
Gen Z: ಮದ್ಯ ಸೇವನೆಯಿಂದ ದೂರ ಸರಿಯುತ್ತಿರುವ ಹೊಸ ತಲೆಮಾರು; ನೋ ಡ್ರಿಂಕ್ಸ್ ಬ್ರೋ ಅಂತಿರೋದ್ಯಾಕೆ ?
Gen Z: ದೇಶದಾದ್ಯಂತ ಈಗ ಎಲ್ಲ ಕ್ಷೇತ್ರಗಳಲ್ಲೂ ಜೆನ್‌ಜೀಯದ್ದೇ ಸದ್ದು. ಜೆನ್‌ಜೀಗಳ ಹೊಸ ಹೋರಾಟದ ನಂತರ ಜೆನ್ ಆಲ್ಫಾ ಮಕ್ಕಳು ಸಹ ಬೀದಿಗೆ ಇಳಿದು ತಮ್ಮ ಹೋರಾಟಗಳಿಗೋಸ್ಕರ ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ಜೆನ್‌ಜೀಯಿಂದ ಮದ್ಯ ಉತ್ಪಾದಿಸುವ ಹಾಗೂ ಮಾರಾಟ ಮಾಡುವ ಕಂಪನಿಗಳು ತಲೆ ಬಿಸಿ ಮಾಡಿಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ. ಕಳೆದ ಕೆಲವು ವರ್ಷಗಳಿಂದಲೂ ಉದ್ಯೋಗ ಕ್ಷೇತ್ರದಲ್ಲಿ ಜೆನ್‌ಜೀ ವಿಷಯಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಗಳು ನಡೆಯುತ್ತಿವೆ.
ಹೌದು ಜೆನ್‌ಜೀ ಹಾಗೂ ಹೊಸ ತಲೆಮಾರು ಮದ್ಯ ಸೇವನೆಯಿಂದ ದೂರ ಸರಿಯುತ್ತಿದ್ದಾರೆ. ಇದರಿಂದ ಮದ್ಯ ಮಾರಾಟ ಕಂಪನಿಗಳಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಮದ್ಯ ಸೇವನೆಯ ಮೂಲಕ ಎಂಜಾಯ್ ಮಾಡುವುದಕ್ಕೂ ಬದಲು ಜೆನ್‌ಜೀಗಳು ತಮ್ಮದೇ ಆದ ಸಂತೋಷದ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇಂದು ಜೆನ್‌ಜೀ ಕಾಣಿಸಿಕೊಳ್ಳುತ್ತಲ್ಲೇ ಇಲ್ಲ. ಹೀಗಾಗಿ, ಮದ್ಯ ಮಾರಾಟದ ಕಂಪನಿಗಳು ಇದೀಗ ಎನರ್ಜಿ ಡ್ರಿಂಕ್ಸ್‌ಗಳ ಕಡೆವಾಲುತ್ತಿವೆ. ಜೆನ್‌ಜೀಗಳು ಎನರ್ಜಿ ಡ್ರಿಂಕ್ಸ್ ಹೆಚ್ಚು ಕುಡಿಯುತ್ತಿದ್ದು, ಇದರ ವಹಿವಾಟಿನ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ. GenZ ಅಥವಾ ಜನರೇಷನ್ Z (ಸರಿಸುಮಾರು 1990ರಿಂದ 2010ರ ನಡುವೆ ಜನಿಸಿದ) ಅವರ ಆಯ್ಕೆಗಳೇನು ಎನ್ನುವುದು ತಿಳಿದುಕೊಳ್ಳುವುದೇ ಕೆಲವು ಕಂಪನಿಗಳಿಗೆ ಕಷ್ಟವಾಗುತ್ತಿದೆ. ಈ ಜನರೇಷನ್ ಮದ್ಯ ಸೇವಿಸಲು ಬಯಸುತ್ತಾರೆಯೇ ಎನ್ನುವುದನ್ನು ಮತ್ತೆ ಲೆಕ್ಕ ಹಾಕಲಾಗುತ್ತಿದೆ.
ಜೆನ್‌ಜೀಗಳು Social Gathering / ಸ್ನೇಹಿತರೆಲ್ಲರೂ ಒಂದೆಡೆ ಸೇರುವುದು ಮದ್ಯ ಸೇವಿಸುವುದು ಈ ಹಿಂದಿನ ತಲೆಮಾರುಗಳಿಗೆ ಹೋಲಿಕೆ ಮಾಡಿದರೆ ಜೆನ್‌ಜೀ ತಲೆಮಾರಿನಲ್ಲಿ ತುಂಬಾ ಕಡಿಮೆಯೇ ಇದೆ. ಜೆನ್ ಜೀ ಜನರೇಷನ್ ಯುವಕ ಮತ್ತು ಯುವತಿಯರು ಬಿಯರ್, ವೈನ್ ಅಥವಾ ಸ್ಪಿರಿಟ್‌ಗಳನ್ನು ಸೇವಿಸುವ ಪ್ರಮಾಣ ತುಂಬಾ ಕಡಿಮೆ ಇದೆ. ಅನೇಕ Gen Z ಜನರೇಷನ್ ಯುವಕರು ತುಂಬಾ ಕಡಿಮೆ ಕುಡಿಯುತ್ತಾರೆ ಅಥವಾ ಇನ್ನೂ ಕೆಲವರು ಯುವಕರು ಮದ್ಯ ಸೇವಿಸುವುದನ್ನು ಸಂಪೂರ್ಣವಾಗಿ ಬಿಟ್ಟಿದ್ದಾರೆ.
Gen Z: ಜೆನ್‌ಜೀಗಳು ಮದ್ಯ ಸೇವನೆಯಿಂದ ಹಿಂದೆ ಸರಿದಿರುವುದಾದ್ಯಕೆ ?
ಇನ್ನು ಜೆನ್‌ಜೀಗಳು ಮದ್ಯ ಸೇವನೆಯಿಂದ ಹಿಂದೆ ಸರಿಯುತ್ತಿದ್ದಾರೆ. ಮುಖ್ಯವಾಗಿ ಜೆನ್ ಜೀ ಜನರೇಷನ್ ಮದ್ಯ ಸೇವನೆ ಮಾಡಿರುವುದನ್ನು ಬಿಡುತ್ತಿರುವುದಕ್ಕೆ ಮುಖ್ಯ ಕಾರಣ ಆರೋಗ್ಯ ಕಾಳಜಿ. ಆರೋಗ್ಯ ಕಾಳಜಿಯ ದೃಷ್ಟಿಯಿಂದ ಹೊಸ ತಲೆಮಾರಿನ ಹಲವು ಯುವಕ ಮತ್ತು ಯುವತಿಯರು ಮದ್ಯ ಸೇವನೆಯಿಂದ ದೂರ ಸರಿದಿದ್ದಾರೆ. ಶೂನ್ಯ-ಆಲ್ಕೋಹಾಲ್ ಅಥವಾ ಮದ್ಯ ಸೇವನೆಗೆ ಬೇಡ ಬ್ರೋ ಎನ್ನುವುದು ಹೊಸ ತಲೆಮಾರಿನ ಮಾತಾಗಿದೆ. ಇದು ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಜೆನ್‌ಜೀಗಳಲ್ಲಿ ಮದ್ಯ ಸೇವನೆ ಕಡಿಮೆಯಾಗಿದೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗ್ಯಾಲಪ್ ಸಮೀಕ್ಷೆಯ ಪ್ರಕಾರ, ಯುವ ವಯಸ್ಕರು (18-34) ಈ ಹಿಂದಿನ ಎರಡು ದಶಕಗಳ ಹಿಂದಕ್ಕೆ ಹೋಲಿಸಿದರೆ ಮದ್ಯ ಸೇವನೆಯ ಪ್ರಮಾಣವು ಯುವಕರಲ್ಲಿ ತುಂಬಾ ಕಡಿಮೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಯಸ್ಕರಲ್ಲಿ ಸುಮಾರು ಶೇ.62% ರಷ್ಟು ಜನರು ಮದ್ಯಪಾನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಮಿಲೇನಿಯಲ್ಸ್‌ಗೆ ಹೋಲಿಕೆ ಮಾಡಿದರೆ, Gen Z ತಲೆಮಾರು ತಲಾ 20% ರಷ್ಟು ಕಡಿಮೆ ಮದ್ಯಪಾನ ಮಾಡುತ್ತಿದ್ದಾರೆ. Gen Zನ ಸುಮಾರು 21.5% ರಷ್ಟು ಜನರು ಆಲ್ಕೋಹಾಲ್ ಸೇವಿಸುವುದಿಲ್ಲ ಮತ್ತು ಶೇ 39% ರಷ್ಟು ಜನರು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಮದ್ಯ ಸೇವನೆ ಮಾಡುತ್ತಾರೆ ಎನ್ನಲಾಗಿದೆ. ಹೀಗಾಗಿ, ಇದೀಗ ಮದ್ಯ ಕಂಪನಿಗಳು ಹಾಗೂ ಕೆಲವು ಎನರ್ಜಿ ಡ್ರಿಂಕ್ಸ್ ಕಂಪನಿಗಳು ಮದ್ಯದ ಬದಲಿಗೆ ಎನರ್ಜಿ ಡ್ರಿಂಕ್ಸ್ ಹಾಗೂ ಸಾಫ್ಟ್ ಡ್ರಿಂಕ್ಸ್ ಉತ್ಪಾದನೆಯಲ್ಲಿ ತೊಡಗಿವೆ ಎಂದು ಹೇಳಲಾಗಿದೆ.