ಹಾಲು ಖರೀದಿ ದರ ₹10 ಹೆಚ್ಚಳಕ್ಕೆ ಒತ್ತಾಯ

ಹಾಲು ಖರೀದಿ ದರ ₹10 ಹೆಚ್ಚಳಕ್ಕೆ ಒತ್ತಾಯ

ಹಾಲು ಖರೀದಿ ದರ ₹10 ಹೆಚ್ಚಳಕ್ಕೆ ಒತ್ತಾಯ

ಬೆಂಗಳೂರು: ‘ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್‌ಗೆ ₹10ಕ್ಕೆ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂಬ ಆಗ್ರಹವು ಶುಕ್ರವಾರ ನಡೆದ ಕರ್ನಾಟಕ ಹಾಲು ಮಹಾಮಂಡಳದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಗಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಹಾಲು ಒಕ್ಕೂಟಗಳ ಬಹುತೇಕ ಪ್ರತಿನಿಧಿಗಳು ಈ ಆಗ್ರಹವನ್ನು ಮಂಡಿಸಿದ್ದು, ಮತ್ತೊಮ್ಮೆ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್‌ ಅವರಿಗೆ ಶನಿವಾರ ಮನವಿ ಸಲ್ಲಿಸಲಿದ್ದಾರೆ. ದರ ಪರಿಷ್ಕರಣೆಯ ಶಿಫಾರಸಿನೊಂದಿಗೆ ಅಧಿಕಾರಿಗಳು ಸಿದ್ಧಪಡಿಸಿರುವ ವರದಿಯು ಇದೇ ವೇಳೆ ಮುಖ್ಯಮಂತ್ರಿ ಕೈಸೇರಲಿದೆ ಎಂದು ಗೊತ್ತಾಗಿದೆ. ‘ಸಿ.ಎಂ ಭೇಟಿ ಮಾಡಲುಬೆಳಿಗ್ಗೆ 10 ಗಂಟೆಗೆ ಸಮಯ ನಿಗದಿಯಾಗಿದೆ’ ಎಂದು ಮೂಲಗಳು ತಿಳಿಸಿವೆ.

₹5 ಹೆಚ್ಚಳ ಸಂಭವ: ‘ಒಕ್ಕೂಟಗಳ ಆಗ್ರಹದಂತೆ ದರವನ್ನು ₹10 ಹೆಚ್ಚಿಸುವ ಸಾಧ್ಯತೆ ಬಹಳ ಕಡಿಮೆ. ಹೆಚ್ಚೆಂದರೆ ₹5ರವರೆಗೆ ಹೆಚ್ಚಿಸಬಹುದಷ್ಟೇ. ನಿರ್ಧಾರ ಕೈಗೊಳ್ಳುವುದು ಈಗ ಸರ್ಕಾರದ ಅಂಗಳದಲ್ಲಿದೆ’ ಎಂದು ಮೂಲಗಳು ತಿಳಿಸಿವೆ.

‘ಪ್ರತಿ ಲೀಟರ್‌ಗೆ ₹8ರಿಂದ 10ರಷ್ಟು ಹೆಚ್ಚಿಸಬೇಕು’ ಎಂದು ಕೋರಿ ರಾಜ್ಯದ ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳ ನಿಯೋಗವು ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿತ್ತು. ನಂತರ ಅವರು, ‘10 ವರ್ಷಗಳಲ್ಲಿ ಪಶು ಆಹಾರ ದರದ ಹೆಚ್ಚಳ, ಹಾಲು ಉತ್ಪಾದನೆ ವೆಚ್ಚ, ಖರೀದಿ–ಮಾರಾಟದ ವಿವರ ಹಾಗೂ ನೆರೆಯ ರಾಜ್ಯಗಳಲ್ಲಿ ಹಾಲು ಖರೀದಿ ಮತ್ತು ಮಾರಾಟ ದರ ಸೇರಿ ಸಮಗ್ರ ಮಾಹಿತಿಯನ್ನು ಸಲ್ಲಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಹಾಲಿನ ಮಾರಾಟ ದರವನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರತಿ ಲೀಟರ್‌ಗೆ ₹4ರಂತೆ ಹೆಚ್ಚಳ ಮಾಡಲಾಗಿತ್ತು. ಪ್ರಸ್ತುತ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ ₹ 46 ಆಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ