
ಬೆಂಗಳೂರಲ್ಲಿ ಈ ಕಾರಣಕ್ಕೆ ಬದುಕೋಕೆ ಆಗಲ್ಲ ಎಂದ ನಾರ್ಥಿ ಯುವತಿ: ಕನ್ನಡಿಗರು ಕೊಟ್ಟ ರಿಪ್ಲೈ ವೈರಲ್
ಬೆಂಗಳೂರಿನಲ್ಲಿ ಬಾಡಿಗೆ ಮನೆ ಸಿಗುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೇಡಿಕೆಯು ಕಳೆದ ಐದರಿಂದ ಹತ್ತು ವರ್ಷಗಳ ಅವಧಿಯಲ್ಲಿ ಭಾರೀ ಹೆಚ್ಚಳವಾಗಿದೆ. ಅಲ್ಲದೆ ಬಾಡಿಗೆ ಮನೆ ಸಿಗುವುದು ಇದೀಗ ಭಾರೀ ಸಂಕಷ್ಟವನ್ನು ತಂದೊಡ್ಡಿದೆ. ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಬಾಡಿಗೆ ಮನೆಯು ಮಾಸಿಕ ಕನಿಷ್ಠ 7,000 ರೂಪಾಯಿಯಿಂದ 10,000 ಸಾವಿರ ರೂಪಾಯಿಯ ವರೆಗೆ ಇದೆ. ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಬಾಡಿಗೆ ಮನೆಗಳು ಸಿಗುವುದು ತೀರ ಅಪರೂಪ ಎನ್ನುವಂತಾಗಿದೆ.
ಬೆಂಗಳೂರು ಎಂದರೆ ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ ಮತ್ತು ದುಬಾರಿ ಬಾಡಿಗೆ ಹೆಸರಾದ ನಗರ ಎನ್ನುವಂತೆ ಆಗಿದೆ. ಬೆಂಗಳೂರು ಮಹಾನಗರದಲ್ಲಿ ಬಾಡಿಗೆ ಮನೆ ಸಿಗುವುದು ಸುಲಭದ ಕೆಲಸವಲ್ಲ. ಹೆಚ್ಚಿನ ಭದ್ರತಾ ಠೇವಣಿ (Rent advance amount) ಮತ್ತು ದುಬಾರಿ ಬಾಡಿಗೆಗಳಿಂದ ಬಾಡಿಗೆದಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಯುವತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್‌ವೊಂದು ಇದೀಗ ವೈರಲ್ ಆಗಿದೆ. ಎಲ್ಲರೂ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವುದಿಲ್ಲ, ಎಲ್ಲರೂ ಲಕ್ಷಾಂತರ ರೂಪಾಯಿ ಸಂಪಾದಿಸುವುದಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ದುಬಾರಿ ಬಾಡಿಗೆ ಪಾವತಿ ಮಾಡುವುದು ಹಾಗೂ ದುಬಾರಿ ಮುಂಗಡ ಹಣ ನೀಡುವುದು ಎರಡೂ ಸಹ ಸವಾಲಾಗಿದೆ ಎಂದಿದ್ದಾರೆ. ಇದೀಗ ಈ ಯುವತಿ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ಬೆಂಗಳೂರು ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಲ್ಲವೂ ದುಬಾರಿ ಆಗುತ್ತಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯೂ ಸಹ ದುಬಾರಿ ಆಗಿದೆ. ಬೆಂಗಳೂರಿನಲ್ಲಿ ಮಧ್ಯಮವರ್ಗದವರು ತಮ್ಮ ಆದಾಯದ ಬಹುಪಾಲನ್ನು ಬಾಡಿಗೆಗೇ ಪಾವತಿ ಮಾಡುವಂತೆಯೇ ಆಗಿದೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ 'ನಮ್ಮ ರಾಂಟ್ಸ್' (namma_rants) ಎನ್ನುವ ಖಾತೆಯಿಂದ ಯುವತಿಯೊಬ್ಬರು ಮಾಡಿರುವ ಪೋಸ್ಟ್‌ವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿರುವ ಮನೆ ಮಾಲೀಕರೇ, ಬೆಂಗಳೂರಿನಲ್ಲಿ ನಿಜವಾಗಿಯೂ ಬೆಂಗಳೂರಿಗೆ ಬರುವ ಪ್ರತಿಯೊಬ್ಬರೂ ಐಟಿಯಲ್ಲಿ ಕೆಲಸ ಮಾಡುವುದಿಲ್ಲ ಮತ್ತು ಎಲ್ಲರೂ ಲಕ್ಷ ರೂಪಾಯಿಗಳಲ್ಲಿ ಆದಾಯ ಗಳಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ ವಿಭಿನ್ನ ಕೆಲಸವಿದೆ ಮತ್ತು ಪ್ರತಿಯೊಬ್ಬರಿಗೂ ವಿಭಿನ್ನ ಸಂಬಳವಿದೆ. ಇದನ್ನು ಬೆಂಗಳೂರಿನ ಮನೆ ಮಾಲೀಕರು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು. ಬೆಂಗಳೂರಿನಲ್ಲಿರುವ ಮನೆಯ ಮಾಲೀಕರು ಮನೆಯ "ಬಾಡಿಗೆಯನ್ನು ನಿಗದಿಪಡಿಸುವಾಗ" ಎಲ್ಲರೂ ಲಕ್ಷ ರೂಪಾಯಿಗಳನ್ನು ಗಳಿಸುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಸಿಲಿಕಾನ್ ಸಿಟಿ ಸೇರಿದಂತೆ ಭಾರತದಾದ್ಯಂತ ಹಣದುಬ್ಬರ ಹೆಚ್ಚಾಗಿದೆ ಮತ್ತು ಎಲ್ಲವೂ ಹೆಚ್ಚು ದುಬಾರಿಯಾಗಿದೆ ಎನ್ನುವುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಆದರೆ ಬೆಂಗಳೂರಲ್ಲಿ ಬಾಡಿಗೆ ಮತ್ತು ಭದ್ರತಾ ಠೇವಣಿಗಳು ನಿರಂತರವಾಗಿ ಹೆಚ್ಚುತ್ತಿವೆ. ಇಲ್ಲಿ ಬದುಕುವುದು ಸುಲಭವಲ್ಲ ಅಂತಲೂ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಗಳಿಸುವಷ್ಟೇ ಖರ್ಷು ಸಹ ಇದೆ. ಇಲ್ಲಿ ಎನು ಗಳಿಸುತ್ತಿದ್ದೇವೆ, ವೆಚ್ಚ ಮಾಡುತ್ತಿದ್ದೇವೆ ಹಾಗೂ ಎನು ಉಳಿಸುತ್ತಿದ್ದೇವೆ ಎನ್ನುವುದೇ ತಿಳಿಯದಂತೆ ಆಗಿದೆ. ಗಾರ್ಡನ್ ಸಿಟಿಯಲ್ಲಿ ಬಾಡಿಗೆ ಹೆಚ್ಚಿರುವುದರಿಂದ, ನೀವು ಹಿಂತಿರುಗಿ ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಅರ್ಥವಲ್ಲ ಎಂದಿದ್ದಾರೆ.
Bengaluru Rent: ವೈರಲ್ ಪೋಸ್ಟ್‌ನಲ್ಲಿ ಯುವತಿ ಹೇಳಿರುವುದೇನು ?
ಇನ್ನು ಈ ಯುವತಿಯು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ನಾನು ಯಾವುದೇ ತಪ್ಪು ಮಾಡದಿದ್ದರೂ, ಪಿಜಿ ಮಾಲೀಕರು ನನ್ನ ಅಡ್ವಾನ್ಸ್ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ. ಬಾಡಿಗೆ ಕೂಡ ಕಡಿಮೆ ಇಲ್ಲ. ನನ್ನ ಪರಿಸ್ಥಿತಿ ಬಗ್ಗೆ ಒಂದು ತಿಂಗಳ ಹಿಂದೆಯೇ ಅವರಿಗೆ ತಿಳಿಸಿದ್ದೆ. ಆಗ ಯಾವುದೇ ಮಾಹಿತಿ ನೀಡದೆ, ಈಗ ಪಿಜಿ ಖಾಲಿ ಮಾಡುವಾಗ ತಿಂಗಳ ಮಧ್ಯದಲ್ಲಿ ಖಾಲಿ ಮಾಡುತ್ತಿದ್ದೀರಿ ಎಂಬ ಕಾರಣ ಕೊಡುತ್ತಿದ್ದಾರೆ. ಈ ನಿಯಮವನ್ನು ಅವರು ಮೊದಲೇ ತಿಳಿಸಿರಲಿಲ್ಲ. ನಾನು ಪಾವತಿಸಿರುವ ಮುಂಗಡ ಹಣದ ಮೊತ್ತ ಕಡಿಮೆಯೇನಲ್ಲ. ಹೀಗಾಗಿ, ಆ ಹಣವನ್ನು ಸುಮ್ಮನೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.
View this post on Instagram
A post shared by Namma_rants (@namma_rants)