ಸೋಮವಾರಪೇಟೆ: ಗಮನ ಸೆಳೆದ 14 ಅಡಿ ವಿನಾಯಕ ಮೂರ್ತಿ

ಸೋಮವಾರಪೇಟೆ: ಗಮನ ಸೆಳೆದ 14 ಅಡಿ ವಿನಾಯಕ ಮೂರ್ತಿ

ಸೋಮವಾರಪೇಟೆ: ಗಮನ ಸೆಳೆದ 14 ಅಡಿ ವಿನಾಯಕ ಮೂರ್ತಿ

ಸೋಮವಾರಪೇಟೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಗೌರಿ, ಗಣೇಶನ ಮೂರ್ತಿಗಳನ್ನು ಗುರುವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಶೋಭಾಯಾತ್ರೆಯೊಂದಿಗೆ ವಿಸರ್ಜಿಸಲಾಯಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಿದ್ದ 14 ಅಡಿ ಎತ್ತರದ ಸಾರ್ವಜನಿಕ ಸಮಿತಿಯ ಗಣಪತಿ, ಕಕ್ಕೆಹೊಳೆಯ ಮಹಾಗಣಪತಿ ಸೇವಾ ಸಮಿತಿ, ಹಾನಗಲ್ ಗ್ರಾಮದ ಭಗತ್ ಯುವಕ ಸಂಘದ ಗಣಪತಿ, ಆಲೆಕಟ್ಟೆಯ ಭಾರತೀಯ ಯುವಕ ಸಂಘ, ಬಸವೇಶ್ವರ ದೇವಾಲಯ ಸಮಿತಿ, ಕರ್ಕಳ್ಳಿಯ ಕಟ್ಟೆ ಬಸವೇಶ್ವರ ದೇವಾಲಯ ಸಮಿತಿ, ಮಾನಸ ಹಾಲ್‌ನ ಜೈಭಾರತ್ ಯುವಕ ಸಂಘ, ಮಹಾದೇಶ್ವರ ಬ್ಲಾಕ್‌ನ ಸಿದ್ಧಿ ವಿನಾಯಕ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಭವ್ಯ ಮಂಟಪದಲ್ಲಿ, ಶೋಭಾಯಾತ್ರೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಧ್ಯರಾತ್ರಿವರೆಗೂ ಮೆರವಣಿಗೆ ನಡೆಸಿ ನಂತರ ಆನೆಕೆರೆಯಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ವಿಸರ್ಜಿಸಲಾಯಿತು.

ಸಾರ್ವಜನಿಕ ಸೇವಾ ಸಮಿತಿಯಿಂದ ಕಲ್ಲಡ್ಕ ಗೊಂಬೆಗಳ ನೃತ್ಯ, ಡಿಜೆ ಸೌಂಡ್ಸ್ ಸೇರಿದಂತೆ ವಿವಿಧ ಬ್ಯಾಂಡ್ ಸೆಟ್‌ಗಳ ಪ್ರದರ್ಶನ ಗಮನ ಸೆಳೆಯಿತು.

ಒಂಭತ್ತಕ್ಕೂ ಅಧಿಕ ಗಣಪತಿಗಳನ್ನು ವಿಶೇಷವಾಗಿ ಸಿಂಗರಿಸಿಲಾಗಿದ್ದ ವಿದ್ಯುತ್ ದೀಪಾಲಂಕೃತ ಮಂಟಪಗಳು ಭಕ್ತಾದಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.  

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ