿ ವಿಷಯ ತಿಳಿಸಿದ್ದಾರೆ. ಪುರೋಹಿತರು ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಘಟನೆ ವಿವರಿಸಿದ್ದಾರೆ. ನಂತರ ಪೊಲೀಸರು ಸಿಸಿಟಿವಿ ಕ್ಯಾಮರಾದ ಮೂಲಕ ಪರಿಶೀಲಿಸಿ, ಕಾರ್ಯಾಚರಣೆ ನಡೆಸಿದ್ದಾರೆ.

ನಾಲ್ಕು ತಾಸಿನಲ್ಲಿ ಸಾಧುಗಳ ಪತ್ತೆ : ದೇವಸ್ಥಾನದ ಬಳಿಯಿರುವ ಹೊರಠಾಣೆಯ ಹೆಡ್‌ಕಾನ್‌ಸ್ಟೆಬಲ್‌ರಿಂದ ಸಾಧುಗಳು ಬಳಸಿದ ವಾಹನದ ಸಂಖ್ಯೆ ಪಡೆದು, ಮಧ್ಯಪ್ರದೇಶದ ನೋಂದಣಿಯಾದ ವಾಹನ ಯಾವ ಕಡೆ ಚಲಿಸಿದೆ ಎಂದು ಟೋಲ್ ನಾಕದ ಬಳಿಯಿದ್ದ ಸಿ.ಸಿ.ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಸಂಜೆ ಉಡುಪಿಯ ಬಳಿ ವಾಹನ ಪತ್ತೆಯಾಯಿತು. ಕೂಡಲೇ ಅಲ್ಲಿಯೇ ಸಾಧುಗಳನ್ನು ಹಿಡಿದ ಪೊಲಿಸರು ರಾತ್ರಿಯೇ ಗೋಕರ್ಣಕ್ಕೆ ಕರೆತಂದಿದ್ದಾರೆ. ಠಾಣೆಗೆ ಚಿನ್ನ ಕಳೆದುಕೊಂಡಿದ್ದ ತೆಲಂಗಾಣ ದಂಪತಿಯನ್ನು ಕರೆಯಿಸಿ ಸಾಧುಗಳಿಂದ ಚಿನ್ನಾಭರಣ ಮರಳಿ ನೀಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಿ.ಐ.ಶ್ರೀಧರ ಎಸ್.ಆರ್. ಪಿ.ಎಸ್.ಐ ಅನಿಲ್ ಬಿ. ಎಂ ಮತ್ತು ಸುನೀಲ್ ಎಂ. ಎ, ಎ.ಎಸ್.ಐ ನಿರಂಜನ ನಾಯಕ, ಹೆಡ್ ಕಾನ್‌ಸ್ಟೆಬಲ್ ರಾಜೇಶ ನಾಯ್ಕ, ವಸಂತ ನಾಯ್ಕ, ಹಾಗೂ ಸಿಬ್ಬಂದಿ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ