ಬಳ್ಳಾರಿ ಜಿಲ್ಲಾ ಉಸ್ತುವಾರಿಯಲ್ಲಿ ಗೊಂದಲ : ರಹೀಂ ಖಾನ್ ಗೆ ಬೇಸರ..!

ಬೆಂಗಳೂರು: ನಿನ್ನೆಯಷ್ಟೇ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಹಾಸನ ಹಾಗೂ ಬಳ್ಳಾರಿಗೆ ಜಿಲ್ಲಾ ಉಸ್ತುವಾರಿಗಳ ನೇಮಕ ಮಾಡಲಾಗಿತ್ತು. ಆದರೆ ಇದೀಗ ಬಳ್ಳಾರಿಯಲ್ಲಿ ಗೊಂದಲದ ಗೂಡಾಗಿದೆ. ಹಾಸನ ಜಿಲ್ಲೆಯ ಉಸ್ತುವಾರಿಯಾಗಿ ಕೆ.ಎನ್ ರಾಜಣ್ಣ ಇದ್ದರು. ಆದರೆ ಅವರ ಸ್ಥಾನಕ್ಕೆ ಸಚಿವ ಕೃಷ್ಣ ಭೈರೇಗೌಡ ಅವರನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಬಳ್ಳಾರಿಗೆ ಪೌರಾಡಳಿತ ಸಚಿವರಾದ ರಹಿಂ ಖಾನ್ ಅವರನ್ನ ನೇಮಕ ಮಾಡಲಾಗಿತ್ತು.

ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ನಾಗೇಂದ್ರ ಅವರಿಂದ ಆ ಸ್ಥಾನ ತೆರವಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಬೇರೆ ಬರ್ತಾ ಇದೆ. ಹೀಗಾಗಿ ನಿನ್ನೆಯಷ್ಟೇ ಆಯೋಜನೆ ಮಾಡಿದ್ದ ಸರ್ಕಾರ ಆದೇಶ ಹೊರಡಿಸಿತ್ತು. ಈಗ ದಿಢೀರ್ ಬದಲಾವಣೆಯಾಗಿದ್ದು, ಜಿಲ್ಲಾ‌ ಉಸ್ತುವಾರಿ ಸಚಿವ ನೇಮಕ ಆದೇಶದಲ್ಲಿ ಗೊಂದಲ ಮಾಡಿಕೊಂಡಿದೆ.

ಬಳ್ಳಾರಿ ಉಸ್ತುವಾರಿ ಸಚಿವರಾಗಿ ರಹೀಂ ಖಾನ್ ನೇಮಕ ರದ್ದಾಗಿದೆ. ನಿನ್ನೆಯಷ್ಟೇ ಸರ್ಕಾರ ಆದೇಶವನ್ನು ನೀಡಿತ್ತು. ಆದರೆ ಈಗ ಹಿಂತೆಗೆದುಕೊಂಡಿದೆ. ಇದರ ನಡುವೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷ್ಣ ಭೈರೇಗೌಡ ಅವರೇ ಮುಂದುವರೆಯಲಿದ್ದಾರೆ. ರಹೀಂ ಖಾನ್ ಸ್ವಾತಂತ್ರ್ಯ ದಿನದ ಧ್ವಜಾರೋಹಣಕ್ಕೆ ಮಾತ್ರ ಸೀಮಿತರಾಗಿರ್ತಾರೆ. ಬಳ್ಳಾರಿ, ವಿಜಯನಗರದ ಉಸ್ತುವಾರಿಯಾಗಿ ಜಮೀರ್ ಅಹ್ಮದ್ ಖಾನ್ ಮುಂದುವರೆಯಲಿದ್ದಾರೆ. ನಿನ್ನೆಯ ನೇಮಕ ರದ್ದು ಮಾಡಿದ್ದು, ಇಂದು ವಾಪಾಸ್ ತೆಗೆದುಕೊಳ್ಳಲಾಗಿದೆ. ಆದರೆ ಹಾಸನದ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷ್ಣ ಭೈರೇಗೌಡ ಅವರು ಮುಂದುವರೆಯಲಿದ್ದಾರೆ. ಈಗ ರಹೀಂ ಖಾನ್ ಅವರಿಗೆ ಸಹಜವಾಗಿಯೇ ನಿರಾಸೆಯಾಗಿರುತ್ತೆ ಎಂದೇ ಅವರ ಬೆಂಬಲಿಗರು ತಿಳಿಯುತ್ತಿದ್ದಾರೆ.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ