ಭಾರತ, ಚೀನಾ ಬಯಸಿದರೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಶಮನ: ಹಿಲರಿ ಕ್ಲಿಂಟನ್

ಭಾರತ, ಚೀನಾ ಬಯಸಿದರೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಶಮನ: ಹಿಲರಿ ಕ್ಲಿಂಟನ್

ಭಾರತ, ಚೀನಾ ಬಯಸಿದರೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಶಮನ: ಹಿಲರಿ ಕ್ಲಿಂಟನ್

ನ್ಯೂಯಾರ್ಕ್ (ಪಿಟಿಐ): ಪಶ್ಚಿಮ ಏಷ್ಯಾ ಬಿಕ್ಕಟ್ಟು ಬಗೆಹರಿಸುವಲ್ಲಿ ಭಾರತ ಮತ್ತು ಚೀನಾ ದೇಶಗಳು ಪ್ರಮುಖ ಪಾತ್ರ ವಹಿಸಬಲ್ಲವು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಮಾಜಿ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.

‘ಕಾರ್ಯತಂತ್ರದ ಹಂತದಲ್ಲಿನ ತಪ್ಪು ಕಲ್ಪನೆಗಳ ಕಾರಣಕ್ಕೇ ನಾವು ಇಂದು ಈ ಪರಿಸ್ಥಿತಿಯಲ್ಲಿ ಇದ್ದೇವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ರಾಜತಾಂತ್ರಿಕ ಮಾರ್ಗ ಬಳಸಿಕೊಳ್ಳಲು ಬಯಸುವುದಾದರೆ ಇದೇ ಸೂಕ್ತ’ ಎಂದು ಅವರು ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟರು.

‘ಈ ಸಮಸ್ಯೆಯಿಂದ ಟ್ರಂಪ್ ಹೊರಬರುವುದು ಹೇಗೆ ಎಂದು ಯೋಚಿಸಿದರೆ ಅದಕ್ಕೆ ಉತ್ತರ ಭಾರತ ಮತ್ತು ಚೀನಾ. ಏಕೆಂದರೆ, ಈ ಎರಡು ರಾಷ್ಟ್ರಗಳೇ ಇರಾನ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವುದು’ ಎಂದು ಅವರು ಹೇಳಿದರು.

‘ವಿಶೇಷವಾಗಿ, ಚೀನಾ ಮನಸು ಮಾಡಿದರೆ ಇರಾನ್ ಮೇಲೆ ಒತ್ತಡ ಹೇರಬಲ್ಲದು, ಆದರೆ ಹಾಗೆ ಮಾಡುವುದಿಲ್ಲ. ಅವರು ತಮ್ಮ ಪಳೆಯುಳಿಕೆ ಇಂಧನದ ದಾಸ್ತಾನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಇರಾನ್‌ನ ಅಗತ್ಯ ಇದೆ’ ಎಂದು ಅವರು ಆರೋಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-51-1642513914

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ