
ಕಲಬುರಗಿ ಶಾಲೆಗಳ ಚಿತ್ರಣ ಬದಲಿಸದ ‘ಪಿಎಂ ಶ್ರೀ’ ಯೋಜನೆ
ಕಲಬುರಗಿ: ಅನುದಾನ ವಿಳಂಬ ಸೇರಿ ವಿವಿಧ ಕಾರಣಗಳಿಗೆ ಕೇಂದ್ರ ಸರ್ಕಾರದ ‘ಪಿಎಂ ಶ್ರೀ’ ಯೋಜನೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಹೀಗಾಗಿ ಜಿಲ್ಲೆಯ ಶಾಲೆಗಳ ಚಿತ್ರಣ ಬದಲಾಗಿಲ್ಲ.
ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ, ಆದರ್ಶ ವಿದ್ಯಾಲಯಗಳು ಸೇರಿ ಒಟ್ಟು 28 ಶಾಲೆಗಳು ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ. ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯಗಳು ಮಾತ್ರ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ.
ರಾಜ್ಯ ಸರ್ಕಾರದ 25 ಪಿಎಂ ಶ್ರೀ ಶಾಲೆಗಳಿಗೆ ಪೂರ್ಣ ಸೌಲಭ್ಯಗಳ ಭಾಗ್ಯ ಇನ್ನೂ ಸಿಕ್ಕಿಲ್ಲ. ಕೆಲ ಶಾಲೆಗಳಲ್ಲಿ ಕಾಂಪೌಂಡ್, ಶುದ್ಧ ಕುಡಿಯುವ ನೀರಿನ ಘಟಕದಂಥ ಕನಿಷ್ಠ ಸೌಕರ್ಯಗಳೂ ಇಲ್ಲದಿರುವುದು ಇದಕ್ಕೆ ನಿದರ್ಶನ.
ಕಲಬುರಗಿ ನಗರದ ಕಪನೂರು ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಮಾರು 420 ವಿದ್ಯಾರ್ಥಿಗಳಿರುವ ಚಿಂಚೋಳಿ ತಾಲ್ಲೂಕಿನ ಪೋಲ ಕಪಳ್ಳಿಯ ಆದರ್ಶ ವಿದ್ಯಾಲಯ, 146 ವಿದ್ಯಾರ್ಥಿಗಳನ್ನು ಹೊಂ ದಿದ ಸೇಡಂ ತಾಲ್ಲೂಕಿನ ಮಳಖೇಡದ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಯಡ್ರಾಮಿ ತಾಲ್ಲೂಕಿನ ಮುರಗಾನೂರು ಪ್ರೌಢಶಾಲೆಯಲ್ಲಿ ಇಂಟ ರ್‌ನೆಟ್, ಸಿಸಿಟಿವಿ ಕ್ಯಾಮೆರಾ, ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ, ನೀರು ಶುದ್ಧೀಕರಣ ಘಟಕ ಹಾಗೂ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ.
ಈ ಯೋಜನೆಗೆ ಒಳಪಟ್ಟ ಇತರ ಶಾಲೆಗಳ ಚಿತ್ರಣವೂ ಇದಕ್ಕೆ ಹೊರತಾಗಿಲ್ಲ.
ಏನಿದು ಯೋಜನೆ?: ಕೆಲ ಶಾಲೆಗಳನ್ನು ಆಯ್ಕೆ ಮಾಡಿ, ಅವುಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿ, ಮಾದರಿಯನ್ನಾಗಿ ರೂಪಿಸಲು ಕೇಂದ್ರ ಸರ್ಕಾರ 2022ರ ಸೆಪ್ಟೆಂಬರ್ 7ರಂದು ಈ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆ ಅಡಿ ಪ್ರಾಥಮಿಕ ಶಾಲೆಗಳಿಗೆ ₹30 ಲಕ್ಷದಿಂದ ₹35 ಲಕ್ಷ ಮತ್ತು ಪ್ರೌಢಶಾಲೆಗಳಿಗೆ ₹1.3 ಕೋಟಿಯವರೆಗೆ ಅನುದಾನ ನೀಡಲಾಗುತ್ತದೆ.
ಕೇಂದ್ರ ಶೇ 60 ಹಾಗೂ ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ನೀಡುತ್ತದೆ. ಇಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ.
ಪ್ರತಿಯೊಂದು ತರಗತಿ ಕೊಠಡಿಯಲ್ಲೂ ಸ್ಮಾರ್ಟ್ ಬೋರ್ಡ್ ಅಳವಡಿಸಲಾಗುತ್ತದೆ. ಗಣಕಯಂತ್ರ, ವಿಜ್ಞಾನ ಪ್ರಯೋಗಾಲಯ, ಸುಸಜ್ಜಿತ ಅಡುಗೆ ಕೋಣೆ, ಸಿಸಿಟಿವಿ ಕ್ಯಾಮೆರಾ, ಕೈ ತೊಳೆದುಕೊಳ್ಳುವ ವ್ಯವಸ್ಥೆ, ಆಟದ ಮೈದಾನ, ಇಂಟರ್‌ನೆಟ್, ನೀರು ಶುದ್ಧೀಕರಣ ಘಟಕ, ಪ್ರತ್ಯೇಕ ಶೌಚಾಲಯ, ಸ್ವಯಂ ರಕ್ಷಣಾ ತರಬೇತಿ, ಸೋಲಾರ್, ಉದ್ಯಾನ, ಗ್ರಂಥಾಲಯ, ಮಳೆ ನೀರು ಸಂರಕ್ಷಣೆ ವ್ಯವಸ್ಥೆ ಸೇರಿ ವಿವಿಧ ಸೌಲಭ್ಯಗಳನ್ನು ಶಾಲೆಗಳಿಗೆ ಒದಗಿಸಲಾಗುತ್ತದೆ.
ಏನೇನು ಸೌಲಭ್ಯಗಳಿರಲಿವೆ?
ಪ್ರತಿಯೊಂದು ತರಗತಿ ಕೊಠಡಿಯಲ್ಲೂ ಸ್ಮಾರ್ಟ್ ಬೋರ್ಡ್ ಅಳವಡಿಸಲಾಗುತ್ತದೆ. ಗಣಕಯಂತ್ರ, ವಿಜ್ಞಾನ ಪ್ರಯೋಗಾಲಯ, ಸುಸಜ್ಜಿತ ಅಡುಗೆ ಕೋಣೆ, ಸಿಸಿಟಿವಿ ಕ್ಯಾಮೆರಾ, ಕೈ ತೊಳೆದುಕೊಳ್ಳುವ ವ್ಯವಸ್ಥೆ, ಆಟದ ಮೈದಾನ, ಇಂಟರ್‌ನೆಟ್, ನೀರು ಶುದ್ಧೀಕರಣ ಘಟಕ, ಪ್ರತ್ಯೇಕ ಶೌಚಾಲಯ, ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ, ಪೌಷ್ಟಿಕ ಕೈತೋಟ, ಸೋಲಾರ್, ಉದ್ಯಾನ, ಗ್ರಂಥಾಲಯ, ಮಳೆ ನೀರು ಸಂರಕ್ಷಣೆ ವ್ಯವಸ್ಥೆ ಸೇರಿ ವಿವಿಧ ಸೌಲಭ್ಯಗಳನ್ನು ಪಿಎಂ ಶ್ರೀ ಶಾಲೆಗಳಿಗೆ ಒದಗಿಸಲಾಗುತ್ತದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-34-1504057047