ಮದುವೆಯಾದ 5 ತಿಂಗಳಲ್ಲೇ ಮುರಿದುಬಿದ್ದ ಗಾಯಕ ಬಾದ್‌ಶಾ ದಾಂಪತ್ಯ

ಮದುವೆಯಾದ 5 ತಿಂಗಳಲ್ಲೇ ಮುರಿದುಬಿದ್ದ ಗಾಯಕ ಬಾದ್‌ಶಾ ದಾಂಪತ್ಯ

ಮದುವೆಯಾದ 5 ತಿಂಗಳಲ್ಲೇ ಮುರಿದುಬಿದ್ದ ಗಾಯಕ ಬಾದ್‌ಶಾ ದಾಂಪತ್ಯ

ಬಾಲಿವುಡ್ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಬಾದ್‌ಶಾ ಕಳೆದ ಮಾರ್ಚ್ 24ರಂದು ಪಂಜಾಬಿ ನಟಿ ಇಶಾ ರಿಖಿ ಜೊತೆ ಮದುವೆಯಾಗಿದ್ದರು. ಈ ಜೋಡಿ ಮದುವೆಯಾದ ಐದು ತಿಂಗಳಲ್ಲೇ ವಿಚ್ಛೇದನ ಪಡೆದುಕೊಂಡಿದ್ದು, ದಾಂಪತ್ಯ ಜೀವನಕ್ಕೆ ತೆರೆ ಎಳೆದಿದೆ.

ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಈ ಜೋಡಿ ವಿಚ್ಛೇದನದ ವದಂತಿ ಬಗ್ಗೆ ಹರಿದಾಡುತ್ತಿತ್ತು. ಈಗ ವಿಚ್ಛೇದನದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಇಬ್ಬರೂ ಪರಸ್ಪರ ಗೌರವದೊಂದಿಗೆ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.

ಇಶಾ ಹಾಗೂ ಬಾದ್‌ಶಾ ಪೋಸ್ಟ್‌ನಲ್ಲಿ ಏನಿದೆ?

‘ನಾನು ಮತ್ತು ಇಶಾ ರಿಖಿ ಪರಸ್ಪರ ಸಮ್ಮತಿಯಿಂದ ಬೇರೆಯಾಗಲು ಮತ್ತು ನಮ್ಮ ಸ್ವಂತ ಹಾದಿಯಲ್ಲಿ ಮುನ್ನಡೆಯಲು ನಿರ್ಧರಿಸಿದ್ದೇವೆ. ಈ ನಿರ್ಧಾರವನ್ನು ಪರಸ್ಪರ ಗೌರವದಿಂದ ತೆಗೆದುಕೊಳ್ಳಲಾಗಿದ್ದು, ಈ ಕಠಿಣ ಸಮಯದಲ್ಲಿ ಪ್ರತಿಯೊಬ್ಬರೂ ನಮ್ಮ ಖಾಸಗಿತನವನ್ನು ಗೌರವಿಸಬೇಕಾಗಿ ವಿನಂತಿಸುತ್ತೇವೆ’ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸುಮಾರು 4 ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ ತಮ್ಮ ಸಂಬಂಧವನ್ನು ಮಾಧ್ಯಮಗಳಿಂದ ದೂರವೇ ಇಟ್ಟಿದ್ದರು. ಮಾರ್ಚ್ 24ರಂದು ಇಶಾ ಹಾಗೂ ಬಾದ್‌ಶಾ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಬಳಿಕ ಜೂನ್ ತಿಂಗಳಲ್ಲಿ ನಟಿ ಇಶಾ ರಿಖಿ ಮದುವೆ ಬಗ್ಗೆ ಖಚಿತಪಡಿಸಿದ್ದರು. ಇದಾದ ಬಳಿಕ ನಟಿ ಇಶಾ ರಿಖಿ ತಾವು ಅನುಭವಿಸಿದ ಸಂಕಟ, ಮೌನ ತಾಳಿದ್ದ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದರು. ಆದರೀಗ ಈ ಜೋಡಿಯ ದಿಢೀರ್ ವಿಚ್ಛೇದನದ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ