Gold And Silver Price: ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಳ್ಳಿಯೂ ದುಬಾರಿ,ಇಂದಿನ ದರ ಇಲ್ಲಿದೆ

Gold And Silver Price: ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಳ್ಳಿಯೂ ದುಬಾರಿ,ಇಂದಿನ ದರ ಇಲ್ಲಿದೆ

Gold And Silver Price: ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಳ್ಳಿಯೂ ದುಬಾರಿ,ಇಂದಿನ ದರ ಇಲ್ಲಿದೆ

ಬೆಂಗಳೂರು : ನಿನ್ನೆ ಕೊಂಚ ಇಳಿಕೆಯಾಗಿದ್ದ ಚಿನ್ನದ ಬೆಲೆ ಮಂಗಳವಾರ ಮತ್ತೆ ಏರಿಕೆಯಾಗಿದೆ. ಇಂದು 22 ಕ್ಯಾರಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹290ರಷ್ಟು ಏರಿಕೆಯಾಗಿದ್ದು,13,930ರಿಂದ 14,220ಕ್ಕೆ ತಲುಪಿದೆ. 24 ಕ್ಯಾರಟ್‌ ಚಿನ್ನದ ಬೆಲೆಯೂ ಏರಿಕೆ ಕಂಡಿದ್ದು, ಬೆಳ್ಳಿ ದರವು ಹೆಚ್ಚಳವಾಗಿದೆ.

ಪ್ರಸ್ತುತ ಭಾರತದಲ್ಲಿ 24 ಕ್ಯಾರಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,513 ಇದ್ದರೆ, 22 ಕ್ಯಾರಟ್‌ ಚಿನ್ನದ ಬೆಲೆ 14,220 ಇದೆ. 18 ಕ್ಯಾರಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ 11,635 ಆಗಿದೆ. ಹೀಗಾಗಿ 10 ಗ್ರಾಂ 22 ಕ್ಯಾರಟ್‌ ಚಿನ್ನದ ಬೆಲೆ 1,42,200 ಹಾಗೂ 10 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹1,55,130ಕ್ಕೆ ತಲುಪಿದೆ. ಇನ್ನು ಬೆಳ್ಳಿ ಬೆಲೆಯೂ ಇಂದು ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿ 255 ಇದ್ದರೆ, ಚೆನ್ನೈ ಮತ್ತು ಕೇರಳದಲ್ಲಿ ಪ್ರತಿ ಗ್ರಾಂಗೆ 265 ದರ ಇದೆ. ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ25,500 ಆಗಿದೆ.

ವಿವಿಧ ನಗರಗಳಲ್ಲಿ 22 ಕ್ಯಾರಟ್‌ ಚಿನ್ನದ ದರ

ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ ಹಾಗೂ ಭುವನೇಶ್ವರದಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನದ ಬೆಲೆ 14,220ರಷ್ಟಿದೆ. ದೆಹಲಿ, ಜೈಪುರ ಮತ್ತು ಲಖನೌನಲ್ಲಿ 14,235 ಹಾಗೂ ಅಹ್ಮದಾಬಾದ್‌ನಲ್ಲಿ 14,225 ದರ ದಾಖಲಾಗಿದೆ. ಕಳೆದ ವಾರ ಚಿನ್ನದ ಬೆಲೆ ಒಟ್ಟಾರೆ765ರಷ್ಟು ಏರಿಕೆಯಾಗಿತ್ತು. ಇದೀಗ ಹೊಸ ವಾರದಲ್ಲೂ ಬೆಲೆ ಏರಿಕೆಯ ಹಾದಿಯಲ್ಲಿರುವುದು ಚಿನ್ನ ಖರೀದಿದಾರರ ಗಮನ ಸೆಳೆದಿದೆ.

ಚಿನ್ನ ಮತ್ತು ಬೆಳ್ಳಿ ದರಗಳು ಮಾರುಕಟ್ಟೆ ಪರಿಸ್ಥಿತಿ, ಅಂತಾರಾಷ್ಟ್ರೀಯ ಬೆಲೆ, ತೆರಿಗೆ ಹಾಗೂ ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಬದಲಾಗಬಹುದು. ಆಭರಣ ಖರೀದಿಸುವಾಗ ಮೇಕಿಂಗ್‌ ಚಾರ್ಜ್‌ ಮತ್ತು ಇತರೆ ಶುಲ್ಕಗಳಿಂದ ಅಂತಿಮ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ

ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನ ಪ್ರತಿ ಗ್ರಾಂಗೆ 15,513 ಮತ್ತು 22 ಕ್ಯಾರಟ್‌ ಚಿನ್ನ 14,220 ಇದೆ. ಬೆಳ್ಳಿ ಪ್ರತಿ ಗ್ರಾಂಗೆ 255ರಂತೆ ಮಾರಾಟವಾಗುತ್ತಿದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ

24 ಕ್ಯಾರಟ್‌ ಚಿನ್ನ: 15,513 ರೂ

22 ಕ್ಯಾರಟ್‌ ಚಿನ್ನ: 14,220 ರೂ

18 ಕ್ಯಾರಟ್‌ ಚಿನ್ನ: 11,635 ರೂ

ಬೆಳ್ಳಿ: 255 ಪ್ರತಿ ಗ್ರಾಂ

1 ಗ್ರಾಮ್​ಗೆ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ

ಅಹ್ಮದಾಬಾದ್: 14,225 ರೂ

ಭುವನೇಶ್ವರ್: 14,220 ರೂ

1 ಗ್ರಾಮ್​ಗೆ ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ

gold price silver price hike

gold price silver price hike

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ