ಚಿಂಚೋಳಿ: ಬರಗಾಲದಲ್ಲೂ ರೈತರ ಕೈಹಿಡಿದ ಬಾಳೆ ಬೇಸಾಯ
ಚಿಂಚೋಳಿ: ಎಲೆಬಳ್ಳಿ ಬೇಸಾಯಕ್ಕೆ ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ದೇಗಲಮಡಿಯ ರೈತರು ಬಾಳೆ ಬೇಸಾಯದತ್ತ ಮುಖ ಮಾಡಿದ್ದು, ಬರಗಾಲದಲ್ಲೂ ಬಾಳೆ ಹೆಚ್ಚಾಗಿ ಬೆಳೆದು ಬಂಪರ್ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಮಳೆಯ ಕೊರತೆ ನಡುವೆಯೂ ಪ್ರಗತಿಪರ ರೈತ ಶಾಮರಾವ್ ಗೌಡನೂರು ಅವರ ಸಮರ್ಪಕ ನಿರ್ವಹಣೆಯಿಂದ ಉತ್ತಮ ಫಲ ಹೊತ್ತು ನಿಂತಿದೆ.
6 ಎಕರೆ ತೋಟದಲ್ಲಿ ಬಾಳೆ ಬೇಸಾಯ ಮಾಡುತ್ತಿರುವ ಶಾಮರಾವ್ ಗೌಡನೂರು ಅವರು ಬೆಂಗಳೂರಿನಿಂದ ಸಸಿಗಳನ್ನು ತಂದು ನೆಟ್ಟು ನಿರ್ವಹಣೆ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸೋಲಾರ ತಂತಿ ಬೇಲಿ ನಿರ್ಮಿಸಿ ಆಗಾಗ ಗೊಬ್ಬರ ಕೊಡುವುದರ ಜತೆಗೆ ರೋಗಗಳ ನಿರ್ವಹಣೆಗಾಗಿ ರಾಸಾಯನಿಕ ಸಿಂಪಡಣೆ ಮಾಡಿ ಸರಿಯಾಗಿ ನಿರ್ವಹಣೆ ಮಾಡಿದ್ದಾರೆ. ನಿರೀಕ್ಷೆಯಂತೆ ಉತ್ತಮ ಫಲ ಹೊತ್ತ ಗಿಡಗಳು ಬೆಳೆಗಾರರ ಕೈ ಹಿಡಿದಿವೆ.
ಚನ್ನಾಗಿ ಬೆಳೆದ ಗಿಡಗಳು ಉರುಳಿ ಬೀಳದಂತೆ ಗಿಡಗಳಿಗೆ ಪ್ಲಾಸ್ಟಿಕ್ ಪ್ಯಾಕಿಂಗ್ ಟೇಪ್ ಬಿಗಿದು ಕಟ್ಟಿದ್ದಾರೆ. ಇದರಿಂದ ಗಿಡಗಳು ನೆಲಕ್ಕುರುಳುವುದು ತಪ್ಪಿಸಿದ್ದಾರೆ.
ಮೇ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿರುಗಾಳಿ ಬೀಸಿದ್ದರಿಂದ ದೇಗಲಮಡಿಯಲ್ಲಿ ಹಲವಾರು ರೈತರ ಬಾಳೆ ಗಿಡಗಳು ಉರುಳಿ ಬಿದ್ದು ಅಪಾರ ನಷ್ಟ ಉಂಟಾಗಿದೆ. ಆದರೆ ಶಾಮರಾವ್ ಗೌಡನೂರು ಅವರ ತೋಟದಲ್ಲಿ 6 ಎಕರೆಯಲ್ಲಿ ಕೇವಲ 10ರಿಂದ 15 ಗಿಡಗಳು ಮಾತ್ರ ಉರುಳಿದ್ದವು.
ನಿರಂತರ ಬೀಸುತ್ತಿರುವ ಒಣಗಾಳಿಯಿಂದ ಬಾಳೆ ಗಿಡಗಳ ಎಲೆಗಳು ಹರಿದು ಹೋಗಿವೆ. ಇದರಿಂದ ಬೆಳೆಯ ಕಾಯಿಗಳು ದಪ್ಪಾಗಲು ಸಮಯ ತೆಗೆದುಕೊಳ್ಳುತ್ತವೆ. ಒಂದು ಗಿಡಕ್ಕೆ ಕನಿಷ್ಠ 15ರಿಂದ18 ಕೆಜಿ ಇಳುವರಿ, ಕೆಜಿಗೆ ₹20 ದರ ಲಭಿಸಿದರೆ ಸುಮಾರು ₹20 ಲಕ್ಷ ಆದಾಯ ದೊರೆಯುವ ಸಾಧ್ಯತೆಯಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-31-136885786
ಚಿಂಚೋಳಿ: ಎಲೆಬಳ್ಳಿ ಬೇಸಾಯಕ್ಕೆ ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ದೇಗಲಮಡಿಯ ರೈತರು ಬಾಳೆ ಬೇಸಾಯದತ್ತ ಮುಖ ಮಾಡಿದ್ದು, ಬರಗಾಲದಲ್ಲೂ ಬಾಳೆ ಹೆಚ್ಚಾಗಿ ಬೆಳೆದು ಬಂಪರ್ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಮಳೆಯ ಕೊರತೆ ನಡುವೆಯೂ ಪ್ರಗತಿಪರ ರೈತ ಶಾಮರಾವ್ ಗೌಡನೂರು ಅವರ ಸಮರ್ಪಕ ನಿರ್ವಹಣೆಯಿಂದ ಉತ್ತಮ ಫಲ ಹೊತ್ತು ನಿಂತಿದೆ.
6 ಎಕರೆ ತೋಟದಲ್ಲಿ ಬಾಳೆ ಬೇಸಾಯ ಮಾಡುತ್ತಿರುವ ಶಾಮರಾವ್ ಗೌಡನೂರು ಅವರು ಬೆಂಗಳೂರಿನಿಂದ ಸಸಿಗಳನ್ನು ತಂದು ನೆಟ್ಟು ನಿರ್ವಹಣೆ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸೋಲಾರ ತಂತಿ ಬೇಲಿ ನಿರ್ಮಿಸಿ ಆಗಾಗ ಗೊಬ್ಬರ ಕೊಡುವುದರ ಜತೆಗೆ ರೋಗಗಳ ನಿರ್ವಹಣೆಗಾಗಿ ರಾಸಾಯನಿಕ ಸಿಂಪಡಣೆ ಮಾಡಿ ಸರಿಯಾಗಿ ನಿರ್ವಹಣೆ ಮಾಡಿದ್ದಾರೆ. ನಿರೀಕ್ಷೆಯಂತೆ ಉತ್ತಮ ಫಲ ಹೊತ್ತ ಗಿಡಗಳು ಬೆಳೆಗಾರರ ಕೈ ಹಿಡಿದಿವೆ.
ಚನ್ನಾಗಿ ಬೆಳೆದ ಗಿಡಗಳು ಉರುಳಿ ಬೀಳದಂತೆ ಗಿಡಗಳಿಗೆ ಪ್ಲಾಸ್ಟಿಕ್ ಪ್ಯಾಕಿಂಗ್ ಟೇಪ್ ಬಿಗಿದು ಕಟ್ಟಿದ್ದಾರೆ. ಇದರಿಂದ ಗಿಡಗಳು ನೆಲಕ್ಕುರುಳುವುದು ತಪ್ಪಿಸಿದ್ದಾರೆ.
ಮೇ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿರುಗಾಳಿ ಬೀಸಿದ್ದರಿಂದ ದೇಗಲಮಡಿಯಲ್ಲಿ ಹಲವಾರು ರೈತರ ಬಾಳೆ ಗಿಡಗಳು ಉರುಳಿ ಬಿದ್ದು ಅಪಾರ ನಷ್ಟ ಉಂಟಾಗಿದೆ. ಆದರೆ ಶಾಮರಾವ್ ಗೌಡನೂರು ಅವರ ತೋಟದಲ್ಲಿ 6 ಎಕರೆಯಲ್ಲಿ ಕೇವಲ 10ರಿಂದ 15 ಗಿಡಗಳು ಮಾತ್ರ ಉರುಳಿದ್ದವು.
ನಿರಂತರ ಬೀಸುತ್ತಿರುವ ಒಣಗಾಳಿಯಿಂದ ಬಾಳೆ ಗಿಡಗಳ ಎಲೆಗಳು ಹರಿದು ಹೋಗಿವೆ. ಇದರಿಂದ ಬೆಳೆಯ ಕಾಯಿಗಳು ದಪ್ಪಾಗಲು ಸಮಯ ತೆಗೆದುಕೊಳ್ಳುತ್ತವೆ. ಒಂದು ಗಿಡಕ್ಕೆ ಕನಿಷ್ಠ 15ರಿಂದ18 ಕೆಜಿ ಇಳುವರಿ, ಕೆಜಿಗೆ ₹20 ದರ ಲಭಿಸಿದರೆ ಸುಮಾರು ₹20 ಲಕ್ಷ ಆದಾಯ ದೊರೆಯುವ ಸಾಧ್ಯತೆಯಿದೆ.
ಚಿಂಚೋಳಿ ತಾಲ್ಲೂಕು ಅರೆ ಮಲೆನಾಡು ಪ್ರದೇಶ. ಪೂರಕ ಹವಾಮಾನದಿಂದ ತೋಟಗಾರಿಕಾ ಬೆಳೆಗಳ ಬೇಸಾಯಕ್ಕೆ ಸೂಕ್ತ
ಸಂತೋಷ ತಾಂಡೂರು, ಹಿರಿಯ ಸಹಾಯಕ ನಿರ್ದೆಶಕರು ತೋಟಗಾರಿಕಾ ಇಲಾಖೆ ಚಿಂಚೋಳಿ