
Government Employees: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್: GPF ಖಾತೆಯ ಹಣಕ್ಕೆ ಶೇ.7.1 ಬಡ್ಡಿ ನಿಗದಿ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸಾಮಾನ್ಯ ಭವಿಷ್ಯ ನಿಧಿ (GPF) ಖಾತೆಯಲ್ಲಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ. 2026ರ ಜನವರಿ 1ರಿಂದ ಮಾರ್ಚ್ 31ರವರೆಗಿನ ಅವಧಿಗೆ ವಾರ್ಷಿಕ ಶೇ.7.1ರ ಬಡ್ಡಿ ದರ ಅನ್ವಯವಾಗಲಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.
ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ ಈ ಕುರಿತು ಮಾಹಿತಿ ನೀಡಿದ್ದು, ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ GPF ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲೆ ನಿಗದಿತ ಅವಧಿಗೆ ಶೇ.7.1ರ ದರದಲ್ಲಿ ಬಡ್ಡಿ ಲೆಕ್ಕ ಹಾಕಲಾಗುತ್ತದೆ.
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (GPF) ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ಉಳಿತಾಯ ಯೋಜನೆಯಾಗಿದೆ. ಸರ್ಕಾರಿ ನೌಕರರು ತಮ್ಮ ವೇತನದಿಂದ ನಿಗದಿತ ಮೊತ್ತವನ್ನು GPF ಖಾತೆಗೆ ವಂತಿಕೆಯಾಗಿ ಜಮಾ ಮಾಡುತ್ತಾರೆ. ಈ ಹಣಕ್ಕೆ ಸರ್ಕಾರ ನಿಗದಿಪಡಿಸುವ ಬಡ್ಡಿ ದರದಂತೆ ಬಡ್ಡಿ ಸೇರ್ಪಡೆಯಾಗುತ್ತದೆ. ನೌಕರರ ಸೇವಾವಧಿಯಲ್ಲಿ ಈ ಮೊತ್ತ ಸಂಗ್ರಹವಾಗುತ್ತಿದ್ದು, ನಿಯಮಾನುಸಾರ ನಿವೃತ್ತಿಯ ಸಂದರ್ಭದಲ್ಲಿ ಜಮೆಯಾಗಿರುವ ಮೊತ್ತವನ್ನು ಪಡೆಯಲು ಅವಕಾಶವಿರುತ್ತದೆ.
ಶೇ.7.1 ಬಡ್ಡಿ ದರ ಅನ್ವಯ
2026ರ ಜನವರಿ 1ರಿಂದ ಮಾರ್ಚ್ 31ರವರೆಗೆ GPF ಖಾತೆಯಲ್ಲಿನ ಶಿಲ್ಕಿಗೆ ಶೇ.7.1 ವಾರ್ಷಿಕ ಬಡ್ಡಿ ದರ ಅನ್ವಯವಾಗಲಿದೆ. ಇದರಿಂದ ಈ ಅವಧಿಯಲ್ಲಿ GPF ಖಾತೆಯಲ್ಲಿ ಹಣ ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿತ ದರದಲ್ಲಿ ಬಡ್ಡಿ ಲಭ್ಯವಾಗಲಿದೆ. GPF ಮೂಲಕ ಸರ್ಕಾರಿ ನೌಕರರು ದೀರ್ಘಾವಧಿಗೆ ಉಳಿತಾಯ ಮಾಡಬಹುದಾಗಿದ್ದು, ಸೇವಾ ಅವಧಿಯಲ್ಲಿ ಸಂಗ್ರಹವಾಗುವ ಮೊತ್ತವು ನಿವೃತ್ತಿ ನಂತರದ ಆರ್ಥಿಕ ಭದ್ರತೆಗೆ ಸಹಕಾರಿಯಾಗಲಿದೆ.