
ಬಾಳೆಹೊನ್ನೂರು: 68ನೇ ವರ್ಷದ ವಿದ್ಯಾಗಣಪತಿ ಮಹೋತ್ಸವಕ್ಕೆ ಇಂದು ತೆರೆ
ಬಾಳೆಹೊನ್ನೂರು: 68ನೇ ವರ್ಷದ ವಿದ್ಯಾಗಣಪತಿ ಮಹೋತ್ಸವಕ್ಕೆ ಸೆ. 27ರಂದು ಜಲಸ್ತಂಭನದೊಂದಿಗೆ ಅಂತಿಮ ತೆರೆ ಬೀಳಲಿದೆ. ಬೆಳಿಗ್ಗೆ 10ಕ್ಕೆ ಉಡುಪಿಯ ಸಂಗೀತ್ ಸಾಗರ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದು, ಮಧ್ಯಾಹ್ನ 12ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
1ಕ್ಕೆ ಲಾಟರಿ ಡ್ರಾ ಮತ್ತು ಪೂಜೆ, 2ರಿಂದ ವಿಸರ್ಜನಾ ಮೆರವಣಿಗೆಯಲ್ಲಿ ಚಲಿಸುವ ಆರ್ಕೆಸ್ಟ್ರಾ, ಚಿಲಿಪಿಲಿ ಗೊಂಬೆಗಳ ಆಕರ್ಷಣಾ ಚಲನೆ ಪಟ್ಟಣದ ರಾಜಬೀದಿಯ ಮೂಲಕ ಸಾಗಿ ಭದ್ರಾನದಿಯಲ್ಲಿ ಜಲಸ್ತಂಭನದೊಂದಿಗೆ ಅಂತಿಮ ತೆರೆ ಬೀಳಲಿದೆ. ಜೇಸಿ ವೃತ್ತದಲ್ಲಿ ವಿಶೇಷ ಸಿಡಿಮದ್ದು ಪ್ರದರ್ಶನ ಆಯೋಜಿಸಿದ್ದು, 10 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದು ಶ್ರೀವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಕಗ್ಗನಗದ್ದೆ ಕೆ.ಎಸ್. ಚೆನ್ನಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.