
ಉಡುಪಿಯಲ್ಲಿ ಸೆಪ್ಟೆಂಬರ್ 9, 10ರಂದು ಸಾಮರಸ್ಯ ಸಭೆ ಆಯೋಜನೆ
ಹೆಬ್ರಿ: ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾದಿವಂತರ ಒಕ್ಕೂಟದ ಉಡುಪಿ ಜಿಲ್ಲೆಯ ಮೊದಲ ಸಾಮರಸ್ಯ ಸಭೆಯನ್ನು ಸೆಪ್ಟೆಂಬರ್ 9 ಮತ್ತು 10ರಂದು ಹಮ್ಮಿಕೊಳ್ಳಲಾಗಿದೆ.
9ರಂದು ಸಂಜೆ 4ಗಂಟೆಗೆ ಉಡುಪಿಯ ಕಡಿಯಾಳಿ ದೇವಸ್ಥಾನದಲ್ಲಿ, 10ರಂದು ಸಂಜೆ 4 ಗಂಟೆಗೆ ಸಾಸ್ತಾನದ ತುಂಗರ ಮಠದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ತಸ್ತೀಕು ವಿಚಾರ, ಅರ್ಚಕರಿಗೆ ಸಾಮಾಜಿಕ ಭದ್ರತೆ, ಐಡಿ ಕಾರ್ಡ್ ಪಡೆಯುವುದು ಕುರಿತು ಚರ್ಚೆ ನಡೆಯಲಿದೆ ಎಂದು ಉಡುಪಿ ಘಟಕದ ಜಿಲ್ಲಾಧ್ಯಕ್ಷರು ಯು.ವೆಂಕಟೇಶ ಅಡಿಗ ಉಳ್ತೂರು ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-28-111305508