
ಪ್ರಕೃತಿಯ ಕೋಪಕ್ಕೆ ನಲುಗಿದ ನೇಪಾಳ: ಕಣ್ಣೀರಿನ ಕಥೆ ಹೇಳುವ ಭೀಕರ ಚಿತ್ರಗಳು
- ಇ-ಪೇಪರ್
- ಜಿಲ್ಲೆ
- ಸುದ್ದಿ
- ಸಿನಿಮಾ ರಂಜನೆ
- ಅಭಿಮತ
- ವಾಸ್ತು-ಜ್ಯೋತಿಷ್ಯ
- ಸಮಗ್ರ ಮಾಹಿತಿ
- ಅಂಕಣಗಳು
- ಕ್ರೀಡೆ
- ವಾಣಿಜ್ಯ
- ತಂತ್ರಜ್ಞಾನ–ಆಟೊಮೊಬೈಲ್
- ಆರೋಗ್ಯ–ಆಹಾರ
- ಶಿಕ್ಷಣ/ಉದ್ಯೋಗ
- ಸಮಾಜ
- ಕಲೆ/ ಸಾಹಿತ್ಯ
- ಕೃಷಿ (ಕೃಷಿ–ಪರಿಸರ)
- ಪ್ರಜಾ ಮತ
- ವೈವಿಧ್ಯ
- AI (ಕೃತಕ ಬುದ್ಧಿಮತ್ತೆ) (AI)
- ಟೆಸ್ಟ್ ಡ್ರೈವ್
- ಟೆಕ್ ಟಿಪ್ಸ್ (ತಂತ್ರಜ್ಞಾನ ಟಿಪ್ಸ್)
- ತಂತ್ರಜ್ಞಾನ ಸುದ್ದಿ
- ವಾಹನ ಲೋಕ
- ವಿಜ್ಞಾನ
- ಸಾದರ ಸ್ವೀಕಾರ (Books)
- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
- ಕಥೆ
- ಕಲೆ
- ಕವಿತೆ
- ಪುಸ್ತಕ ವಿಮರ್ಶೆ
- ಲೇಖನ / ನುಡಿಚಿತ್ರ
- ಸರಸ ಸಂಧಾನ
- ಸಂಸ್ಕೃತಿ
- ಚುನಾವಣೆ ಇನ್ಫೋಗ್ರಾಫಿಕ್ಸ್ (Election Infograph)
- ಅಭ್ಯರ್ಥಿಯ ಜೊತೆ
- ಕೇಳ್ರಪ್ಪೋ ಕೇಳಿ
- ಕ್ಷೇತ್ರ ಪರಿಚಯ
- ಚುನಾವಣಾ ಕದನ ಕಣ
- ಚುನಾವಣಾ ಕರ್ನಾಟಕ
- ಚುನಾವಣಾ ಭಾರತ
- ಚುನಾವಣಾ ವಿಶೇಷ
- ಲೋಕ ಚರಿತ್ರೆ
- PR Spot
- ಉಪಯುಕ್ತ ಯೋಜನೆಗಳು (Government Schemes)
- ಗೃಹಾಲಂಕಾರ
- ಜನಸ್ಪಂದನ
- ನಿಮಗಿದು ಗೊತ್ತೆ?
- ಪ್ರಜಾವಾಣಿ ಕ್ವಿಜ್
- ಪ್ರವಾಸ
- ಭೂಮಿಕಾ
- ಯುವ
ಟಿಬೆಟ್‌ನ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹವು ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟುಮಾಡಿದೆ
ಟಿಬೆಟ್ ಗಡಿಯಿಂದ ರಭಸವಾಗಿ ನುಗ್ಗಿದ ಕೆಸರುಮಿಶ್ರಿತ ನೀರಿನಲ್ಲಿ ಹಿಮಾಲಯದ ತಪ್ಪಲಿನ ಹಲವು ಗ್ರಾಮಗಳು ಕೊಚ್ಚಿಕೊಂಡು ಹೋಗಿವೆ
ಕೆಸರು, ಕಲ್ಲುಗಳು, ಕಟ್ಟಡಗಳ ಅವಶೇಷಗಳೊಂದಿಗೆ ನುಗ್ಗುತ್ತಿರುವ ನೀರು ಭೋಟೆ ಕೋಶಿ ನದಿ ಪಾತ್ರದುದ್ದಕ್ಕೂ ಹಾನಿ ಉಂಟುಮಾಡುತ್ತಿರುವುದು, ದಟ್ಟ ಮಂಜು ಆವರಿಸಿರುವ ದೃಶ್ಯಗಳು ಎದೆಝಲ್ಲೆನಿಸುವಂತಿವೆ
ಇನ್ನೊಂದೆಡೆ ಭೋರ್ಗರೆವ ನೀರು ಕಂಡು ಜನ ಭಯಭೀತರಾಗಿ ಓಡುತ್ತಿರುವ ದೃಶ್ಯಗಳು ಬೆಚ್ಚಿಬೀಳಿಸಿವೆ.
ನೇಪಾಳದ ಲೆಂಡೆ ನದಿಯಲ್ಲಿ ಹಿಮಪಾತದಿಂದ ಉಂಟಾದ ದಿಢೀರ್ ಪ್ರವಾಹವು ಕೆಲವೇ ಕ್ಷಣಗಳಲ್ಲಿ ರಸುವಾ, ನುವಾಕೋಟ್, ಧಾಡಿಂಗ್ ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟು ಮಾಡಿದೆ.
ಮನೆ, ನೆಲೆ ಎಲ್ಲವನ್ನೂ ಕಳೆದುಕೊಂಡ ಜನ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ದಿಕ್ಕೆಟ್ಟಿದ್ದರು.
ತ್ರಿಶೂಲಿ, ಭೋಟೆ ಕೋಶಿ ನದಿಯ ಮೂಲಕ ರಭಸವಾಗಿ ಹರಿದ ಕೆಸರು ಮಿಶ್ರಿತ ನೀರಿನಲ್ಲಿ ಹಲವು ಗ್ರಾಮಗಳು ಕೊಚ್ಚಿಕೊಂಡು ಹೋಗಿವೆ
ನೇಪಾಳ–ಚೀನಾ ಗಡಿಯ ಈಶಾನ್ಯಕ್ಕೆ ಸುಮಾರು 20 ಕಿ.ಮೀ. ದೂರದಲ್ಲಿರುವ ಲೆಂಡೆ ಖೋಲಾ ನದಿಯಲ್ಲಿ ಸಂಭವಿಸಿದ ಹಿಮಪಾತವೇ ಪ್ರವಾಹಕ್ಕೆ ಕಾರಣ ಎನ್ನಲಾಗಿದೆ.
‘ಪ್ರವಾಹವು ಭೀಕರವಾಗಿದೆ. ಅದು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಹಾನಿ ಮಾಡಿರಬಹುದು’ ಎಂದು ನೇಪಾಳ ಪೊಲೀಸ್ ವಕ್ತಾರ ಅಬಿ ನಾರಾಯಣ್ ಕಫ್ಲೆ ಹೇಳಿದ್ದಾರೆ.
ಕೆಸರು ಮಿಶ್ರಿತ ನೀರಿನಲ್ಲಿ ಅನೇಕ ವಾಹನಗಳು ಹೂತುಹೋಗಿದ್ದವು
ಭೋರ್ಗರೆವ ಕೆಸರು ನೀರಿನಿಂದ ಜೀವ ಉಳಿಸಿಕೊಳ್ಳಲು ಜೆಸಿಬಿ ಏರಿ ಹೊರಟ ಜನ
ನದಿ ನೀರಿನ ರಭಸಕ್ಕೆ ಸೇತುವೆಯೊಂದು ಕೊಚ್ಚಿಹೋಗಿ, ಗ್ರಾಮದ ಸಂಪರ್ಕ ಕಡಿತಗೊಂಡಿದೆ
ಕೆಸರು, ಮಣ್ಣು ಮಿಶ್ರಿತ ನೀರು ಹರಿಯುತ್ತಿರುವುದು
ನೇಪಾಳ ಸೇನೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಸೇನೆಯ ವೈದ್ಯಕೀಯ ಸಿಬ್ಬಂದಿ ಸಂತ್ರಸ್ತರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.