ಹೊರ್ಮುಜ್‌ ಜಲಸಂಧಿ: ಇರಾನ್‌–ಒಮಾನ್‌ ಚರ್ಚೆ

ಹೊರ್ಮುಜ್‌ ಜಲಸಂಧಿ: ಇರಾನ್‌–ಒಮಾನ್‌ ಚರ್ಚೆ

ಹೊರ್ಮುಜ್‌ ಜಲಸಂಧಿ: ಇರಾನ್‌–ಒಮಾನ್‌ ಚರ್ಚೆ

ದುಬೈ: ಯುದ್ಧ ಶುರುವಾದ ಆರು ತಿಂಗಳ ನಂತರವೂ ಹೊರ್ಮುಜ್‌ ಜಲಸಂಧಿಯಲ್ಲಿ ಬಹುತೇಕ ಸ್ಥಗಿತಗೊಂಡಿರುವ ಹಡಗುಗಳ ಸಂಚಾರವನ್ನು ಹಂತ–ಹಂತವಾಗಿ ಆರಂಭಿಸುವ ಕುರಿತು ಇರಾನ್‌ ಮತ್ತು ಒಮಾನ್‌ನ ಉನ್ನತ ಮಟ್ಟದ ರಾಜತಾಂತ್ರಿಕ ಅಧಿಕಾರಿಗಳು ಮಂಗಳವಾರ ಚರ್ಚಿಸಿದರು.

ಒಮಾನ್‌ ಕರಾವಳಿಯಲ್ಲಿ ತೈಲ ಟ್ಯಾಂಕರ್‌ ಮೇಲೆ ದಾಳಿ ನಡೆದ ನಂತರ, ಇರಾನ್‌ ನಿಯಂತ್ರಣದ ಜಲಮಾರ್ಗದಲ್ಲಿ ಹಡಗು ಕಂಪನಿಗಳು ಎದುರಿಸುತ್ತಿರುವ ಅಪಾಯ ತಪ್ಪಿಸಲು ಈ ಚರ್ಚೆ ನಡೆದಿದೆ.

ಒಮಾನ್‌ ಮತ್ತು ಇರಾನ್‌ ವಿದೇಶಾಂಗ ಸಚಿವರಾದ ಸಚಿವ ಬದ್ರ್‌ ಅಲ್‌ ಬುಸೈದಿ ಮತ್ತು ಅಬ್ಬಾಸ್‌ ಅರಾಘ್ಚಿ ಅವರು ಹೊರ್ಮುಜ್‌ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ರೂಪರೇಷೆ ರಚಿಸುವ ಕುರಿತು ಚರ್ಚಿಸಿದರು.

‘ಜಂಟಿ ತಾತ್ಕಾಲಿಕ ಸಂಚಾರ ಕಾರಿಡಾರ್‌’ ಬಳಕೆ ಮತ್ತು ಜಲಮಾರ್ಗದ ಅಡ್ಡಿ ನಿವಾರಣೆಗೆ ಶ್ರಮಿಸಲು ನಿರ್ಧರಿಸಲಾಗಿದೆ’ ಎಂದು ಉಭಯ ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಗಾಜಾ ಮೇಲೆ ಇಸ್ರೇಲ್‌ ದಾಳಿ: 4 ಸಾವು

ಗಾಜಾದ ಹಲವು ಪ್ರದೇಶಗಳ ಮೇಲೆ ಇಸ್ರೇಲ್‌ ಮಂಗಳವಾರ ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಗಾಜಾದ ಉತ್ತರದಲ್ಲಿರುವ ನಿರಾಶ್ರಿತರ ಶಿಬಿರ, ವಾಯುವ್ಯ ಮತ್ತು ದಕ್ಷಿಣ ಭಾಗದಲ್ಲಿ ದಾಳಿ ಆಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಸ್ಸಾರ್‌ ಆಸ್ಪತ್ರೆ ಮಾಹಿತಿ ನೀಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-51-2134998903

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ