ತುಮಕೂರು ಮಾರುಕಟ್ಟೆ: ತೋತಾಪುರಿ ಮಾವು ಕೆ.ಜಿಗೆ ₹300ಕ್ಕೆ ಏರಿಕೆ

ತುಮಕೂರು ಮಾರುಕಟ್ಟೆ: ತೋತಾಪುರಿ ಮಾವು ಕೆ.ಜಿಗೆ ₹300ಕ್ಕೆ ಏರಿಕೆ

ತುಮಕೂರು ಮಾರುಕಟ್ಟೆ: ತೋತಾಪುರಿ ಮಾವು ಕೆ.ಜಿಗೆ ₹300ಕ್ಕೆ ಏರಿಕೆ

ತುಮಕೂರು:‌‌ ಮಾರುಕಟ್ಟೆಯಲ್ಲಿ ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ತೋತಾಪುರಿ ಮಾವು ಕೆ.ಜಿ ₹300ರ ಗಡಿ ತಲುಪಿದೆ.

ಮಾವಿನ ಹಣ್ಣುಗಳ ಋತುವಿನ ಸಮಯದಲ್ಲಿ ತೋತಾಪುರಿ ಮಾವು ಕೆ.ಜಿ ₹60ರಿಂದ ₹80 ಇರುತ್ತಿತ್ತು. ಈಗ ನಾಲ್ಕು ಪಟ್ಟು ಜಾಸ್ತಿಯಾಗಿದೆ. ಕಳೆದ ಎರಡು– ಮೂರು ವಾರಗಳಿಂದ ಎಲ್ಲ ಹಣ್ಣುಗಳ ದರದಲ್ಲಿ ಹೆಚ್ಚಳವಾಗುತ್ತಿದೆ. ಏಲಕ್ಕಿ ಬಾಳೆ ಕೆ.ಜಿ ₹110, ಪಚ್ಚಬಾಳೆ ₹40, ಸೀಬೆ ₹180, ಕರಬೂಜ ₹90ಕ್ಕೆ ಮಾರಾಟವಾಗುತ್ತಿದೆ.

ದುಬಾರಿಯಾಗಿದ್ದ ನಿಂಬೆ ಹಣ್ಣಿನ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಒಂದಕ್ಕೆ ₹8ರಿಂದ ₹10 ಇದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸೌತೆಕಾಯಿ 1ಕ್ಕೆ ₹10–₹15 ಇದ್ದು, ಹೊರಗಡೆ ಚಿಲ್ಲರೆಯಾಗಿ ಒಂದಕ್ಕೆ ₹20 ಪಡೆಯುತ್ತಿದ್ದಾರೆ. ಬಟಾಣಿ ತೇಜಿಯಾಗಿದ್ದು, ಬದನೆಕಾಯಿ ಅಗ್ಗವಾಗಿದೆ.

ಬಟಾಣಿ ಕೆ.ಜಿ ₹120ರಿಂದ ₹140ಕ್ಕೆ ಜಿಗಿದಿದೆ. ಬದನೆಕಾಯಿ ಕೆ.ಜಿ ₹10–₹15ಕ್ಕೆ ಕುಸಿದಿದೆ. ಬೆಳ್ಳುಳ್ಳಿ ಕೆ.ಜಿ ₹160–₹180ರಂತೆ ಗ್ರಾಹಕರು ಖರೀದಿಸುತ್ತಿದ್ದಾರೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–₹30, ಮೆಂತ್ಯ ಕೆ.ಜಿ ₹30–₹40, ಸಬ್ಬಕ್ಕಿ ಕೆ.ಜಿ ₹25–₹30, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಎರಡು ವಾರಗಳಿಂದ ತೊಗರಿ ಬೇಳೆ, ಕಡಲೆ ಬೇಳೆ ದುಬಾರಿಯಾಗುತ್ತಿದೆ. ತೊಗರಿ ಕೆ.ಜಿ ₹135 ಇದೆ. ಕಡಲೆಕಾಯಿ ಎಣ್ಣೆ ಕೆ.ಜಿ ₹185–₹190, ಗೋಲ್ಡ್‌ವಿನ್ನರ್ ಕೆ.ಜಿ ₹178–₹180, ಪಾಮಾಯಿಲ್ ಕೆ.ಜಿ ₹145–₹150ಕ್ಕೆ ಮಾರಾಟ ಮಾಡಲಾಗುತ್ತಿದೆ.

ಏಲಕ್ಕಿ ಕೊಂಚ ಇಳಿಕೆ: ಏಲಕ್ಕಿ ದರದಲ್ಲಿ ಸ್ವಲ್ಪ ಕುಸಿತ ಕಾಣುತ್ತಿದೆ. ಏಲಕ್ಕಿ ಕೆ.ಜಿ ₹4,000–₹4,200 ಇದೆ. ಎರಡು ವಾರದ ಹಿಂದೆ ₹4,400 ಇತ್ತು. ದನಿಯ ಕೆ.ಜಿ ₹190–₹240, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹480–₹520, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹250–₹280, ಕಾಳುಮೆಣಸು ಕೆ.ಜಿ ₹740–₹780, ಜೀರಿಗೆ ₹250–₹280.

ಚಕ್ಕೆ ಕೆ.ಜಿ ₹260–₹280, ಲವಂಗ ಕೆ.ಜಿ ₹920–₹960, ಗುಣಮಟ್ಟದ ಗಸಗಸೆ ಕೆ.ಜಿ ₹1,450–₹1,600, ಬಾದಾಮಿ ಕೆ.ಜಿ ₹1,080–₹1,120, ಗೋಡಂಬಿ ಕೆ.ಜಿ ₹780–₹980, ಒಣ ದ್ರಾಕ್ಷಿ ಕೆ.ಜಿ ₹360–₹440ರಂತೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಮಾಂಸ ಏರಿಕೆ: ಶ್ರಾವಣ ಮುಗಿಯುತ್ತಿದ್ದಂತೆ ಕೋಳಿ ಮಾಂಸದ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವಾರ ಬ್ರಾಯ್ಲರ್‌ ಕೆ.ಜಿ ₹100 ಇತ್ತು, ಈ ವಾರ ₹130 ಆಗಿದೆ. ಫಾರಂ ಕೆ.ಜಿ ₹150, ರೆಡಿ ಚಿಕನ್‌ ಕೆ.ಜಿ ₹160ರಿಂದ ₹200, ಸ್ಕಿನ್‌ಲೆಸ್‌ ಕೆ.ಜಿ ₹180ರಿಂದ ₹220ಕ್ಕೆ ಜಿಗಿದಿದೆ.

ಮೀನಿನ ಧಾರಣೆ ಮತ್ತಷ್ಟು ಕುಸಿತವಾಗಿದೆ. ಅಂಜಲ್ ಕೆ.ಜಿ ₹700, ಬಿಳಿಮಾಂಜಿ ಕೆ.ಜಿ ₹1,200, ಕಪ್ಪುಮಾಂಜಿ ₹910, ಇಂಡಿಯನ್‌ ಸಾಲ್ಮನ್‌ ₹1,060, ಬಂಗುಡೆ ₹300, ಸೀಗಡಿ ಕೆ.ಜಿ ₹500–750, ಬೂತಾಯಿ ₹340ಗೆ ನಗರದ ಜಿಲ್ಲಾ ಕ್ರೀಡಾಂಗಣ ಪಕ್ಕದ ಮತ್ಸ್ಯದರ್ಶಿನಿಯಲ್ಲಿ ಸಿಗುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ