ಸಹಕಾರ ಕ್ಷೇತ್ರಕ್ಕೆ ಜೊಲ್ಲೆ ದಂಪತಿ ಕೊಡುಗೆ ಅಮೋಘ: ಕೇಂದ್ರ ಸಚಿವ ಮುರಳೀಧರ ಮೋಹೋಲ್

ಸಹಕಾರ ಕ್ಷೇತ್ರಕ್ಕೆ ಜೊಲ್ಲೆ ದಂಪತಿ ಕೊಡುಗೆ ಅಮೋಘ: ಕೇಂದ್ರ ಸಚಿವ ಮುರಳೀಧರ ಮೋಹೋಲ್

ಸಹಕಾರ ಕ್ಷೇತ್ರಕ್ಕೆ ಜೊಲ್ಲೆ ದಂಪತಿ ಕೊಡುಗೆ ಅಮೋಘ: ಕೇಂದ್ರ ಸಚಿವ ಮುರಳೀಧರ ಮೋಹೋಲ್

ಚಿಕ್ಕೋಡಿ: ‘ಜೊಲ್ಲೆ ದಂಪತಿಯಿಂದ ಸ್ಥಾಪಿತ ಬೀರೇಶ್ವರ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿ ಸಹಕಾರ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದೆ. ಆರ್ಥಿಕ ಮುಗ್ಗಟ್ಟಿನಿಂದ ಸ್ಥಗಿತಗೊಂಡ ಸಹಕಾರ ರಂಗದ ಹಲವಾರು ಕಾರ್ಖಾನೆಗಳನ್ನು ಆರ್ಥಿಕವಾಗಿ ಸಧೃಡಗೊಳಿಸಿ ಮುನ್ನಡೆಸುತ್ತಿರುವ ಕೀರ್ತಿ ಜೊಲ್ಲೆ ಕುಟುಂಬಕ್ಕೆ ಸಲ್ಲುತ್ತದೆ’ ಎಂದು ಕೇಂದ್ರ ಸಹಕಾರ ಖಾತೆ ರಾಜ್ಯ ಸಚಿವ ಮುರಳೀಧರ ಮೋಹೋಲ್ ಹೇಳಿದರು.

ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ (ಬಹುರಾಜ್ಯ) ನೂತನ ಆಡಳಿತ ಕಚೇರಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘1963ರಿಂದ 2014ರವರೆಗೆ ಕಾಂಗ್ರೆಸ್ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಕೇವಲ ₹45 ಸಾವಿರ ಕೋಟಿ ನೀಡಿತ್ತು. ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ತೆರೆಯುವ ಮೂಲಕ ಮೋದಿ ಸರ್ಕಾರ 2014ರಿಂದ ಇಲ್ಲಿಯವರೆಗೆ ₹4.5 ಲಕ್ಷ ಕೋಟಿ ಅನುದಾನ ನೀಡಿದೆ’ ಎಂದರು.

‘ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕ ಆಡಳಿತಕ್ಕಾಗಿ ದೇಶದಲ್ಲಿ 17 ಲಕ್ಷ ತರಬೇತಿ ಪಡೆದ ಯುವ ಜನತೆಯ ಅವಶ್ಯಕತೆ ಇದೆ. ಹಾಗಾಗಿ ಸಹಕಾರ ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಸಹಕಾರ ವಿಶ್ವವಿದ್ಯಾಲಯ ಪ್ರಾರಂಭಿಸಲಾಗುತ್ತಿದೆ. ದೇಶದ ಪ್ರಥಮ ಸಹಕಾರ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಸಹಕಾರ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿದರು.

ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸಿ.ನಾರಾಯಣಸ್ವಾಮಿ, ಜೊಲ್ಲೆ ಗ್ರೂಪ್‌ ಸಂಸ್ಥಾಪಕ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಧನಂಜಯ ಮಾಡಿಕ, ಮಣಿಪುರ ರಾಜ್ಯ ಬಿಜೆಪಿ ಪ್ರಭಾರಿ ಅಜಿತ ಗೋಪಚಡೆ, ಮುಖಂಡ ಅರವಿಂದ ದೇಶಪಾಂಡೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಚಂದಗಡ ಶಾಸಕ ಶಿವಾಜಿ ಪಾಟೀಲ, ಮಾಜಿ ಶಾಸಕ ಶ್ರೀಮಂತ ಪಾಟೀಲ, ಸಂಜಯ ಪಾಟೀಲ, ಸಮರಸಿಂಹ ಘಾಟಗೆ, ಬಿಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಪಿ. ರಾಜೀವ್, ಜೊಲ್ಲೆ ಗ್ರೂಪ್‌ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಅನಿಲ ಬೆನಕೆ, ಜಯಕುಮಾರ ಖೋತ, ರಾಜೇಂದ್ರ ಪಾಟೀಲ ಇತರರು ಇದ್ದರು.

‘₹5,667 ಕೋಟಿಗೂ ಹೆಚ್ಚು ಠೇವು’

‘36 ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಅಣ್ಣಾಸಾಹೇಬ ಜೊಲ್ಲೆ ಇಚ್ಛಾಶಕ್ತಿಯಿಂದ ಪ್ರಾರಂಭವಾಗಿರುವ ಬೀರೇಶ್ವರ ಸೊಸೈಟಿಯು ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ 250ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. 4.60 ಲಕ್ಷ ಸದಸ್ಯರನ್ನು ಹೊಂದಿದ ಸಂಸ್ಥೆಯಲ್ಲಿ ₹5,667 ಕೋಟಿಗೂ ಹೆಚ್ಚು ಠೇವು ಸಂಗ್ರಹವಾಗಿರುವುದು ಜನರು ನಮ್ಮ ಮೇಲಿಟ್ಟ ವಿಶ್ವಾಸವೇ ಕಾರಣ’ ಎಂದು ಜೊಲ್ಲೆ ಗ್ರೂಪ್‌ ಸಹ ಸಂಸ್ಥಾಪಕಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ