ಗಡಿಗಳ ಕಾವಲಿಗೆ ‘ಸುದರ್ಶನ’ ಬಲ: 5 ಹೆಚ್ಚುವರಿ ಎಸ್‌–400 ಖರೀದಿಗೆ ಭಾರತ ಸಜ್ಜು

ಗಡಿಗಳ ಕಾವಲಿಗೆ ‘ಸುದರ್ಶನ’ ಬಲ: 5 ಹೆಚ್ಚುವರಿ ಎಸ್‌–400 ಖರೀದಿಗೆ ಭಾರತ ಸಜ್ಜು

ಗಡಿಗಳ ಕಾವಲಿಗೆ ‘ಸುದರ್ಶನ’ ಬಲ: 5 ಹೆಚ್ಚುವರಿ ಎಸ್‌–400 ಖರೀದಿಗೆ ಭಾರತ ಸಜ್ಜು

ನವದೆಹಲಿ: ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತವು ರಷ್ಯಾದಿಂದ ಐದು ಹೆಚ್ಚುವರಿ ‘ಎಸ್‌–400 ಸುದರ್ಶನ‘ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಮುಂದಾಗಿದೆ. ಈ ಸಂಬಂಧ ಭಾರತ ಆಹ್ವಾನಿಸಿದ್ದ ಟೆಂಡರ್‌ಗೆ ರಷ್ಯಾ ವಿವರವಾದ ಪ್ರಸ್ತಾವ ಸಲ್ಲಿಸಿದೆ.

ಯೋಜನೆಯ ಒಟ್ಟು ವೆಚ್ಚ ₹50,000 ಕೋಟಿಗೂ ಅಧಿಕ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ರಷ್ಯಾ ಸಲ್ಲಿಸಿರುವ ಪ್ರಸ್ತಾವ ಸದ್ಯ ರಕ್ಷಣಾ ಸಚಿವಾಲಯದ ಪರಿಶೀಲನೆಯಲ್ಲಿದೆ.

2026ರ ಮಾರ್ಚ್‌ನಲ್ಲಿ ಭಾರತವು ಐದು ಹೆಚ್ಚುವರಿ ಎಸ್‌–400 ಸ್ಕ್ವಾಡ್ರನ್‌ಗಳ ಖರೀದಿಗೆ ಅನುಮೋದನೆ ನೀಡಿತ್ತು. ಈ ಕ್ಷಿಪಣಿಗಳನ್ನು ಪೂರ್ವ ಮತ್ತು ಪಶ್ಚಿಮ ಗಡಿಗಳಲ್ಲಿ ನಿಯೋಜಿಸುವ ಮೂಲಕ ವಾಯು ರಕ್ಷಣಾ ಜಾಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

2018ರಲ್ಲಿ ಮಾಡಿಕೊಂಡ ಒಪ್ಪಂದದಡಿ ಭಾರತವು ಐದು ಎಸ್‌–400 ಸ್ಕ್ವಾಡ್ರನ್‌ಗಳನ್ನು ಖರೀದಿಸುತ್ತಿದೆ. ಈ ಪೈಕಿ ಈಗಾಗಲೇ ನಾಲ್ಕು ಸ್ಕ್ವಾಡ್ರನ್‌ಗಳು ಭಾರತಕ್ಕೆ ತಲುಪಿವೆ. ಐದನೇ ಸ್ಕ್ವಾಡ್ರನ್‌ ನವೆಂಬರ್‌ 2026ರ ವೇಳೆಗೆ ತಲುಪುವ ನಿರೀಕ್ಷೆಯಿದೆ.

‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಎಸ್‌–400 ಭಾರತದ ವಾಯು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಎಸ್‌–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು, ದೂರದಿಂದಲೇ ಶತ್ರು ಪಡೆಯ ಕ್ಷಿಪಣಿಯನ್ನು ಗುರುತಿಸಿ, ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. 

ಹೊಸ ಒಪ್ಪಂದ ಅಂತಿಮಗೊಂಡರೆ, ಭಾರತ ಹೊಂದಿರುವ ಎಸ್‌–400 ಸ್ಕ್ವಾಡ್ರನ್‌ಗಳ ಸಂಖ್ಯೆ 10ಕ್ಕೆ ಏರಿಕೆ ಆಗಲಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ