
Ravana: ವಿಲನ್‌ಗೆ ದೊಡ್ಡ ದಪ್ಪ ಮೂಗು ಇರಬೇಕಲ್ಲಾ, ನನ್ನ ಗುರುತಿನ ಸ್ಮಾರ್ಟ್ ಹುಡುಗ ಯಶ್ ರಾವಣ ಹೇಗಾದ್ರು!: ಸದ್ಗುರು
ವಿಲನ್‌ಗಳೆಂದರೆ ದಪ್ಪ, ದೊಡ್ಡ ಮೂಗಿನ ಭಯಂಕರ ಆಸಾಮಿಗಳಾಗಿರುತ್ತಾರಲ್ಲಾ, ಅಂಥಾದ್ರಲ್ಲಿ ನನ್ನ ಪರಿಚಯದ ಚೂಪು ಮೂಗು, ಸ್ಮಾರ್ಟ್ ಲುಕ್‌ನ ಯಶ್ ರಾವಣ ಹೇಗಾದರು.. ʼರಾಮಾಯಣʼ ಸಿನಿಮಾ ನಿರ್ಮಾಪಕ ನಮಿತ್ ಮಲ್ಹೋತ್ರ ಜೊತೆಗಿನ ಸಂವಾದದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಎತ್ತಿದ ಕಾಮಿಡಿ ಪ್ರಶ್ನೆ ಇದು.. ಉತ್ತರ ಏನು ಸಿಕ್ತು?
ಹತ್ತಾರು ಕಾಂತಾರ, ಕೆಜಿಎಫ್‌ನಂಥಾ ಸಿನಿಮಾ ಮಾಡೋ ಬಜೆಟ್‌ನಲ್ಲಿ ಒಂದು ಒಂದು ರಾಮಾಯಣ ಸಿನಿಮಾ ರೆಡಿ ಆಗಿದೆ. ಬರೋಬ್ಬರಿ ನಾಲ್ಕು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿನಿಮಾ ಇದು. ಈ ಸಿನಿಮಾಕ್ಕೆ ಕನ್ನಡದ ಸ್ಟಾರ್ ನಟ ಯಶ್ ಅವರೂ ಬಂಡವಾಳ ಹೂಡಿದ್ದಾರೆ. ಜೊತೆಗೆ ರಾವಣನಾಗಿಯೂ ಅಬ್ಬರಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿರೋ ಟ್ರೇಲರ್‌ನಲ್ಲಿ ರಾವಣನ ಪಾತ್ರ ಸಿಕ್ಕಾಪಟ್ಟೆ ಸ್ಕ್ರೀನ್ ಸ್ಪೇಸ್ ಪಡೆಯುವ ಜೊತೆಗೆ ಸಖತ್ತಾಗಿ ಹೈಲೈಟ್ ಆಗಿದೆ.
ಈ ಟ್ರೇಲರ್ ನೋಡಿರೋ ಬಹಳ ಮಂದಿ ನಿಮಿತ್ ಮಲ್ಹೋತ್ರ ನಿರ್ಮಾಣ ʼರಾಮಾಯಣʼ ಸಿನಿಮಾದ ರಿಯಲ್ ಹೈಲೈಟ್ ರಾವಣ. ರಾಮ ಈ ರಾವಣನೆದುರು ಕಾಣಿಸ್ತಾನೇ ಇಲ್ಲ ಅನ್ನೋ ರೀತಿ ಮಾತನಾಡಿದ್ದಾರೆ. ಜೊತೆಗೆ ಈ ಟ್ರೇಲರ್ ಬಂದಮೇಲೆ ಯಶ್ ಅವರ ಮೇಲಿನ ಜನರ ಅಭಿಮಾನ ಇನ್ನೂ ಹೆಚ್ಚಾದ ಹಾಗಿದೆ. ಅವರ ಊಹೆ ನಿಜವಾದರೆ ʼರಾಮಾಯಣʼ ಸಿನಿಮಾ ಯಶ್ ಅವರನ್ನು ಬೇರೆಯೇ ಲೆವೆಲ್‌ನಲ್ಲಿ ಜಗತ್ತಿನ ಎದುರು ನಿಲ್ಲಿಸಲಿದೆ.
ಅಷ್ಟೊಳ್ಳೆ ದೇಹದಾರ್ಢ್ಯ ಇರೋ ಯಶ್ ವಿಲನ್ ಹೇಗಾದ್ರು!
ಈ ಕಾಮಿಡಿ ಪ್ರಶ್ನೆ ಎತ್ತಿದ್ದು ಸದ್ಗುರು. ʼರಾಮಾಯಣʼ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರ ಅವರ ಜೊತೆ ಇತ್ತೀಚೆಗೆ ಸದ್ಗುರು ಜಗ್ಗಿ ವಾಸುದೇವ್ ಅವರ ಸಂವಾದ ಇತ್ತು. ಈ ವೇಳೆ ಸದ್ಗುರು ಯಶ್ ಬಗ್ಗೆ ಮಾತನಾಡಿದ್ದು ಹಿಲೇರಿಯಸ್ ಆಗಿತ್ತು. ʼಸಾಮಾನ್ಯವಾಗಿ ವಿಲನ್‌ಗಳೆಂದರೆ ದಪ್ಪ ಚಪ್ಪಟೆ ಮೂಗಿನ ಭಯಂಕರ ಆಸಾಮಿಗಳಾಗಿರುತ್ತಾರಲ್ಲ, ಯಶ್ ಅದು ಹೇಗೆ ವಿಲನ್ ಆದ್ರು, ಅವರು ಮೂಗು ಚೂಪು ಮೂಗು, ದೇಹದ ಲಕ್ಷಣಗಳೆಲ್ಲ ಸಖತ್ತಾಗಿವೆ, ಅವರು ಯಾವ ಆಂಗಲ್‌ನಲ್ಲೂ ವಿಲನ್ ಅನ್ನು ಹೋಲುವುದಿಲ್ಲ. ಹಾಗಿರುವಾಗ ಅವರು ವಿಲನ್ ಹೇಗಾದರು?ʼ ಅಂತ ಸದ್ಗುರು ಕೇಳಿದ್ರು.
ಯಶ್ ಯಾಕೆ ರಾವಣ ಆದ್ರು, ನಮಿತ್ ಉತ್ತರ
ಅದಕ್ಕೆ ನಮಿತ್, ʼನಮಗೆ ರಾವಣನ ಪಾತ್ರಕ್ಕೆ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿರುವ ಸ್ಟಾರ್ ನಟನೇ ಬೇಕಿತ್ತು. ಯಾಕೆಂದರೆ ರಾವಣ ಅಂದಾಕ್ಷಣ ನಮಗೆ ಸೋ ಕಾಲ್ಡ್ ಕ್ಲೀಷೆಯ ದೈತ್ಯ ಗಾತ್ರದ ವ್ಯಕ್ತಿ ಏನೂ ಕಣ್ಣೆದುರು ಬರೋದಿಲ್ಲ. ರಾವಣ ಸುಂದರ ಕಾಯ ಹೊಂದಿರುವ ಮಹಾನ್ ಮೇಧಾವಿ. ಆದರೆ ಆತನ ಕೆಲವು ಗುಣಗಳೇ ಆತನಿಗೆ ಮುಳುವಾಯ್ತು. ಹೀಗಾಗಿ ನಮಗೆ ಯಶ್ ಅವರು ಬೆಸ್ಟ್ ಆಯ್ಕೆಯಾಗಿದ್ದರುʼ ಅಂತ ನಮಿತ್ ಹೇಳಿದ್ದಾರೆ.
ರಾಮನಿಂದ ಒಂದು ಕೈ ಮೇಲಿರುವ ರಾವಣ
ಸಾಮರ್ಥ್ಯದಲ್ಲಿ ರಾಮನಿಗಿಂತ ರಾವಣ ಒಂದು ಕೈ ಮೇಲು. ಆದರೆ ರಾಮನಿಗೆ ಇರುವ ಸಮತೋಲನದ ಭಾವ ರಾವಣನಿಗೆ ಇರಲಿಲ್ಲ. ಆತ ಶಿವನ ಕುರಿತು ಉಗ್ರ ತಪಸ್ಸು ಮಾಡುತ್ತಾನೆ. ಆಗ ಶಿವ ಪ್ರತ್ಯಕ್ಷನಾಗಿ ವರ ಕೇಳಲು ಹೇಳುತ್ತಾನೆ. ರಾವಣ ಎಂಥವನು ಅಂದರೆ ತಾಯಿ ಸ್ವರೂಪಿಯಾದ ಪಾರ್ವತಿಯನ್ನೇ ನೀಡುವಂತೆ ಕೇಳುತ್ತಾನೆ. ಶಿವ ವರ ಕೊಟ್ಟಾಗಿದೆ. ಮಾತನ್ನು ವಾಪಾಸ್ ತೆಗೆದುಕೊಳ್ಳಲಾರ. ʼಅಸ್ತುʼ ಅಂದು ಬಿಡುತ್ತಾನೆ. ರಾವಣ ಪಾರ್ವತಿಯನ್ನು ಅರಸುತ್ತ ಬರುತ್ತಾನೆʼ ಎಂದು ಸದ್ಗುರು ಕಥೆ ಹೇಳುತ್ತಾರೆ.
ಹೀಗೆ ಅರಸುತ್ತ ಬರುವ ರಾವಣನಿಗೆ ಶಿವಗಣಗಳು ದಾರಿ ತಪ್ಪಿಸುತ್ತಾರೆ. ಮಾನಸ ಸರೋವರದ ಬದಲಿಗೆ ಈಗಿನ ರಾಕ್ಷಸ ಸರೋವರದತ್ತ ಕಳಿಸುತ್ತಾರೆ. ಒಂದು ಕಪ್ಪೆ ಅಂದರೆ ಮಂಡೂಕವನ್ನೇ ಪರಮ ಸುಂದರಿಯಾದ ತನ್ನನ್ನೇ ಹೋಲುವ ಹೆಣ್ಣಾಗಿ ಮಾಡಿ ಪಾರ್ವತಿ ಕಳಿಸುತ್ತಾಳೆ. ಅವಳೇ ಮಂಡೋದರಿ. ಬಹಳ ಸುಂದರಿ, ಸಂಯಮಿ, ಮಹಾನ್ ಮೇಧಾವಿ ಹೆಣ್ಣು. ಆದರೆ ದುರಹಂಕಾರಿ ರಾವಣ ಅವಳ ಮಾತನ್ನೂ ಕೇಳದೇ ಸೀತೆಯನ್ನು ಅಪಹರಿಸಿ ವಿವಾಹವಾಗಲು ಪೀಡಿಸುತ್ತಾನೆʼ ಎಂದು ಸದ್ಗುರು ಹೇಳುತ್ತಾರೆ.
ಸ್ಮಾರ್ಟ್ ಯಶ್ ರಾವಣ ಆಗಿದ್ದು ಹೇಗೆ!
ರಾವಣನ ವೈರುಧ್ಯಪೂರ್ಣ ವ್ಯಕ್ತಿತ್ವ ನಿಜವಾದ ಕಲಾವಿದನಿಗೆ ಸವಾಲು. ಶಾಂತಚಿತ್ತ ರಾಮ ಪಾತ್ರಕ್ಕಿಂತ ಹೆಚ್ಚಿನ ಕಲರ್, ಶೇಡ್‌ಗಳು ಈ ಪಾತ್ರದಲ್ಲಿವೆ. ಸದಾ ಚಾಲೆಂಜ್‌ಗಳ ಹಿಂದೆ ಹೋಗುವ ಯಶ್ ರಾವಣನ ಪಾತ್ರವನ್ನು ಆ ಚಾಲೆಂಜ್‌ಗೋಸ್ಕರ ಒಪ್ಪಿಕೊಂಡಿದ್ದಾರೆ. ಒಂದು ಸಂದರ್ಶನದಲ್ಲಿ ಯಶ್ ಅವರೇ ಈ ವಿಚಾರ ಹೇಳಿದ್ದಾರೆ. ಅಲ್ಲಿಗೆ ಯಶ್ ಅವರ ಆಯ್ಕೆಯನ್ನು ಅಲ್ಲಗಳೆಯಲಾಗುವುದಿಲ್ಲ.
ಪೂರ್ವಾಗ್ರಹಕ್ಕೆ ದಿ ಎಂಡ್
ವಿಲನ್ ಅಂದರೆ ನೋಡಲು ಭಯಂಕರವಾಗಿರಬೇಕು, ರಾಕ್ಷಸನ ಹಾಗೆ ಕೋರೆಗಳಿರಬೇಕು ಅನ್ನುವ ಮಿಥ್‌ಗಳಿಗೆ ಯಶ್ ಅವರ ರಾವಣ ಪಾತ್ರ ದಿ ಎಂಡ್ ಹೇಳುವುದರಲ್ಲಿದೆ. ವಿಲನ್ ಆದವನು ನೋಡಲು ಹೀರೋಗಿಂತಲೂ ಸ್ಮಾರ್ಟ್ ಇರಬಹುದು, ಆದರೆ ಆತನ ಯಾವುದೋ ಒಂದು ಗುಣವೇ ಆತನನ್ನು ವಿಲನ್ ಆಗಿಸಿರಬಹುದು ಅನ್ನೋದನ್ನು ನಾವು ತಿಳಿದುಕೊಳ್ಳಬೇಕು.