
ಧಾರವಾಡ: ರಾಷ್ಟ್ರ ಮಟ್ಟದ ‘ವಿಬಿವೈಎಲ್‍ಡಿ ರಸಪ್ರಶ್ನೆ-2027’ ಆಯೋಜಿಸಲಾಗಿದೆ
ಧಾರವಾಡ: ‘ಮೈ ಭಾರತ್ ವಿಕಸಿತ ಭಾರತ್ ಯುವ ನಾಯಕರ ಸಂವಾದ-2027’ರ ಅಂಗವಾಗಿ ರಾಷ್ಟ್ರ ಮಟ್ಟದ ‘ವಿಬಿವೈಎಲ್‍ಡಿ ರಸಪ್ರಶ್ನೆ-2027’ ಆಯೋಜಿಸಲಾಗಿದೆ.
ಆಯ್ಕೆಯಾದ ಯುವಕರು ಜನವರಿ 10ರಿಂದ 12ರ ವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ರಾಷ್ಟ್ರೀಯ ಸಂವಾದದಲ್ಲಿ ಪ್ರಧಾನಿ ಎದುರು ತಮ್ಮ ಆಲೋಚನೆಗಳನ್ನು ಮಂಡಿಸಲು ಅವಕಾಶ ಪಡೆಯಲಿದ್ದಾರೆ. ಕರ್ನಾಟಕದಿಂದ 80ರಿಂದ 100 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.
ನೋಂದಣಿಗೆ ಸೆ.30ಕೊನೆ ದಿನ. ಮಾಹಿತಿಗೆ ಮೊ. 97436 34525 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.