
ಗಂಗಾ ನದಿ ದಂಡೆಯ ಬಳಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿ ಇಬ್ಬರ ಸಾವು
ಕಾನ್ಪುರ: ಉತ್ತರ ಪ್ರದೇಶದ ಗಂಗಾ ನದಿ ದಂಡೆಯ ಬಳಿ ತರಬೇತಿ ವಿಮಾನವೊಂದು ಪತನಗೊಂಡಿದೆ ಎಂದು ವರದಿಯಾಗಿದೆ.
ಅವಘಡದಲ್ಲಿ ಗುಜರಾತ್ ಮೂಲದ ತರಬೇತುದಾರ ಸಚಿನ್ ಭಾಟಿಯಾ ಮತ್ತು ತರಬೇತಿ ಪಡೆಯುತ್ತಿದ್ದ ಕರ್ನಾಟಕ ಮೂಲದ ಪೈಲಟ್ ಅಭಿಷೇಕ್ ಪೂಜಾರಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಕಮಿಷನರ್ ರಘುಬೀರ್ ಲಾಲ್ ತಿಳಿಸಿದ್ದಾರೆ.
ಗಾರ್ಗ್ ಏವಿಯೇಷನ್ ನಿರ್ವಹಿಸುತ್ತಿದ್ದ ಟೆಕ್ನಾಮ್ ವಿಮಾನವು ಬೆಳಿಗ್ಗೆ 11.30ರ ಸುಮಾರಿಗೆ ಹಾರಾಟ ಆರಂಭಿಸಿದ್ದು, 20 ನಿಮಿಷಗಳ ನಂತರ ಪತನಗೊಂಡಿದೆ ಎಂದು ತಿಳಿದುಬಂದಿದೆ.
ಇಟಲಿ ನಿರ್ಮಿತ ಈ ವಿಮಾನವು ಕಾನ್ಪುರದ ಕತ್ರಿ ಪ್ರದೇಶದ ನಾಥಪುರವಾ ಗ್ರಾಮದ ಬಳಿ ಪತನಗೊಂಡಿದೆ. ಭಾಟಿಯಾ ಅವರು ಸುಮಾರು 3,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು ಎಂದು ಲಾಲ್ ಹೇಳಿದ್ದಾರೆ.
Tags
Nation