2025ರಲ್ಲಿ ಎಲ್‌ಎಸಿ ಉದ್ದಕ್ಕೂ ಚೀನಾ ಸೇನಾ ನಿಯೋಜನೆ ಕಡಿತ: ರಕ್ಷಣಾ ಸಚಿವಾಲಯ

2025ರಲ್ಲಿ ಎಲ್‌ಎಸಿ ಉದ್ದಕ್ಕೂ ಚೀನಾ ಸೇನಾ ನಿಯೋಜನೆ ಕಡಿತ: ರಕ್ಷಣಾ ಸಚಿವಾಲಯ

2025ರಲ್ಲಿ ಎಲ್‌ಎಸಿ ಉದ್ದಕ್ಕೂ ಚೀನಾ ಸೇನಾ ನಿಯೋಜನೆ ಕಡಿತ: ರಕ್ಷಣಾ ಸಚಿವಾಲಯ

ನವದೆಹಲಿ: 2025ರಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಚೀನಾ ತನ್ನ ಸೇನಾ ನಿಯೋಜನೆಯನ್ನು ಕಡಿಮೆ ಮಾಡಿದೆ ಎಂದು ರಕ್ಷಣಾ ಸಚಿವಾಲಯದ ಇತ್ತೀಚಿನ ವರದಿ ತಿಳಿಸಿದೆ.

2025–26ನೇ ಸಾಲಿನ ವಾರ್ಷಿಕ ವರದಿಯಲ್ಲಿ ಸಚಿವಾಲಯ ಈ ವಿಷಯವನ್ನು ಉಲ್ಲೇಖಿಸಿದೆ.

2025ರಲ್ಲಿ ಉತ್ತರ ಗಡಿಯಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಎದುರು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಪಡೆಗಳ ನಿಯೋಜನೆ ಗಣನೀಯವಾಗಿ ಕಡಿಮೆಯಾಗಿದೆ. ಎಲ್‌ಎಸಿಯುದ್ದಕ್ಕೂ ಎಲ್ಲ ವಲಯಗಳಲ್ಲಿ ಭಾರತೀಯ ಸೇನೆಯ ನಿಯೋಜನೆ ಬಲಿಷ್ಠವಾಗಿದ್ದು, ಯಾವುದೇ ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಸೂಕ್ತ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ವರದಿ ತಿಳಿಸಿದೆ.

2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಮಾರಕ ಘರ್ಷಣೆಯ ಬಳಿಕ ಭಾರತ–ಚೀನಾ ಸಂಬಂಧಗಳು ತೀವ್ರವಾಗಿ ಹದಗೆಟ್ಟಿತ್ತು.

ನಾಲ್ಕು ವರ್ಷಕ್ಕೂ ಹೆಚ್ಚು ಬಿಗುವಿನಿಂದ ಕೂಡಿದ್ದ ಭಾರತ–ಚೀನಾ ಸಂಬಂಧಗಳು 2024ರ ಅಕ್ಟೋಬರ್‌ನಿಂದ ಸುಧಾರಣೆಯ ಹಾದಿಗೆ ಮರಳಿದವು. ರಷ್ಯಾದ ಕಝಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭೇಟಿಯಾದ ಬಳಿಕ ಉಭಯ ದೇಶಗಳ ಸಂಬಂಧದಲ್ಲಿ ಸುಧಾರಣೆ ಕಂಡು ಬಂದವು.

ಕಳೆದ ವರ್ಷ ಆಗಸ್ಟ್ 31ರಂದು ಚೀನಾದ ಟಿಯಾಂಜಿನ್ ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಷಿ ಜಿನ್‌ಪಿಂಗ್ ಅವರು ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದ್ದರು.

ಕಳೆದ ಕೆಲವು ತಿಂಗಳುಗಳಲ್ಲಿ ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿವೆ. ದೆಹಲಿ‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಶನಿವಾರವೂ ಮೋದಿ ಮತ್ತು ಷಿ ಜಿನ್‌ಪಿಂಗ್ ಮತ್ತೊಮ್ಮೆ ಭೇಟಿಯಾಗಿ ಮಾತುಕತೆ ನಡೆಸಿದರು.

ರಕ್ಷಣಾ ಸಚಿವಾಲಯದ ವರದಿಯಲ್ಲಿ ‘ಆಪರೇಷನ್ ಸಿಂಧೂರ’ ಬಗ್ಗೆಯೂ ಉಲ್ಲೇಖಿಸಲಾಗಿದೆ. ಇದು ಕೇವಲ ಯಶಸ್ವಿ ಕಾರ್ಯಾಚರಣೆಯ, ಬದಲಾಗಿ ಒಂದು ಕಾರ್ಯತಂತ್ರದ ಸಂದೇಶವೂ ಆಗಿದೆ ಎಂದು ವರದಿ ಹೇಳಿದೆ.

‘ಈ ಕಾರ್ಯಾಚರಣೆಯು ನಮ್ಮ ಸಶಸ್ತ್ರ ಪಡೆಗಳ ಅಪ್ರತಿಮ ಸಾಮರ್ಥ್ಯ, ದೂರದೃಷ್ಟಿಯ ಕಾರ್ಯತಂತ್ರ ಮತ್ತು ಸಂಯಮವನ್ನು ತೋರಿಸಿದೆ. ಜತೆಗೆ, ಸಾಮರ್ಥ್ಯ ವೃದ್ಧಿಗೆ ಭಾರತ ನೀಡುತ್ತಿರುವ ನಿರಂತರ ಆದ್ಯತೆಯನ್ನೂ ತೋರಿಸಿದೆ. ಗುಪ್ತಚರ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುವುದರಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಜಂಟಿ ಕಾರ್ಯಾಚರಣೆಯ ಸನ್ನದ್ಧತೆಯವರೆಗೆ ಇದು ವ್ಯಾಪಿಸಿದೆ’ ಎಂದು ವರದಿ ಹೇಳಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ